೧ ನನಗಾಗಿ ನನ್ನದೇ ಒಂದು ಕನ್ನಡಿ ಬೇಕೆಂಬ ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ ಕನ್ನಡಿಯೇ ಇಲ್ಲವೆಂದಲ್ಲ ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ ಅವರಿಗಿಷ್ಟದ ಪಾದರಸ ಇವರಿಗಿಷ್ಟದ ಮಾಪಕ ಅವರಿಗೆ ಬೇಕೆನಿಸಿದಷ್ಟು ಹೊತ್ತು ಕಾಯಿಸಿ ಎರಕ ಹೊಯ್ದು ಕನ್ನಡ...

ಫ್ರಾನ್ಸನ ರಾಜ ಚಾರ್ಲ್ಸ VIನನ್ನು ಸೋಲಿಸಿ ಇಂಗ್ಲೆಂಡಿನ ದೊರೆ ಹೆನ್ರಿ V ಆತನ ಸುಂದರಿಯಾದ ಮಗಳನ್ನು ವಿವಾಹವಾಗುತ್ತಾನೆ. ಅಷ್ಟೇ ಅಲ್ಲ ೧೪೨೦ರ ಟ್ರೋಯ್ಸ ಒಪ್ಪಂದಕ್ಕೆ ಚಾರ್ಲ್ಸ VI ಸಹಿ ಹಾಕುತ್ತಲೂ ಹೆನ್ರಿ V ಚಾರ್ಲ್ಸನ VI ಪುತ್ರ Charles the ...

ಯೇ ಬಸವಾ ಬಸವನಂದಿರೇ ಬಸವನ ಪಾದಕೆ ಸರಣನ್ನಿರೇ ಮೇಲೆ ಮುತ್ತಿನ ಸರಿ (ರ) ಯೋ (ವೋ) ಅದು ನಮ್ಮ ಕಡಲೇ ಪಾಂಡ್ಯದ ಬಸುವಾ || ೧ || ಯೇ ಕರಿಯ ಕೋಲು ಕದ್ದವನೇ ಜಾಣಾ ಸುಗ್ಗಿಯ ಕೋಲ್ ಶಿವ ಭಕ್ತರಾಡೂ ಕೋಲೇ ಹೂವಿನಾ ಕೋಲು ಹುಡಗರಾಡ್ವಾ ಕೋಲು ರನ್ನದೂ ಕೋಲು...

ಸಾವಯವ ಕೃಷಿಯೆಂದರದೊಂದು ಸಂಸ್ಕೃತಿ ಕಾಣಾ ಸಂತೆಯೊಳಂತೆ ಕೊಂಡು ತಿನ್ನುವುದಲ್ಲ ಕೇಳಿ ಮಾಡುವುದಲ್ಲ ಸಾನುರಾಗದಿ ಸಸ್ಯ ಸಂಚಯ ಕಳಿತೊಂದಿಂಚು ಮೇಲ್ಮಣ್ಣಾಗೆ ಸಹಸ್ರ ಮಾನವೆ ಬೇಕಿಂತೊಂದು ಸಂಸ್ಕೃತಿಯು ರೂಪುಗೊಳ್ಳಲಿಕೆ ಸರಸ ಸಮರ ಸಮರಸದ ಸ್ವಾನುಭವ ಸಾವಯ...

ಪರಮ ಪರಮಾನಂದ ಪರಿಮಳ ಲಕ್ಷ ಪಕ್ಷಿಯ ನಗಿಸಿದೆ ಅಂತರಂಗದಿ ವಿಶ್ವರಂಗದ ರಂಗವಲ್ಲಿಯ ಬರೆದಿದೆ ನಗೆ ವಿಮಾನದ ಗಗನ ತುಂಬಿದೆ ಮುಗಿಲು ಮಲ್ಲಿಗೆ ಸುರಿದಿದೆ ದೂರ ಬೆಟ್ಟದ ಶಿಖರ ಕನ್ನಡಿ ಪ್ರೇಮ ಕರ್‍ಪುರ ಬೆಳಗಿದೆ ತಾಯ ಕಣ್ಣಿನ ಕೊಳವು ಶೀತಲ ಹಂಸೆಯಾಗಿ ತೇ...

ಹಾಡುವ ಕೋಗಿಲೆಯೇ ಏಕೀ ಮೌನ ದುಮ್ಮಾನ ಹೊಸ ವರುಷಕೆ ಹೊಸ ಪಲ್ಲವಿಯ ಹೊಸ ತಾನದೆ ಹಾಡು ನೀನು ಮುನಿದ ಮನಗಳ ಬೆಸೆದು ಪ್ರೇಮ ಪಾಶದೆ ಬಿಗಿದು ಒಲವು ಚೆಲುವುಗಳ ಧಾರೆಯೆರೆದು ಎದೆ ತುಂಬಿ ಹಾಡು ನೀನು ಬೆಂದೊಡಲು ತಂಪಾಗಿ ಬವಣೆ ನೀಗಿ ಬದುಕು ಹಸನಾಗಿ ಹೃದಯಗ...

ಉಂಬವರೆಲ್ಲ ಒಂದೇ ಪರಿಯೇ ತಮ್ಮ ತಮ್ಮ ಬಾಯಿಚ್ಛೆಯಲ್ಲದೆ ಇಕ್ಕುವರಂದಕ್ಕೆ ಉಂಡಡೆ ತನಗೇ ಸಿಕ್ಕೆಂದೆ ಮಾರೇಶ್ವರಾ [ಸಿಕ್ಕೆಂದೆ-ತೊಡಕು ಎಂದೆ] ಮಾರೇಶ್ವರೊಡೆಯನ ವಚನ. ಎಲ್ಲರೂ ಒಂದೇ ಬಗೆಯಲ್ಲಿ ಉಣ್ಣುತ್ತಾರೇನು? ಇಲ್ಲ. ಅವರವರ ಬಾಯಿಯ ಇಚ್ಛೆ ಏನನ್ನು,...

(ನನ್ನ ಗೆಳೆಯನೋರ್ವನಿಗೆ ಗಂಡುಮಗು ಹುಟ್ಟಿತೆಂಬ ವಾರ್ತೆ ಕೇಳಿದಾಗ ಬರೆದು ಕಳಿಸಿದುದು.) ೧ ಗಂಡು ಜನಿಸಿತೇನು ಗೆಳೆಯ, ಗಂಡು ಗಂಡಸಾಗಲಿ! ಹಾಲು, ಹಣ್ಣು ಕದ್ದುತಿಂದು ಪುಂಡ ಹುಡುಗನಾಗಲಿ ! ೨ ಶಾಲೆಗವನ ಅಟ್ಟಿ, ಬಿಟ್ಟ, ಮನೆಯ ಪಾಠ ಕಲಿಯಲಿ! ಲತ್ತಿ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....