ಶಬರಿಕಾದಳಂದು ಶ್ರೀರಾಮ ಬರುವನೆಂದು,
ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು
ಕಾಯುವುದು ಬೇಯುವುದು ಅವರವರ ಕರ್ಮ
ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ.
“ತಾಳಿದವನು ಬಾಳಿಯಾನು” ಎಂಬುದೊಂದು ಗಾದೆ
ತಾಳಿ ತಾಳಿ ಸುಸ್ತಾದವನು ಈಗ ನಾನಾದೆ.
ಯಕ್ಷನಂತೆ ಕಾದೆ ನಿನ್ನ ಸಂದೇಶಕ್ಕಾಗಿ
ಪತ್ರ ಬರದ, ಶಬರಿಯಂತೆ ದುಃಖಿ ನಾನಾಗಿ.
ರಾಮಾಯಣ ಹಳೆಯ ಕಥೆ, ಕಾಲ ಪುರಾತನ,
ಈಗ ಅಣು ಯುಗ-ಜೆಟ್‌ನ ಕಾಲ, ವಿನೂತನ.
ಸಂದೇಶಕೆ ಮೋಡ ಬೇಡ, ಪತ್ರ ತರಲು ಪಕ್ಷಿ ಬೇಡ,
ಪ್ರೇಮ ಪಕ್ಷಿಯ ಸಂದೇಶಕೆ ಕೊನೆ ಮೊದಲೇ ಬೇಡ.
*****
೨೮-೧೨-೧೯೮೩