ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ ಬಿಳೀ ಮೋಡದ್ ಒಳಗೆ! ಇಲೀ ಗಿಲೀ ಆಗಿದ್ರೆ ಹಗಲು ರಾತ್ರಿ ಬಿಡದೆ ಚಕ್ಲಿ ಉ...
ಮಿಣುಕು ಹುಳುಗಳನ್ನು ಹುರಿದು ತಿನ್ನುವ ಇವಳ ಕಟು ಸ್ವಭಾವವೇ, ಅಲ್ಲಿ ಮೂಲೆಯಲ್ಲಿ ಕವಡೆಯಾಡುತ್ತಿರುವವನ ಬೆಳಕು. ***** ಪುಸ್ತಕ: ಲೆವೆಲ್ ಕ್ರಾಸಿಂಗ್...
ಭೂಮಿಯ ಶೇ. ೭೧ ಭಾಗವು ನೀರಿನಿಂದ ಆವರಿಸ್ಪಟ್ಟಿರುವುದರಿಂದ ಈ ನೀರಿನ ಸಂಚಯಗಳೇ ಸಾಗರಗಳಾದವು. ಮಾರುತಗಳು ನೀರಿನಲ್ಲಿ ಅಲೆಗಳನ್ನು ಉಂಟು ಮಾಡುವುದರಿಂದಲೂ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯಿಂದಲೂ ‘ಉಕ್ಕು’ ಮತ್ತು ‘ಕೆಳಭರತ’ಗಳು ಉಂಟಾಗುವುದ...
ತಣ್ಣನೆಯ ಆಕಾಶ, ಚಂದಿರ ಸುತ್ತಲೂ ಹಕ್ಕಿಗಳ ಇಂಚರ ನಗುವ ಹೂ, ಬಳ್ಳಿ, ಮರ ಸಂಕುಲ ನಡುವೆ ಬದುಕುತ್ತಿರುವ ಮನುಕುಲ ಈ ಲೋಕ ಎಷ್ಟೊಂದು ಸುಂದರ ! ಓ ಅಕ್ಕ, ಓ ಅಣ್ಣ ಕಂಡಿರ ? ಕೊಲ್ವ ಭಾಷೆಗಳನ್ನ ಬಿಟ್ಟುಕೊಟ್ಟು ಎಲ್ಲ ಕ್ಷುದ್ರತೆಯಿಂದ ನಿನ್ನನೆತ್ತು ಈ ...
ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ ||ಪ|| ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ ಪ್ರಜೆಗಳಿಂದಲೇ ನಡೆಯಲು ಬೇಕು ಪ್ರಜೆಗಳ ಹೆಸರಲಿ ಕೊಬ್ಬುವ ಜನರನು ಯಾವ ರೀತಿಯಲಿ ಕೊಲಬೇಕು ||೧|| ಓಟಿನ ಮುಂಚಿನ ಸೋಗು ನೋಡಿರೋ ನಮ್ಮನೆ ನಾಯಿಯ ಪರಿಯಂತ...
ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ...
ಲಾಲು ಪ್ರಸಾದ್ ಯಾದವರು ಕರ್ನಾಟಕಕ್ಕೆ ಭೇಟಿ ಇತ್ತಾಗ ಯಾರೋ ಪ್ರಶ್ನೆಹಾಕಿದರು: “ಸಾರ್ ತಾವು ವೆಜಿಟೇರಿಯನ್ನೋ ಅಥವಾ ನಾನ್ ವೆಜಿಟೇರಿಯನ್ನೋ?” ಲಾಲು ಪ್ರಸಾದ್: “ನಾನು ಇಂಡಿಯನ್” ಪ್ರಶ್ನೆಗಾರ: “ಹಾಗಲ್ಲಾ, ತಾವ...
ದೂರವಿರಲಿ ಪ್ರೇಮಿಸಿರುವ ಹೆಣ್ಣು ದೂರವಿದ್ದರೇನೆ ಪ್ರೇಮ ಚೆನ್ನು, ತೀರಾ ಬಳಿ ಬಂದರೆ ತಡೆಯೇ ಇಲ್ಲ ಎಂದರೆ ಸುಟ್ಟು ಬಿಡುವ ಬೆಳಕೀಯುವ ಭಾನು. ಏನು ಚೆಲುವ ದೂರ ನಿಂತ ಚಂದಿರ! ಬರಿಗಣ್ಣಿಗೆ ತಂಬೆಳಕಿನ ಮಂದಿರ, ದುರ್ಬೀನಿನ ನೋಟಕೆ ವಿಜ್ಞಾನಿಯ ಪಾಠಕೆ ...
ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ ಧೂಳು ತುಂಬಿದ ಭಯಾನಕ ಪೊದೆಗಳು ಕಣಿವೆ ಎದೆಗೆ ತಬ್ಬಿದ್ದ ಮುಳ್ಳು ಗೋರಂಟಿಗಳ ಹಳದಿ ಹೂವುಗಳ ತುಂಬ ಜೇಡರ ಬಲೆಗಳು ಹಾರಾಡುತ್ತಿವೆ ಹುಳು ಹುಪ್ಪಡಿಗಳು ಚಿರ್ ಚಿರ್ ಚಿಪ್ ಚಿಪ್ಗೂಡುತ್ತ ಕಂದಕದಾಳಕ್ಕೆ ಬೈನಾಕ್ಯುಲರ್...
ಭೂಮಿಯು ೬೪೦ ಕಿ.ಮೀ.ಗಳ ದಪ್ಪದ ಗಾಳಿಯ ಕವಚದಿಂದ ಸುತ್ತುವರೆದಿದೆ. ಈ ಕವಚವು ಸುಮಾರು ೨೦ ಅನಿಲಗಳಿಂದ ಕೂಡಿದೆ. ಆ ಅನಿಲಗಳಲ್ಲಿ ಸಾರಜನಕ, ಆಮ್ಲಜನಕಗಳು ಹೆಚ್ಚು ಶೇಕಡಾಂಶವನ್ನು ಹೊಂದಿದೆ. ವಾತಾವರಣವಿಲ್ಲದೇ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲು ಸಾಧ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





