ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ ಸಾರುತ್ತಿದ...

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...

ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ? ಕಡ್ಲೀ ಹೊರಿತಿ ನನಗ್ಯೆಯ್ಡ ಕೊಡವೇ? || ೧ || ನಮ್ಮತೆ ಬವ್ದೇ ಅತ್ಯಲ್ ಹೋಗಿದೇ? ಹೂಂಗ್ನ ಮಾಳಕೆ ಹೋಗಿದೇ || ೨ || ಗಂಡ ಯಲ್ಗೆ ಹೋಗ್ಯ? ಹೂಂಗ್ನ ಮಾಳಕೆ ಹೋಗಿನೇ || ೩ || ಮೈದ್ನೆಲ್ಲಿಗ್ ಹೋಗಿನೆ? ಗೆದ್ದೀಯ ಮ...

ಮಜ್ಜಿಗೆ ಹಳ್ಳಿಯಲ್ಲಿಅಶ್ವತ್ಥ ಕಟ್ಟೆಯ ಆಚೆಯ ಮನೆಯೇ ಮಲ್ಲಣ  ನದು. ಅವನು ಏಕನಾದ ಹಿಡಿದು ಊರೂರು ಅಲೆಯುತ್ತದ್ದ  ವನು. ಒಂದು ಸಲ ಆವೂರಿಗೂ ಬಂದ. ಆಗ ಪಟೇಲ್ ಹಿರಿಯನಾಯ   ಕರು ಬದುಕಿದ್ದರು. ಅವನ ತಂದಾನಾ ಪದಗಳಿಗೆ ಮನಸೋತು “ಇಲ್ಲೆ  ಇದ್ದು...

ರಾಮಾ ನಿನ್ನೊಂದು ದರುಶನ ನನಗೆ ತೋರಬಾರದೆ ನನ್ನ ಸಾವಿರ ಜನುಮಗಳ ಪಾಪ ತೊಳೆದು ಹೋಗಲಾರದೆ! ಎಷ್ಟೊತ್ತಿನ ವರೆಗೆ ಹಾಸಿರುವೆ ಭೀಕ್ಷೆಗೆ ಈ ನನ್ನ ಪದರು ನಿನ್ನ ಕೃಪೆ ಸಾಗರ ಹರಿಯದೆ ಖಾಲಿ ಇರುವುದು ನಿನ್ನೆದರು ಜನ್ಮ ಜನ್ಮಗಳಲ್ಲೂ ನಿನ್ನ ಕಾಣದೆ ಆಸೆ ಅ...

ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ ಬಾಯ ಮೂಗು ಮಂಗಮಾಯ ಯಾರದೀ ಹರಕಂಗಿ ಯಾರದೀ ದೊಗಲೆ ಚಡ್ಡ...

ಚಿಕುಹೂ ಚಿಕುಹೂ ಚಿಕುಹೂ- ಸನ್ನೆಯವೊಲು ಮುಹುರ್ಮುುಹು ಆರೆಚ್ಚರಕೀ ತುತ್ತುರಿ ಬಾನೊಳು ಮೊಳಗುತ್ತಿದೆ? ಎನ್ನ ಕಿವಿಯೊಳೀ ಸವಿ ದನಿ ಸಿಂಪಿಸುತಿದೆ ಸೊದೆಸೀರ್ಪನಿ ವಿಸ್ಮೃತಿಗೈದಿರುವಾತ್ಮವ- ನುಜ್ಜೀವಿಪ ತೆರದೆ. ದಿವಮರೆತಪ್ಸರೆ ಎಚ್ಚರೆ ಅಗಲುವಳೆಂದಿಳ...

ಸೂರ್ಯನಿಗೆ ಛತ್ರಿ ಅಡ್ಡಿ ಹಿಡಿದರೇನಂತೆ? ಸೂರ್ಯ ಹುಟ್ಟಲೇ ಇಲ್ಲವೆ? ಎದೆಯಲ್ಲಿ ಮಾನವ ಕಾವ್ಯ ಕೈಯಲ್ಲಿ ಖಡ್ಗ ಹಿಡಿದರೇನು ಮಾನವೀಯತೆ ಮೊಳಗಲಾರದೆ? ನಾಝಿಗಳ ಜೈಲಿನಲ್ಲಿ ಸರಳು ಬಂದಿಖಾನೆಯಲಿ ಎದೆ ಝಲ್ಲೆನಿಸುವ ವಾಸ್ತವಗಳು ಅನುಭವ ಉಲಿಯುತ್ತಿದ್ದಾರೆ...

೧೯೬೩-೧೯೬೪ರಲ್ಲಿ ನಮ್ಮಪ್ಪನ ಹಿಂದಿಂದೆ… ಎರೆಹೊಲ, ಕೆನ್ನೊಲ, ಕಣಗಳಿಗೆ ಸುತ್ತುತ್ತಿದ್ದೆ. ನೂರಾರು ಎಕರೆ ಬರೀ ನವಣೆಯನ್ನೇ ಬೆಳೆಯುತ್ತಿದ್ದರು. ನೂರಾರು ರೈತರು ಕೂಡಾ ಕಡ್ಡಾಯವಾಗಿ ನೂರಾರು ಚೀಲದಿಂದ ಹಿಡಿದು ಕನಿಷ್ಠ ಹತ್ತು ಚೀಲಗಳಾದರೂ ನವ...

1234...9

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....