ಹಣ್ಣು ಮರಗಳ ಮುಡಿಯಲ್ಲಿ, ಬೇರು? ಅಡಿಯಲ್ಲಿ, ಬಂಗಲೆ ಬೆಚ್ಚನೆ ಬಿಸಿಲಲ್ಲಿ, ಪಾಯ? ತಳದಲ್ಲಿ. ಚಿನ್ನ ದೊಡ್ಡೋರ್ ಮೈಯಲ್ಲಿ, ಅದಿರು? ನೆಲದಲ್ಲಿ. ನದೀ ನೀರು ಬಯಲಲ್ಲಿ ಮರಳು? ತಳದಲ್ಲಿ ಬೇರು ಪಾಯ ಅದಿರು ಮರಳು ಯಾಕೆ ಕಾಣೋಲ್ಲ? ದುಡಿಯೋ ಹಿರಿಯರೆ ಹಾ...
ಶಿವರಾಮರಾಯರು ಹೆಸರಾಂತ ಲಾಯರು, ವ್ಯವಹಾರ ಭೂಮಿಯಲಿ ಕಾಮಧೇನು; ಬೆಟ್ಟಗಲ ಜರತಾರಿಯಂಚಿನ ರುಮಾಲೇನು, ರಟ್ಟೆಯಷ್ಟೇ ಇರುವ ಮೀಸೆಯೇನು! ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು. ಮೈಬಣ್ಣ ಕೆಂಪಿನ ಗುಲಾಬಿಯಂತೆ ; ಸತ್ಯವಂತರಿಗಿವರು ಸುಲಭದಲಿ ಲಾಯರು ಇವರಿ...
ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು ಎನಿತೆನಿತೊ ರಾಜ್ಯಗಳು ಭಷ್ಮವಾದೊ! ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ ತೋರುವುವು ಭಸ್ಮಾಸುರ ಮಹತ್ವವ!! ಯಾರ ಕಾಣಿಪುದೆಂತು, ಯಾರು ನೋಡುವರೆಂತು ಬೆಂದ ಹೃದಯದ ತಾಪ-ಶೂಲಭೂತ! ಜೀವಧಾರಣನಾತ ಭವ್ಯಜೀವ...
ಕೈಲಾಸ ಮರ್ತ್ಯಲೋಕವೆಂಬರು. ಕೈಲಾಸವೆಂದರೇನೋ? ಮರ್ತ್ಯವೆಂದರೇನೋ? ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ. ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ ಕಾಣಿರಯ್ಯ ಎಂಬರು. ಕೈಲಾಸದವರೆ ದೇವರ್ಕಳೆಂಬರು. ಮರ್ತ್ಯಲೋಕದವರೆ ಮಹಾಗಣಂಗಳೆಂಬರು...
ಸ್ವಿಸ್ (Switzerland)ಗೇ ಬಿಗಿ ಬೆಂಗಾವಲಾಗಿರುವ ‘ಆಲ್ಪ್ಸ್’ ಪರ್ವತ ಶ್ರೇಣಿಗಳು ಆಕಾಶದ ಏಕಾಂತದೊಳಗೆ ತನ್ನ ಹಿಮದೊಡಲು ಹರವಿಕೊಂಡು ಪಿಸು ಮಾತಾಡುತ್ತ ಮುತ್ತಿಸುತ್ತಿದೆ. ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ ‘ಜಿನೇವಾ ಸರೋವರ’ ಬಿಸಿಲು ಕಣ್...
ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು ಉಷೆಯಕಡೆ ಕಾಲದಲ್ಲೋಲ ಸಾಗರದಿಂದ ಒಂದಾದಮೇಲೊಂದು ಅಲೆಬಂದು ಅಳಿದಿರಲು ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ! ಹಿಂದೊಂದು ದಿನ ಇಂಥ ರಾತ್ರಿಯಲೆ ನಾನೆನ್ನ ಒಲವಿನಕ...
ಪ್ರಿಯ ಸಖಿ, ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ ದಾರಿ ನೂರಾರಿವೆ ಬೆಳಕಿನರಮನೆಗೆ ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ ಸಾಕು ‘ಇಷ್ಟೇ ಸಾಕು’ ಈ ಸಿದ್ಧಾಂತವೇ ಸರಿ...
“ಯಾರು ನನ್ನ ಚಿನ್ನ ರನ್ನ?” “ನಾನು ನಾನು ನಾನು!” “ಅದನ್ ಸದಾ ಹಾಕ್ಕೊಳ್ಳೋಳು?” “ನೀನು ನೀನು ನೀನು!” “ಯಾರು ನನ್ನ ಕಳ್ಳ ಕೃಷ್ಣ?” “ನಾನು ನಾನು ನಾನು!” &...
ಬಳ್ಳಿಯ ಬೆರಳಲಿ ಹೂವೊಂದಿತ್ತು ಉಂಗುರವಿಟ್ಟಂತೆ. ಹೂವಿನ ತುಟಿಯಲಿ ಹನಿಯೊಂದಿತ್ತು ಮುತ್ತೊಂದಿಟ್ಟಂತೆ. ನೀರಿನ ಹನಿಯೇ ಕಾಮನಬಿಲ್ಲಿನ ಕಂಬನಿಯಾಗಿತ್ತು. ಹೂವಿನ ಸುತ್ತಾ ಹರಡಿದ ಹುಲ್ಲಿನ ಹಸುರಿನ ಹಾಸಿತ್ತು. ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ ಬಾಯ...
ಭೂಮಿಯ ಒಡೆತನ ಒಬ್ಬನಿಗಾಗಲು ಬಾಳಿನ ಬೇಗುದಿ ಒಬ್ಬನಿಗೆ ಐಸಿರಿಯೊಬ್ಬಗೆ ಶರಣಾಗಲು ಇಹ ಲೋಕವೆ ಅಸಮತೆ ಬೀಡಹುದು. ರಾಜನ ಸಂಪದ ಸಿರಿವಂತನ ಗೆಲು ನೋಡುತ ಸಾಸಿರ ಜನವೃಂದ ಬೆರಗಲಿ ಕುಳಿತೂ ತಮ್ಮಯ ಪಾಡನು ನುಂಗುತ ಕರಗುತ ಕಳೆಯುತ್ತ. ಸಾಹಸ ಬಾಳಿಗೆ ದೈವಿಕ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







