ಬೆಳಗಾಗಿದೆ ಮೆಲೇಳು ಕೃಷ್ಣಾ
ಬಿಸಿಲಿಣುಕಿದೆ ಮೇಲೇಳು
ತೆರೆದಿದೆ ಮನೆಗಳ ಬಾಗಿಲು – ಹಸು ಕರು
ಆಂಭಾ ಎನುತಿದೆ ಏಳು

ಕೇಳಿಸದೇನೋ ಮೊಸರನು ಕಡೆಯುವ
ಗೋಪೀ ಕೈಬಳೆ ಸದ್ದು,
ಆಗಲೆ ಬಾಗಿಲ ಬಳಿಯಲಿ ಗೆಳೆಯರು
ಆಟಕೆ ಹೋಗಲು ಕದ್ದು!

ಮರಗಿಡಬಳ್ಳಿ ಓಲಾಡುತ್ತಿವೆ
ಕಮ್ಮನೆ ಗಾಳಿಯ ಹೀರಿ
ಬರುವನಿನ್ನೇನು ಕ್ಳಷ್ಣ ಎಂದು
ಖುಷಿಯಲಿ ತಲೆಗಳ ತೂಗಿ

ಆ ಕಡೆ ಈ ಕಡೆ ಜಿಗಿದಿವೆ ಕರುಗಳು
ಕೊರಳಿನ ಗಂಟೆ ದನಿಸಿ
ಈಗ ಬರುವ ಹರಿ ಎಂದು – ಹೊರ
ಗೋಡಲು ಬಾಲವ ಕುಣಿಸಿ

ಏಳೋ ಕ್ಟಷ್ಣ ಬೇಗೇಳೋ ಲೋಕವೆ
ಕಾದಿದೆ ನಿನ್ನನು ಕಾಣಲು
ಕಾತರಿಸಿವೆ ಜಡ ಜಂಗಮ ಮೀರಾ
ಗಿರಿಧರನನ್ನು ಕೂಡಲು

*****