ವಾಗ್ದೇವಿ – ೧೧

ವಾಗ್ದೇವಿ – ೧೧

ಹೃದಯದಲ್ಲಿ ವಾಗ್ದೇವಿಯ ಬಿಂಬವನ್ನು ಪ್ರತಿಷ್ಠಿಸಿಕೊಂಡು, ಚಂಚಲ ನೇತ್ರರು ದೇವರ ಪೂಜೆಯನ್ನು ತೀರಿಸಿದರು. ಆಜ್ಞೆಗನುಗುಣನಾಗಿ ವಾಗ್ದೇವಿಯು ಬಳಗದೊಡನೆ ತೀರ್ಥಪ್ರಸಾದಕ್ಕೆ ಸಕಾಲದಲ್ಲಿ ಬಂದೊದಗಿ ದಳು. ತೀರ್ಥಪ್ರಸಾದವಾಯಿತು. ರಾತ್ರಿಯೂಟದ ಏರ್ಪಾಟುಮಾಡುವ ನೆವನದ ಮೇಲೆ ಭಾಗೀರಥಿಯು ಗಂಡನನ್ನೂ ಅಳಿಯನನ್ನೂ ಕರಕೊಂಡು ಬಿಡಾರಕ್ಕೆ ಹೋದಳು. ವಾಗ್ದೇವಿಯ ಊಟವು ಮೊದಲೇ ಆಗಿತ್ತು. ವೆಂಕಟ ಪತಿ ಆಚಾರ್ಯನೂ ವಾಗ್ದೇವಿಯೂ ಯತಿಗಳ ಸಮ್ಮುಖದಲ್ಲಿ ನಿಂತುಕೊಂಡಿರು ವಾಗ– “ಏನೇ ವಾಗ್ದೇವಿ! ದೇವರ ಮುಂದೆ ಪ್ರಮಾಣಮಾಡದೆ ಮುಂದಿನ ಪ್ರಸಂಗ ನಡಿಯ ಕೂಡದೆಂಬ ಛಲವನ್ನು ಬಿಡವಲ್ಲೆಯಾ?” ಎಂದು ಚಂಚಲ ನೇತ್ರರು ಪ್ರೇಮಪುರಸ್ಸರ ಪ್ರಶ್ನೆಮಾಡಿದರು.

“ಪರಾಕೆ! ಇಷ್ಟು ಸಣ್ಣ ವಾಗ್ದಾನದ ಪ್ರಸಕ್ತಿಯಲ್ಲಿ ಶ್ರೀಪಾದಂಗಳವರು ನನ್ನ ಮನಸ್ಸಿಗೆ ವಿರೋಧವಾಗಿ ನಡಿಯಬೇಕೆಂಬ ಹಟಹಿಡಿಯುವದು ನೋಡುವಾಗ ಅಬಲೆಯಾದ ನನ್ನ ಮನಸ್ಸಿಗೆ ಹೆಚ್ಚು ಸಂಶಯವಾಗುವದು ಆಶ್ಚರ್ಯವೇ! ಹೆಚ್ಚಿಗೆ ಏನು ಅರಿಕೆಮಾಡಲಿ. ಅಪ್ಪಣೆಯಾದರೆ ಊಟಕ್ಕೆ ಹೋಗುತ್ತೇನೆ. ಮತ್ತೆಲ್ಲ ನಾಳೆ ನೋಡಬಹುದಷ್ಟೆ” ಎಂದು ವಾಗ್ದೇವಿಯು ಪೂಜಾಗೃಹದಿಂದ ಹೊರಗೆ ಹೊರಡಲಿಕ್ಕೆ ಸನ್ನದ್ಧಳಾದಳು.

“ಒಂದೇ ಸರ್ತಿ ಸಿಟ್ಟುಮಾಡಬೇಡ; ಸ್ವಲ್ಪ ಕೂರು” ಎಂದು ಅಪ್ಪಣೆ ಯಾಯಿತು. ಅದಕ್ಕನುಸರಿಸಿ, ವಾಗ್ದೇವಿಯು ಹಾವಾಡಿಗನು ಸರ್ಪಕ್ಕೆ ತಡೆ ಕಟ್ಟುವ ರೀತಿಯಲ್ಲಿ ತನ್ನ ಮೋಹನ ಶಕ್ತಿಯಿಂದ ಚಂಚಲನೇತ್ರರನ್ನು ಸ್ತಬ್ಧ ಮಾಡಿಬಿಟ್ಟಳು.

ಮಠದ ಪಾರುಪತ್ಯಗಾರನನ್ನು ಸಾಕ್ಷಿಯಿಟ್ಟು ವಾಗ್ದೇವಿಯ ಅಪೇಕ್ಷೆ ಯಂತೆ ಪಟ್ಟದ ದೇವರ ಮುಂದೆ ಪ್ರಮಾಣವಾಕ್ಯ ಉಚ್ಚರಿಸಿ, ವಾಗ್ದೇವಿಗೆ ಗಂಡು ಪಿಂಡ ಜನಿಸಿದರೆ ಅವನಿಗೆ ಆಶ್ರಮಕೊಟ್ಟು ತನ್ನ ಉತ್ತರಾಧಿಕಾರಿ ಯಾಗಿ ನೇಮಿಸುವೆನೆಂದು ವಾಚಾದತ್ತಮಾಡಿ– “ಇನ್ನಾದರೂ ನಿನ್ನ ಮನಸ್ಸಿನ ವಿಕಲ್ಪಹೋಯಿತೇ?” ಎಂದು ಚಂಚಲನೇತ್ರರು ಕೇಳಿದರು.

ವಾಗ್ದೇವಿಯು ಅವರ ಪಾದಗಳಿಗೆ ಅಡ್ಡಬಿದ್ದು– “ಸ್ವಾಮೀ! ಕೇವಲ ಮೂಢಳು; ಮತ್ತು ಕಡುಪಾಪಿಷ್ಟಳಾದ ನನ್ನ ತನುವನ್ನು ಶ್ರೀಪಾದಂಗ ಳವರ ಸೇವೆಗೆ ಒಪ್ಪಿಸಿಕೊಟ್ಟಿದ್ದೇನೆ. ಅದನ್ನು ಪವಿತ್ರಮಾಡಬೇಕು” ಎಂದು ಬಹುದೀನಭಾವದಿಂದ ಬೇಡಿಕೊಂಡಳು.

ಸರಿ, ಇಲ್ಲಿ ವಾಗ್ದೇವಿಯ ಪರಿಗ್ರಹವು ಪೂರ್ಣವಾಯಿತು. ಚಂಚಲ ನೇತ್ರರ ಅಪೇಕ್ಷೆಯೂ ವಾಗ್ದೇವಿಯ ಹಟವೂ ವೆಂಕಟಪತಿ ಆಚಾರ್ಯನ ಸಾಧನೆಯೂ ಏಕಪ್ರಕಾರ ನೆರವೇರಿದವು.

ಅಂದಿನಿಂದ ಚಂಚಲನೇತ್ರರ ನಡವಳಿಕೆಯ ರೀತಿಯೇ ಮಾರ್ಪಾಟ ವಾಯಿತು. ಅವರು, “ಯತಿರೂಪದ ಸಂಸಾರಿಕರಾಗಿ ಕ್ಷಣಮಾತ್ರ ವಾಗ್ದೇವಿ ಯನ್ನು ಅಗಲದೆ, ನಾಚಿಕೆಯನ್ನು ನಿಶ್ಶೇಷವಾಗಿ ತೊರೆದುಬಿಟ್ಟು ಕಪಟ ಸನ್ಯಾಸಿ ಎಂಬ ಮರಭಿಧಾನವನ್ನು ಪಡಕೊಂಡರು. ಊರಲ್ಲಿ ಜನರು ತನ್ನ ಕುರಿತು ಏನೇನಾಡುತ್ತಾರೆ? ತಾನು ವಾಗ್ದೇವಿಯ ಮೋಹಜಾಲದಲ್ಲಿ ಸಿಲುಕುವದರ ಮುಂಚೆ ನಡಕೊಳ್ಳುತ್ತಿದ್ದ ಸನ್ಮಾರ್ಗಕ್ಕೂ ಈಗ ನಡಿಯುವ ರೀತಿಗೂ ಏನು ವ್ಯತ್ಯಾಸವಿದೆ? ತನಗೆ ಈಗ ಸದಾಚಾರಿಯನ್ನಬಹುದೋ? ತಾನು ದುರಾಚಾರದಲ್ಲಿ ಮಗ್ನನಾಗಿರುವದು ನಿಜವೋ ಎಂಬ ವಿಚಾರವೇ ಚಂಚಲನೇತ್ರರ ಮನಸ್ಸಿಗೆ ಹೋಗದೆ ಅವರು ಕೇವಲ ಮೂಢಮತಿಯಾ ದದ್ದು ಅವರ ಪೂರ್ವಕರ್ಮದ ದೋಷವೇ. ಮೊದಲು ವೆಂಕಟಪತಿ ಆಚಾ ರ್ಯನು ಯಾವ ವಿಷಯದಲ್ಲಾದರೂ ಆಲೋಚನೆಯನ್ನು ಹೇಳಿದರೆ ಅದರ ಸಾಧಕ ಬಾಧಕ ಮನಸ್ಸಿನಲ್ಲಿ ಚನ್ನಾಗಿ ಮಥಿಸಿ ನೋಡದನಕ ಒಮ್ಮೆಯೇ ಹಾಗಾಗಲೆಂದು ಹೇಳುವದು ಚಂಚಲನೇತ್ರರ ವಾಡಿಕೆಯಾಗಿರಲಿಲ್ಲ. ಸಕಲ ಆದಾಯ ವೆಚ್ಚದಲ್ಲಿಯೂ ತಾನೆ ಸ್ವತಂತ್ರಿಯಾಗಿ ಒಂದು ಆಜ್ಞೆಯನ್ನು ಕೊಟ್ಟು ಅದಕ್ಯನುಸರಿಸಿ ಸೇವಕರೆಲ್ಲರೂ ನಡಿಯಬೇಕಲ್ಲದೆ; ಹಾಗಲ್ಲ ಸ್ಟಾಮಿ, ಹೀಗೆ ಎಂಬ ಬುದ್ಧಿ ಮಾತಾಗಲೀ ವಕ್ರೋಕ್ತಿಯಾಗಲೀ ಹೇಳು ವದು ಯಾವನ ಬುರುಡೆಯಲ್ಲಿಯೂ ಬರೆದಿರಲಿಲ್ಲ.

ಪ್ರಕೃತದ ಪ್ರವರ್ತನೆಯು ಹ್ಯಾಗೆ? ಲೌಕಿಕಕಾರ್ಯಗಳಲ್ಲೆಲ್ಲ ವೆಂಕಟ ಪತಿ ಆಚಾರ್ಯನು ಏನು ಮಾಡಿದರೂ ಯಾರೊಬ್ಬರೂ ಕೇಳುವಹಾಗಿರಲಿಲ್ಲ. ಮಠದ ಪಾರುಪತ್ಯ ಸಮಗ್ರ ಅವನ ಮುಷ್ಟಿಯೊಳಗೆ ಅಡಕವಾಗಿರುವದು. ಪೂಜೆಪುನಸ್ಕಾರವೆಲ್ಲಾ ಯತಿಗಳ ಕೈಯಿಂದಲೇ ನಡಿಯದೆನಿರ್ವಾಹವಿಲ್ಲವಷ್ಟೆ. ಆವಾವ ಕಾಲದಲ್ಲಿ ಆಗಬೇಕಾದ ದೇವತಾ ವಿನಿಯೋಗಗಳು ಸಾಂಗವಾಗಿ ನಡಿಯುವಲ್ಲಿ ಏನೊಂದೂ ಅಡ್ಡಲು ಇದ್ದಹಾಗೆ ಕಾಣುತಿದ್ದಿಲ್ಲ. ಸಣ್ಣ ಹುಡುಗರು ಅರ್ಥ ತಿಳಿಯದೆ ಬಾಯಿಪಾಠ ಹೇಳುವ ರೀತಿಯಲ್ಲಿ ಈ ಯತಿ ಗಳು ಭಕ್ತಿ ವಿರಹಿತವಾದ ಪೂಜೆಯನ್ನು ಆದಷ್ಟು ಬೇಗನೆ ತೀರಿಸಿ, ದೇವರಿಗೆ ಏರಿಸಿದ ಹೂವನ್ನು ಪ್ರಥಮತಾ ಒದ್ದೆ ಅಂಗವಸ್ತ್ರದಲ್ಲಿ ಮುಚ್ಚಿಟ್ಟು ವಾಗ್ದೇವಿ ಗೆ ಅರ್ಪಿಸುವ ಮೊದಲು ತೀರ್ಥಪ್ರಸಾದ ಬೇರೆಯವರಿಗೆ ಸಿಕ್ಕುವದು ದುರ್ಲಭವಾಯಿತು. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುವಂತೆ ಚಂಚಲ ನೇತ್ರರು ತನ್ನ ದುರಾಚಾರದ ಸುದ್ದಿಯು ಯಾರಿಗೂ ಸಿಕ್ಕಲಿಲ್ಲವೆಂಬ ನಂಬಿ ಕೆಯಿಂದ ದುರಂಹಂಕಾರವನ್ನು ತಾಳಿಕೊಂಡು, ಪೂರ್ವಕ್ಕಿಂತಲೂ ಈಗ ಒಂದು ಬಣ್ಣ ಹೆಚ್ಚಾಗಿ ಸದಾಚಾರದಲ್ಲಿರುವವನಂತೆ ತೋರಿಸಿಕೊಳ್ಳಲಿಕ್ಕೆ ಪ್ರಯತ್ನಪಡುವವರಾದರು. ಮಠದಲ್ಲಿರುವ ಚಾಕರರೆಲ್ಲರೂ ಧಣಿಗಳಿಗೆ ಮುಂಚೆನಂತೆ ಹೆದರಿಕೊಂಡು ನಡಿಯುವದು ಕಡಿಮೆಯಾಯಿತು. ಸಣ್ಣಸಣ್ಣ ತಪ್ಪುಗಳನ್ನಾಗಲೀ ತಕ್ಕಮಟ್ಟಗೆ ಬೊಡ್ಡ ತಪ್ಪುಗಳನ್ನಾಗಲೀ ಮಾಡುವ ಸೇವಕರನ್ನು ಚಂಚಲನೇತ್ರರು ಕೆಲಸದಿಂದ ತೆಗೆದು ಬಿಡಲಿಕ್ಕೆ ಅಂಜ ಬೇಕಾಯಿತು. ಯಾಕೆಂದರೆ ತಾನು ಮಾಡಿಕೊಂಡ ಗುಪ್ತಸಂಸಾರದ ವರ್ತ ಮಾನವನ್ನು ಚಾಕರರೇ ಪ್ರಚುರಪಡಿಸಿ, ವಿವಿಧ ಹಾನಿಯನ್ನುಂಟುಮಾಡಿ ಬಿಟ್ಟರೆ ಕಷ್ಟಪಡುವದಾಗುವದೆಂಬ ಭಯವು ಅವರಲ್ಲಿ ಇಂಬು ಗೊಂಡಿತು.

ಮಠದಲ್ಲಿ ತುಂಬಿಟ್ಟ ದ್ರವ್ಯವು ಯಥೇಷ್ಟವಿತ್ತು. ಚಂಚಲನೇತ್ರರ ಗುರುಗಳ ಮತ್ತು ಪರಮಗುರುಗಳ ಕಾಲದಿಂದ ಒಟ್ಟುಮಾಡಿಡೋಣಾದ ವಿತ್ತಕ್ಕೆ ಇವರು ತಾನೇ ಕೂಡಿಸಿಕೊಂಡು ಬಂದದ್ದಲ್ಲದೆ, ಅನಾವಶ್ಯಕ ವೆಚ್ಚ ಮಾಡಿ, ಖಜಾನೆಯನ್ನು ಟೊಳ್ಳುಮಾಡಿರಲಿಲ್ಲ. ವಾಗ್ದೇವಿಯ ಕಾಲು ಮಠಕ್ಕೆ ತಗಲಿದ ಕೂಡಲೇ ನೀರು ತುಂಬಿಟ್ಟ ಕೊಡಪಾನಕ್ಕೆ ತನ್ನಷ್ಟಕ್ಕೆ ರಂಧ್ರವಾಗಿ ನೀರು ಸುರಿದು ಹೋಗುವ ಗತಿಯಾಯಿತು. ಪೇಟೆಯಲ್ಲಿರುವ ಪ್ರಖ್ಯಾತಪಟ್ಟ ಸರಾಫರೆಲ್ಲರೂ ಹಳೇ ನಗಗಳಿಗೆ ಚಂದಾಗಿ ಒಪ್ಪಹಾಕಿಸಿ, ಝಗಮಗವಾಗಿ ಕಣ್ಣಿಗೆ ಶೋಭಿಸುವ ರೀತಿಯಲ್ಲಿ ಒಂದೊಂದನ್ನೇ ತಂದು ಅಂತರಂಗದಲ್ಲಿ ಭಾಗೀರಧಿಗೆ ತೋರಿಸಿದರು. ಅವಳು ಅವುಗಳ ಕ್ರಯ ಮೊದಲಾದ ವಿವರಗಳನ್ನು ತಿಳಿದು ಮಗಳ ಮುಂದೆ ಇಟ್ಟು ಬಿಟ್ಟಾಕ್ಷಣ ತಾಮಸವಿಲ್ಲದೆ ವಾಗ್ದೇವಿಯು ಚಂಚಲನೇತ್ರರಿಂದ ಬೇಕಾದ ಹಣವನ್ನು ಈಸುಕೊಂಡು ಸರಾಫನ ಪೆಟ್ಟಿಗೆಯನ್ನು ತುಂಬಿಸಿಬಿಡುವಳು.

ಎಷ್ಟೋ ವರ್ಷಗಳಂದೆ ಗಿರಾಕಿಗಳಿಲ್ಲದೆ ಮಳೆಗೆಯಲ್ಲಿ ಬಿದ್ದಿರುವ ಊಚು ಸೀರೆಗಳನ್ನು ಬಿಸಿಲಿಗೆ ಹಾಕಿ ಒಣಗಿಸಿ ರೇಷ್ಮೆ ಚೌಕದಲ್ಲಿ ಕಟ್ಟಿ, ನವಾಯಿತರು ಮಠಕ್ಕೆ ಬರುವವರಾದರು. ಭಾಗೀರಥಿಯ ಕಣ್ಣಿಗೆ ಅಂಧಾ ಸೀರೆಗಳು ಬೀಳುವದೇ ತಡ, ನವಾಯಿತರು ಗೆದ್ದರು. ಅವರು ಹೇಳಿದ ಕ್ರಯಕ್ಕೆ ವಾಗ್ದೇವಿಯು ಅವುಗಳನ್ನು ಕೊಂಡುಕೊಂಡು ಚಂಚಲನೇತ್ರರಿಂದ ಕ್ರಯಕೊಡಿಸುವಳು. ಕೇಳಿಕೇಳಿದ ಹಾಗೆ ಹಣಕೊಟ್ಟು ಯತಿಗಳು ಸೊಥೋ ದರು, ವಾಸ್ತವ್ಯ. ಮೊದಲೇ ಧನಾಭಿಲಾಶೆಯಿಂದ ಊಟಪಾಟದಲ್ಲಿಯೂ ಬಹುಮಿತವಾಗಿ ಖರ್ಚುಮಾಡುವ ಆ ಸನ್ಫಾಸಿಯು ವಾಗ್ದೇವಿಯನ್ನು ಮೆಚ್ಚಿಸಿಕೊಳ್ಳುವ ಆಶೆಯಿಂದ. ಹಣದ. ಮೇಲೆ ಮೋಹವಿಡಲಿಲ್ಲ. ಪೂರ್ಣಮಿಯ ಚಂದ್ರನಂತಿರುವ ವಾಗ್ದೇವಿಯ ಮುಖದ ಶೀತಳ ಕಿರಣ ಗಳಿಂದಲೇ ಚಂಚಲನೇತ್ರರ ಚಿತ್ತಾಪಹಾರವಾಗಬೇಕಾದ ಪ್ರಯುಕ್ತ ಅವಳ ಸಿಟ್ಟಿಗೆ ಉತ್ತೇಜನ ಕೊಡಬಹುದಾದ ಯಾವದೊಂದು ಕೃತ್ಯವೂ ಶ್ರೀಪಾದಂಗಳವರ ಮನಸ್ಸಿಗೆ ಒಗ್ಗದು.

ಧನ ಶೋಕವು ಸಣ್ಣವೇ? ಸರ್ವಧಾ ಅಲ್ಲ. ಆದರೂ ಏನು ನಿವೃತ್ತಿ ಯದೆ! ಯಾವ ಶೋಕವಾವರೂ ದಿನೇದಿನೇ ಏರುತ್ತಾ ಬರುವದಾದರೆ ಅದರ ಗೊಡವೆಯನ್ನು ಬಿಡುವದೇ ಲೇಸು. ಸನ್ಯಾಸಿಗೆ ದ್ರವ್ಯದಾಶೆ ಯಾಕೆ? ನಾರಾ ಯಣ ಸ್ಮರಣೆಯೇ ನವವಿಧಿಯಲ್ಲವೇ? ಹಾಗಲ್ಲವಾದರೂ ಪರ್ವಾ ಇಲ್ಲ. ಮಠಕ್ಕೆ ಹಲವು ವಿಧದ ಆದಾಯದ ಮೂಲಗಳವೆ. ಹಣದ ಪೆಟ್ಟಿಗೆಗಳು ರಿಕ್ತವಾದ ಹಾಗೆ ತುಂಬಲಿಕ್ಕೆ ಅಡ್ಡಿ ಇಲ್ಲದಿರುವಾಗ ವಾಗ್ದೇವಿಯು ಬೇಕಾ ದಷ್ಟು ದ್ರವ್ಯ ವೆಚ್ಚಮಾಡಿದರೆ ಹೆದರುವವನ್ಯಾರು? ದ್ರವ್ಯದಾಶೆ ಸನ್ಯಾಸಿಗಾ ಗಲಿ ಗೃಹಸ್ಥನಿಗಾಗಲಿ ಅತಿ ದೊಡ್ಡ ದುರ್ಗುಣವಷ್ಟೇ! ಅಂಥಾ ಅವಗುಣ ವನ್ನು ಅಂಗೀಕರಿಸಿಕೊಳ್ಳಬಹುದೇ ಎಂಬ ಜ್ಞಾನದಿಂದ ಚಂಚಲನೇತ್ರರು ತನ್ನ ಮನಸ್ಸನ್ನು ಒಡಂಬಡಿಸಿಕೊಂಡರು.

ಇನ್ನೇನು ಮಾಡಬಹುದು? ವಾಗ್ದೇವಿಯು ವಾದ್ಯದಿಂದ ಕರತರಲ್ಪಟ್ಟ ಮಾರಿಯಲ್ಲವೇ? ಅವಳ ಒಡನಾಟದ ಸುಖವನ್ನು ಕುಂದಿಲ್ಲದೆ ಅನುಭವಿಸ ಬೇಕಾದರೆ ಪ್ರಾಣತ್ಯಾಗ ಒಂದಲ್ಲದೆ ಬೇರೆ ಯಾವ ನಷ್ಟವಾದರೂ ಸಹಿಸಿ ಕೊಳ್ಳುವುದಕ್ಕೆ ಅಂಜುವ ನರನು ಬರೇ ನಿರ್ಜೀವ ವಸ್ತುವಿಗಿಂತಲೂ ಕಡೆ ಎಂಬ ಹಾಗಿನ ತಾತ್ಪರ್ಯವು ಈ ಸನ್ಯಾಸಿಯ ಮನಸ್ಸಿನಲ್ಲಿ ನೆಲೆಸಿತ್ತು; ಒಂದು ವೇಳೆ ಪೂರ್ವಜನ್ಮದಲ್ಲಿ ಇವಳು ತಾನು ಆರಾಧಿಸಿದ ದೈವತವೋ? ಕೃಪಣತ್ವದಿಂದ ಆರಾಧನೆಯಲ್ಲಿ ನ್ಯೂನಬಂದುಹೋದಕಾರಣ ಆ ಊನ ಪರಿಹರಿಸಿಕೊಂಡು ಸಗುಣರೂಪದಿಂದ ಪ್ರತ್ಯಕ್ಷಳಾದಳೆಂಬ ಭಾವನೆಯಿಂದ ವಾಗ್ದೇವಿಯನ್ನು ಸ್ಟೀಕರಿಸಿಕೊಂಡಾಯಿತು. ಇದರಲ್ಲಿ ಪಾಪವಿರುವುದು ಹ್ಯಾಗೆ? ಹುಚ್ಚರು ಬೇಕಾದ್ದು ಆಡಿಕೊಳ್ಳಲಿ. “ಅಂಡೆ ಬಾಯಿಯಾದರೂ ಕಟ್ಟಬಹುದು ದೊಂಡೆಬಾಯಿ ಕಟ್ಟ ಕೂಡದು” ಎಂಬ ಈ ಸಿದ್ಧಾಂತವು ಯತಿಗಳ ಜ್ಞಾನಚಕ್ಷುವನ್ನು ಮೆಲ್ಲಮೆಲ್ಲನೆ ತೆರೆದುಬಿಟ್ಟಿತು… ಏವಂಚ ತಾನು ವಾಗ್ದೇವೀಹರಣದಿಂದ ಲೋಕಾಪವಾದಕ್ಕಾಗಲೀ ಸಹಿಸಕೂಡದಷ್ಟು ನಷ್ಟ ಅಥವಾ ವ್ಯಾಕುಲಕ್ಕಾಗಲೀ ಆಸ್ಪದ ಕೊಡಲಿಲ್ಲವೆಂಬ ನಿರ್ಧಾರವನ್ನು ಮಾಡಿಕೊಂಡು, ದಿನೇದಿನೇ ಅಮಿತಸುಖವನ್ನನುಭವಿಸುತ್ತಾ ದೇವರನ್ನು ಸಂಪೂರ್ಣ ಮರೆತು ಲೋಕೈಕನಾಥನು ಸೃಷ್ಟಿಸಿದ ಪ್ರಾಣಿಗಳಲ್ಲಿ ತನಗೂ ವಾಗ್ದೇವಿಗೂ ಸದೃತವಾದ ರೂಪವಂತರಾಗಲೀ ಸುಖಿಗಳಾಗಲೀ ಇನ್ನು ಹುಟ್ಟಿ ಬರಬೇಕಿದೆ ಈ ಮೊದಲೇ ಹುಟ್ಟಿದ ಅನ್ಯರಾರಿಲ್ಲವೆಂದು ಚಂಚಲ ನೇತ್ರರು ಬಹಿರಂಗವಾಗಿ ಹೇಳಲಿಕ್ಕೂ ಅಂಜಲಿಲ್ಲ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣದ ಕೈ
Next post ಮಂಜಿಗೆ ನೆನೆಯದ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys