ಮಂಜಿಗೆ ನೆನೆಯದ

ಮಂಜಿಗೆ ನೆನೆಯದ ಮೈಯಿದ್ದರೆ ಅದು
ಮೈಯಲ್ಲ
ಕರುಣೆಗೆ ಕರಗದ ಮನವಿದ್ದರೆ ಅದು
ಮನವಲ್ಲ

ಗಾಳಿಗೆ ಅಲುಗದ ಎಲೆಯಿದ್ದರೆ ಅದು
ಎಲೆಯಲ್ಲ
ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು
ಹುಲ್ಲಲ್ಲ

ಹೂವಿಗೆ ಹಾರದ ಭ್ರಮರವಿದ್ದರೆ ಅದು
ಭ್ರಮರವಲ್ಲ
ವಸಂತಕೆ ಚಿಗುರದ ಮರವಿದ್ದರೆ ಅದು
ಮರವಲ್ಲ

ಸಾಗರ ಸೇರದ ನದಿಯಿದ್ದರೆ ಅದು
ನದಿಯಲ್ಲ
ಮೃತ್ಯುಗೆ ಬಾಗದ ಜೀವವಿದ್ದರೆ ಅದು
ಜೀವವಲ್ಲ

ಸತ್ಯಕ್ಕೆ ಸೋಲದ ಅಸತ್ಯವಿದ್ದರೆ ಅದು
ಅಸತ್ಯವಲ್ಲ

ಅನಂತವಾಗಿರದಿದ್ದರೆ ಅದು
ಆಕಾಶವಲ್ಲ
ಜಗದ ಮಾಯೆಗೆ ಬೆರಗಾಗದಿದ್ದರೆ
ಅವ ಸಂತನಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೧
Next post ಶ್ರೀ ಕೃಷ್ಣರಾಜ ರಜತಮಹೋತ್ಸವ ಪ್ರಗಾಥ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…