ಗಾಜಿಗಿಂತಲೂ ಹಗುರವಾದ ಪೆಕ್ಸಿಗ್ಲಾಸ್

ಇದೊಂದು ಹೊಸ ಬಗೆಯ ಪಾರದರ್ಶಕ ಗ್ಲಾಸ್. ಸಾಮಾನ್ಯ ಗಾಜಿಗಿಂತಲೂ ಹೆಚ್ಚು ಪಾರದರ್ಶಕವಾಗಿದ್ದು ಇದರ ಮೂಲಕ ಕ್ಷ-ಕಿರಣಗಳು ಸುಲಭವಾಗಿ ಹಾದುಹೋಗಬಲ್ಲವು. ಶಾಖಮಾತ್ರ ಇದರ ಮೂಲಕ ಹಾದುಹೋಗಲಾರದು. ಇದರಲ್ಲಿರಲ್ಲಿ ಕೊರೆಯಬಹುದು. ಹಾಳೆ ಮಾಡಬಹುದು, ಬೇಕಾದ ಕೋನಕ್ಕೆ ತಿರುಗಿಸಬಹುದು, ವೆಲ್ಡ್ ಮಾಡಬಹುದು, ಕ್ಯಾಸ್ಟ್ ಮಾಡಬಹುದು, ಗರಗಸದಿಂದ ಕತ್ತರಿಸಬಹುದು. ಪಂಚ್ ಮಾಡಬಹುದು, ಪಾಲೀಶ್ ಮಾಡಬಹುದು, ಎಲ್ಲ ಬಗೆಯ ಕ್ರಿಯೆಗೂ ಒಗ್ಗಿಕೊಳ್ಳುವ ಈ ಪೆಕ್ಸಿ ಗ್ಲಾಸನ್ನು ತಯಾರಿಸಲು ಅಸಿಟೋನ್, ‘ಹೈಡ್ರೋಸಯನಿಕ್ ಆಮ್ಲ’ ಗಂಧಕಾಮ್ಲ ಮುತ್ತು ಮಧ್ಯಸಾರ (ಅಲ್ಕೋಹಾಲ್)ಗಳನ್ನು ಬಳಸಿ ತಯಾರಿಸಲಾಗುತ್ತದೆ.

ಸಾಮಾನ್ಯ ಗಾಜು ನಿರಯವವಾಗಿದ್ದು ಇದರ ತಯಾರಿಕೆಯಲ್ಲಿ ಸಿಲಿಕಾ ಬಂದರೆ ಮರಳನ್ನು ಉಪಯೋಗಿಸುತ್ತಿದ್ದು ಇದು ಇನ್ ಆರ್ಗ್ಯಾನಿಕ್ ವಸ್ತುವಾಗಿದೆ. ಆದರೆ ಪೆಕ್ಸಿಗ್ಲಾಸು ಸಾವಯವವಾಗಿದೆ.

ಈ ಪೆಕ್ಸಿ ಗ್ಲಾಸ್‌ನಲ್ಲಿ ಹೈಡ್ರೋಸಯನಿಕ್ ಇದ್ಧರೂ ಇದು ವಿಷವಲ್ಲ ಕೃತಕವಾದ ಕಣ್ಣು ಮೂಗು, ಕೈಬೆರಳುಗಳನ್ನು ತಯಾರಿಸಲೂ ಸಹ ಉಪಯೋಗಿಸಲಾಗುತ್ತದ. ಮಾನವ ದೇಹದ ಅಂಗಾಂಗಗಳೊಡನೆ ಸುಲಭವಾಗಿ ಹೊಂದಿಕೊಳ್ಳಬಲ್ಲವಾದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಹೃದಯದ ಕೃತಕ ಕವಾಟಗಳನ್ನು ತಯಾರಿಸಲಾಗುತ್ತದೆ, ಎಂದಾಗ ಇದರ ಅಪರಿಮಿತ ಉಪಯೋಗದ ಅರ್ಥವಾಗುತ್ತದೆ. ಅನೇಕ ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ‘ಮಾದರಿ’ಗಳನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಏಕೆಂದರೆ ಪಾರದರ್ಶಕವಾದ್ದರಿಂದ ಒಳಭಾಗದ ನೋಟವನ್ನು ನೋಡಬಹುದು. ಇದು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯನ್ನು ತಡೆಯಬಲ್ಲದಾದ್ದರಿಂದ ಸಣ್ಣಪುಟ್ಟ ಅಗ್ನಿ ಶಾಖಕ್ಕೆ ಹೆದರಬೇಕಿಲ್ಲ ಸಂಗೀತದ ಉಪಕರಣಗಳನ್ನು ತಯಾರಿಸಲು ಇಂಜಿನಿಯರಿಂಗ್ ಕಾಂಪೊನೆಂಟ್‌ಗಳನ್ನು ತಯಾರಿಸಲು, ಉಪಯೋಗಿಸಬಹುದಲ್ಲದೇ ಈ ಪೆಕ್ಸಿಗ್ಲಾಸು ಕಟ್ಟಡ ನಿರ್ಮಾಣದ ಕಾರ್ಯದಲ್ಲಿಯೂ ಇದರ ಉಪಯೋಗವನ್ನು ಪಡೆಯಲಾಗುತ್ತದೆ. ಇದರ ಮೇಲೆ ನೀರು, ಅಮ್ಲ ಪ್ರತ್ಯಾಮ್ಲಗಳ ಪೆಟ್ರೋಲ್ ಮುಂತಾದ ದ್ರವಗಳು ಏನು ಮಾಡಲಾಗದು. ಗಟ್ಟಿತನದಿಂದಲೂ, ಶುಭ್ರತೆಯಿಂದಲೂ ಬಹು ಉಪಯೋಗಿ ಗುಣಗಳಿಂದಲೂ ಗಾಜಿಗಿಂತಲೂ ಈ ಪೆಕ್ಸಿಗ್ಲಾಸ್ ಹೊಸ ದಾಖಲೆ ಸ್ಥಾಪಿಸಿದೆ.
****************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗಾಗಿದೆ ಮೇಲೇಳೋ ಕೃಷ್ಣಾ
Next post ಪರಿಸರದ ಉಳಿವಿಗೆ ಮಂಗಳೂರಿಗೊಂದು ಓಟ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…