
ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ –...
ಹಸಿರು ಮರಗಳು ತೇರು ಎಳೆದಿವೆ ಇಗೋ ನೀಲಿಯ ಮುಗಿಲಲಿ ಶಿಖರ ಸಾಲ್ಗಳು ತಬ್ಬಿ ನಿಂದಿವೆ ಅಗೋ ಧಾರೆಯ ಜಲದಲಿ ಮುಗಿಯಲಾರದ ಮುಗಿಲು ಮುಗಿದಿದೆ ಕ್ಷಿತಿಜ ಓಕುಳಿಯಾಡಿದೆ ಸಿಡಿಲು ಘಂಟಾನಾದ ಮೊಳಗಿದೆ ಕಡಲು ಭೂಮಿಯ ತಬ್ಬಿದೆ ಮಿನುಗು ತಾರೆಯ ಗಗನ ನೀರೆಯ ಕೇಶ...
ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್‍ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ ...
೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚೆನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ! ಬಾ! ಹಾರುತೆ ಬಾ! ಬಾ! ೨ ಸರದಲಿಶೋಭ...
ನಿನ್ನ ನೀನು ನಡೆಯೇ ಮನವೆ ನಿನ್ನ ಬಾಳು ಜೇನು ನಿನ್ನ ಕರುಣೆ ಕಮಲದಂತೆ ನಡುವೆ ನೀನು ಅಮರನಂತೆ ಹಸಿರ ಹುಲ್ಲು ಹಾಸಿಗೆಯಂತೆ ಮಲ್ಗೆ ಹೂವು ಘಮ ಘಮದಂತೆ ತಾಯಿ ಒಡಲ ಬಳ್ಳಿ ನೀನು ಬೆಳೆಯ ನೀನು ಬಾಳಿನ ಬೆಳಕು ನಿಂತ ನಿಲುವು ಮಂದಹಾಸ ನಿನ್ನ ಬಾಳ್ವೆ ಸಮರಸ...
ಭಗವದ್ಭಕ್ತಿಯ ಪಡೆಯಲುಬೇಕು ಬಾಳನು ಸಫಲ ಮಾಡಲುಬೇಕು ಇಹ ಸುಖ ವಿಷಯ ರಾಗ ಬಿಡಬೇಕು ಆಧ್ಯಾತ್ಮ ಆನಂದ ಹೊಂದಲೆಬೇಕು ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ ಇಷ್ಟ ದೇವರಿಗೆ ಸದ...
ವಾಗ್ದೇವಿಯ ಮಗನು ದೇಹಪುಷ್ಟಿ ಹೊಂದಿ ವಿದ್ಯಾಭ್ಯಾಸದಲ್ಲಿ ಕೊಂಚ ವಾದರೂ ಮೈಗಳ್ಳತನ ಮಾಡದೆ ಶಾಲಾ ಉಪಾಧ್ಯಾಯನ ಸಿಟ್ಟಿಗೆ ಒಳಗಾ ಗದೆ ಸುಬುದ್ಧಿಯಿಂದ ನಡಕೊಳ್ಳುವದರಿಂದ ತನ್ನ ಭಾಗ್ಯಕ್ಕೆ ಕಡಿಮೆ ಇಲ್ಲ ವೆಂದು ಅವಳು ಸುಖಿಯಾಗಿರುವಾಗ ಅವಳ ತಂದೆತಾಯಿಗಳ...
ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು. ಜೀವಜೀವದ ರೂಪರೂಪದಲಿ ನಾ ಕಾಂಬೆ ನನ್ನದೇ ಮೈಯ ಮತ್ತೊಂದು ಮುಖವು. ನನ್ನ ನೋಡುವ ನೋಟ ನನ್ನದೇ ಕಣ್ಣಾಟ ಎಲ್ಲೆದೆಯ ಮಿಡಿತ ನನ್ನೆದೆಯ ಠಾವು. ನನ್ನ ನರದಲಿ ಹರಿಯುತ...















