ವಾಗ್ದೇವಿ – ೩೦

ವಾಗ್ದೇವಿ – ೩೦

ವಾಗ್ದೇವಿಯ ಮಗನು ದೇಹಪುಷ್ಟಿ ಹೊಂದಿ ವಿದ್ಯಾಭ್ಯಾಸದಲ್ಲಿ ಕೊಂಚ ವಾದರೂ ಮೈಗಳ್ಳತನ ಮಾಡದೆ ಶಾಲಾ ಉಪಾಧ್ಯಾಯನ ಸಿಟ್ಟಿಗೆ ಒಳಗಾ ಗದೆ ಸುಬುದ್ಧಿಯಿಂದ ನಡಕೊಳ್ಳುವದರಿಂದ ತನ್ನ ಭಾಗ್ಯಕ್ಕೆ ಕಡಿಮೆ ಇಲ್ಲ ವೆಂದು ಅವಳು ಸುಖಿಯಾಗಿರುವಾಗ ಅವಳ ತಂದೆತಾಯಿಗಳಿಗುಂಟಾದ ಆಪತ್ತಿನ ದೆಸೆಯಿಂದ ಅವಳು ಹೆಚ್ಚು ದಣಿಯಬೇಕಾಯಿತು. ಯತಿಯ ದಯದಿಂದ ದ್ರವ್ಯಾನುಕೂಲ ಯಥೇಚ್ಛ ಇರುವ ವೇಳೆ ಅವರಿಗುಂಟಾದ ಅಸ್ವಸ್ಥ ನಿವಾರಣೆಗೋಸ್ಕರ ದೊಡ್ಡ ದೊಡ್ಡ ಪಂಡಿತರಿಂದ ಚಿಕಿತ್ಸೆ ಮಾಡಿಸುವದರಲ್ಲಿ ಏನೂ ಸಾವಕಾಶವಾಗಲಿಲ್ಲ ಪರಂತು ವೈದ್ಯರು ಎಷ್ಟು ಶ್ರಮಪಟ್ಟರೂ ಅವರ ಪ್ರಯತ್ನಗಳು ಸಫಲನಾಗುವ ಹೋಲ್ಪೆತೋರದೆ ವಾಗ್ದೇವಿಯು ಚಿಂತೆ ತಾಳುವದಾಯಿತು. ಬಹುಕಾಲ ಬಡತನದ ಕಡು ಕಷ್ಟಗಳನ್ನನುಭವಿಸಿದರೂ ದೈವವಶಾತ್‌ ಚಂಚಲನೇತ್ರರ ಪೂರ್ಣಕೃಪೆಯು ಅವಳ ಮೇಲೆ ಉದಯವಾದಂದಿನಿಂದ ಸುಖಸಂತೋಷ ಪ್ರಾಪ್ತವಾಯಿತು. ಅದನ್ನು ಯಥೇಷ್ಟ ಅನುಭವಿಸಲಿಕ್ಕೆ ಅವಳ ಹೆತ್ತವರಿಗೆ ಪುಣ್ಯವಿಲ್ಲ. ಅವರು ದೀರ್ಘಕಾಲ ಬದುಕಿರುವ ಪರಿತೋಷವನ್ನು ಪಡಿಯುವ ರುಣವು ಅವಳಿಗಿಲ್ಲ ವೆಂಬಂತಾಯಿತು. ಯಾಕಂದರೆ ದಿನಹೋಗುತ್ತಾ ಅವಳ ಮಾತಾಪಿತೃಗಳ ದೇಹಸ್ಸಿತಿಯು ಭಯಂಕರವಾಯಿತು.

ಯಾರಾದರೂ ಅಸ್ವಸ್ಥ ತೂಡಗಿದರೆ ದೈವ ದೇವರ ಉಪಹತಿ ಅಥವಾ ಛಿದ್ರದೋಷ ಇತ್ಯಾದಿ ಬಾಧೆಗಳವೆಯೋ ಎಂದು ನಿಷ್ಕರ್ಷ ಮಾಡುವದಕ್ಕೆ ಜೋಯಿಸನನ್ನು ಕರದು ಪ್ರಶ್ನೆ ನೋಡುವ ಪದ್ಧತಿಯು ಹೆಡ್ಡರಲ್ಲಿ ಬಹಿರಂಗ ವಾಗಿಯೂ ಬುದ್ಧಿವಂತರಲ್ಲಿ ಗುಪ್ತವಾಗಿಯೂ ನಡಿಯುವದುಂಟು. ವಾಗ್ದೇವಿ ಗನಕಾ ದ್ವಿತೀಯ ವರಾಹಮಿಹಿರಾಚಾರ್ಯನೆಂಬಂತೆ ತೋರಿಸಿಕೊಳ್ಳುವ ತಿಪ್ಪಾಶಾಸ್ತ್ರಿಯ ಸಾಮೀಪ್ಯವೇ ದೊರಕಿರುವಾಗ್ಗೆ ಇನ್ನೊಬ್ಬ ಜೋಯಿಸಗೆ ಹುಡುಕಬೇಕೇ? ತಿಪ್ಪಾಶಾಸ್ತ್ರಿಯು ರಾಶಿ ಇಟ್ಟು ಸೂಕ್ಷ್ಮವಾಗಿ ನೋಡಿ “ವೇದವ್ಯಾಸ ಉಪಾಧ್ಯನು ಮಾಟಮಾಡಿಸಿದ ದೆಸೆಯಿಂದ ಇಂಥಾ ಕಷ್ಟ ಬರಲಿಕ್ಕೆ ಕಾರಣವಾಯಿತು. ಅದರ ಬಿಸಾತೇನು! ಒಂದು ಬಲಿತೆಗೆದು ಬಿಟ್ಟರೆ ಆ ಮಾಟಗೀಟ ಎಲ್ಯದೆ? ನೋಡು” ಎಂದು ಪೌರುಷ ಮಾತಾಡಿದನು. ಪಂಚಾಂಗದ ಹಾಳೆಗಳನ್ನು ಆಚೆಗೀಜೆಗೆ ಮಗಚಿ ರೋಗಿಗಳ ಚಂದ್ರತಾರಾ ಬಲ ನೋಡಿದನು. ಮರುದಿನ ರಾತ್ರೆ ಬಲಿತೆಗೆಯುವದಕ್ಕೆ ಕಾಲನಿಶ್ಚಯಿಸಿ ಮಾಟದೇವತೆಯ ಉಚ್ಛಾಟಣೆಯ ಉದ್ದಿಶ್ಯ ಒಂದು ಸಣ್ಣಹೋಮವಿಧಿಯನ್ನು ಸಹ ಸಾಂಗವಾಗಿ ನಡಿಸುವ ಅವಶ್ಯತೋರಿದ ಕಾರಣ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಿದ್ಧಪಡಿಸಿಡುವದಕ್ಕೆ ಸುಮಾರು ನೂರು ರುಪಾಯಿ ವರೆಗೆ ವೆಚ್ಚ ತಗಲುವ ಹಾಗಿನ ಒಂದು ಪಟ್ಟಿಯನ್ನು ಬರಸಿಕೊಟ್ಟನು. ನೇಮಿ ಸಿದ ರಾತ್ರೆ ಭಾರಿ ಅಟ್ಟಹಾಸದಿಂದ ಹೋಮವನ್ನು ಮಾಡಿ ಬಲಿತೆಗೆದನು. ಅವನು ತೊಡಗಿದ ವಿಧಿಯು ಅಂತ್ಯವಾಗಬೇಕಾದರೆ ಭಾಗೀರಥಿಗೆ ಪ್ರಾಣಾಂ ತಿಕವಾಯಿತು. ಅವಳ ಬಾಯಿಗೆ ವಾಗ್ದೇವಿಯು ಬೇಗನೇ ಇಷ್ಟು ನೀರು ಬಿಟ್ಟಳು. ಆಗ್ಗೆನೇ ರೋಗಿಯೊಬ್ಬಳು ಫೈಸಲಾದಳು. ಮಾತೃವಿಯೋಗದ ಸಂತಾಪವೂ ತಿಪ್ಪಾಶಾಸ್ತ್ರಿಯ ವ್ಯಾಜ್ಯವೂ ವಾಗ್ದೇವಿಯ ಸಹನಶಕ್ತಿಗೆ ಮೀರಿ ದವು. ಇವೆರಡನ್ನು ಅಂದು ಕಂಡವರ ಹೃದಯವು ನಿಜವಾಗಿ ಕರಗಿತು. ತಿಪ್ಪಾಶಾಸ್ತ್ರಿಯ ಮುಖವನ್ನು ನೋಡಲಿಕ್ಕೆ ಅವಳಿಗೆ ಮನಸು ಬರಲಿಲ್ಲ. ಅವನಿಗೂ ಕೊಂಚ ನಾಚಿಕೆ ಆದಿಯಲ್ಲಾದರೂ ಕೊನೆಗೆ ಧೈರ್ಯ ಬಂದು ಅನ್ನ ಹೋಗಿ ಗಂಜಿಯಾದ ಮೇಲೆ ತನ್ನನ್ನು ಕರೆದರೆ ಯತ್ನವ್ಯಾವದೂ ನಡೆಯುವ ಹಾಗಿಲ್ಲವಾದರೂ ಕೈಲಾಗುವ ಪ್ರಯತ್ನ ಮಾಡಿದೆನೆಂದು ಡಬ್ಬು ಹಾರಿಸಿಬಿಟ್ಟು ರೋದನ ಮಾಡುವ ವಾಗ್ದೇವಿಯ ಕಣ್ಣೆದುರಿನಿಂದ ಹ್ಯಾಗೂ ತಪ್ಪಿಸಿಕೊಂಡನು.

ಸಾವಿನ ಮನೆಯಲ್ಲಿ ಅಳಾಟಿ ಕಟ್ಲೆಪ್ರಕಾರ ಇತ್ತು ನೆರೆಕರೆಯವರನೇ ಕರು ವಾಗ್ದೇವಿಗೆ ಬಂದ ಕಷ್ಟ ನೋಡಿ ಬಹು ಪಶ್ಚಾತ್ತಾಪ ಪಟ್ಟು ಅವಳಿಗೆ ಹಲವು ತರದಲ್ಲಿ ಸಮಾಧಾನ ಪಡಿಸಿ “ಪ್ರಪಂಚದಲ್ಲಿ ಯಮಬಾಥೆ ಯಾರಿಗೂ ಬಿಡವಲ್ಲದು. ಶೋಕ ಮಾಡಿ ದೇಹದಂಡಿಸಬೇಡ” ಎಂದು ಕೆಲವು ವೃದ್ಧ ಸ್ತ್ರೀಪುರುಷರು ದುಃಖಶಾಂತಿ ಯತ್ನಿಸಿದರು. ಕಡೆಗೆ ಚಂಚಲನೇತ್ರರಿಂದ ಕಳುಹಿಸಲ್ಪಟ್ಟ ವೆಂಕಟಪತಿ ಆಚಾರ್ಯನು ವಾಗ್ದೇವಿಗೆ ಅತಿ ನಯನುಡಿಯಿಂದ ಸಂಕ್ಷೇಪವಾಗಿ ಜ್ಞಾನವನ್ನು ಹೇಳಿ ಅವಳಲ್ಲಿ ವಿವೇಕ ಹುಟ್ಟುವಂತೆ ಪ್ರಯತ್ನ ಮಾಡಿ ಜಯಿಸಿದನು. ಪತ್ನಿಯ ಮರಣವು ಕಠಿಣ ಅಸ್ಪಸ್ಥದಲ್ಲಿರುವ ತಮ್ಮಣ್ಣಭಟ್ಟಗೂ ಕಣ್ಣುಕತ್ತಲೆ ಬರಮಾಡಿತು. ಆ ಮುದುಕನು ಮರುಗು ವದು ನೋಡಿದರೆ ಎಂಥವನ ಎದೆಯು ಉರಿಯದಿರದು! ವೆಂಕಟಪತಿ ಆಚಾ ರ್ಯನೂ ಮಾನುಷಕ ದೇಹದ ಕ್ಷಣಿಕ ಅವಧಿಯ ಕುರಿತು ಚುಟುಕಾದ ಉಪನ್ಯಾಸದ ದ್ವಾರಾ ಅವನಿಗೂ ಅವನ ಪರಿಮುಖ ವಾಗ್ದೇವಿಗೂ ಸಮಾ ಧಾನವಾಗುವಂತೆ ವರ್ತಿಸಿದನು. ಹೆಚ್ಚು ರಾತ್ರೆಯಾಗಗೊಡದೆ ಭಾಗೀರಥಿಯ ದೇಹವನ್ನು ಸ್ಮಶಾನಕ್ಕೆ ವೈದು ಅಗ್ನಿಗೆ ವಪ್ಪಿಸಿ ತೀರಿದ ಮೇಲೆ ಉತ್ತರಕ್ರಿಯೆ ಗಳನ್ನು ಉತ್ತರಾಧಿಕಾರಿಗಳು ನಡಿಸಿದರು. ಹನ್ನೆರಡನೇ ದಿನದ ಪ್ರಸ್ತದೂಟ ವಾಗುವ ಸಮಯದಲ್ಲಿ ಬೀದಿಯಲ್ಲಿ ವಾದ್ಯಘೋಷದಿಂದ ಸಣ್ಣದೊಂದು ಗುಂಪು ಹೋಗುವದು ಕಂಡು ಅದೇನೆಂದು ಯಾರೋ ವಿಚಾರಿಸಿದರು. ವಾರಣಾಸಿಗೆ ಹೋದ ವೇದವ್ಯಾಸ ಉಪಾಧ್ಯನು ಯಾತ್ರೆಯನ್ನು ತೀರಿಸಿ ಕೊಂಡು ಮರಳಿ ಬರುವನೆಂದು ತಿಳದು ಬಂತು. ಈ ವಾರ್ತೆಯು ವಾಗ್ದೇ ವಿಯ ಕಿವಿಗೆ ಕಠೋರವಾಗಿ ಕೇಳಿತು. ಅಲ್ಲಿಯೇ ಅವನಿಗೆ ಮುಕ್ತಿ ದೊರಕಲಿಲ್ಲವೇ ಎಂದು ಆಬಾಚಾರ್ಯನು ಹೇಳಿದ ಮಾತು ಅಲ್ಲಿ ಊಟಕ್ಕೆ ಕೂತವ ರಲ್ಲಿ ಒಬ್ಬನ ಕಿವಿಗೆ ಬಿದ್ದು ಕ್ರಮೇಣ ಅದು ವೇದವ್ಯಾಸ ಉಪಾಧ್ಯ ಕಿವಿಗೆ ಮುಚ್ಚಿತು. ತಾಯಿಗೆ ಹ್ಯಾಗೂ ಮುಕ್ತಿ ಕೊಟ್ಟಿಳಲ್ಲಾ. ತಂದೆಯೊಬ್ಬನು ಶೀಘ್ರಪ್ರಯಾಣಕ್ಕೆ ಅನುನಾಗಿರುವನು. ಗಂಡನೊಬ್ಬನಲ್ಲನೇ ಉಳಿದವರು? ಅವನು ಬೇಗನೇ, ವೈಕುಂಠಯಾತ್ರಿಗೆ ಹೋದರೆ ಕುಂಕುಮದ ಖರ್ಚೆ ಉಳದೀತು. ಆದರೂದೇಹಾಲಂಕಾರಕ್ಕೆ ತುಸಾ ಅಂತರಾಯ ಬಂದೋದೀತು. ಅದೊಂದು ದೊಡ್ಡ ಕೊರತೆಯನ್ನ ಕೂಡದು. ಹೀಗೆಂದು ವೇದವ್ಯಾಸ ಉಪಾ ಧ್ಯನ ಬಾಯಿಯಿಂದ ಹೊರಟ ದುರುಕ್ತಿಗಳನ್ನು ಕೇಳಿದ ಇನ್ನೊಬ್ಬನು ಆ ಪೂರ್ವೋತ್ತರವನ್ನು ವಿಳಂಬ ಮಾಡದೆ ಅಬಾಚಾರ್ಯಗೆ ತಿಳಿಸಿದನು. ಅವನು ತಂತಿಟಪ್ಪಾಲಿನಕಿಂತಲೂ ಹೆಚ್ಚು ವೇಗದಿಂದ ಅದನ್ನು ಪತ್ನಿಯ ಕಿವಿಗೆ ಹಾಕಿಬಿಟ್ಟನು.

ಬಹಳ ದಿವಸಗಳು ಹೋಗಲಿಲ್ಲ. ವೇದವ್ಯಾಸನಾಡಿದ ಮಾತುಗಳು ಚಂಚಲನೇತ್ರರಿಗೆ ಶ್ರುತವಾದವು. “ಇದೇನು ವಿಚಿತ್ರ? ಆ ದುರುಳನು ಸಾರ ಮೇಯನಂತೆ ಬಗಳುವಾಗ ಅವನ ಹಲ್ಲು ಮುರಿಯುವವರ್ಯಾರಿಲ್ಲದೆ ಹೋ ಯಿತೇ? ಕಲಿಯುಗ ಮೀರಿತು” ಎಂದು ಕ್ರೋಧದಿಂದ ಅವರು ಆಡಿದ ನುಡಿಯನ್ನು ಸಮೀಪವಿರುತ್ತಿದ್ದ ವೆಂಕಟಪತಿ ಆಚಾರ್ಯನು ಕೇಳಿ, “ಪರಾಕೆ! ನಾಯಿ ನಮ್ಮ ಕಾಲಿಗೆ ಕಚ್ಚಿದರೆ ನಾಯಿಯ ಕಾಲಿಗೆ ನಾವು ಕಚ್ಚಬಹುದೇ? ಆ ಮರುಳನಿಗೆ ಬುದ್ಧಿಯು ತನ್ನಷ್ಟಕ್ಕೆ ಬಾರದೆ ಹೋಗದು. ಹಿಂದೆ ಕಲಿತ ಬುದ್ಧಿಯು ಈಗ ಮರವೆಗೆ ಬಂದಿದೆ. ಮುಂದೆ ಹ್ಯಾಗಾಗುತ್ತದೊ ನೋಡಲಿ ಕ್ಳುಂಟು? ಎಂದು ಸಮಜಾಯಿಸಿ ಹೇಳಿದನು. ಚಂಚಲನೇತ್ರರಿಗೆ ಆ ಪ್ರತಿ ವಚನವು ಸಮ್ಮತವಾಯಿತು. ಆದರೂ ವೇದವ್ಯಾಸನ ಮೇಲಿನ ದ್ವೇಷವು ಮತ್ತಷ್ಟು ಹೆಚ್ಚಿತು. ಮತ್ತು ಮುಯ್ಯಿಗೆ ಮುಯ್ಯಿ ತೀರಿಸುವ ಸಂದರ್ಭ ಬೇಗ ಒದಗಿದರೆ ಆಗಬಹುದೆಂಬ ಆಕೆಯು ಅವರಲ್ಲಿ ಹುಟ್ಟತು.

ಒಂದಾನೊಂದು ದಿನ ವಾಗ್ದೇವಿಯು ಅಂಜನೇಯಾಲಯದ ಸಮಾಪ ವಿರುವ ಕೆರೆಯ ಬಳಿಗೆ ಹೋದಳು. ಅಲ್ಲಿ ವೇದವ್ಯಾಸ ಉಪಾಧ್ಯನ ಹೆಂಡತಿ ಸುಶೀಲಾಬಾಯಿಯು ಬಂದಿದ್ದಳು. ಅವಳು ಸ್ಥಾನ ಮಾಡಿಕೊಂಡು ಒಂದು ಕಡೆಯಲ್ಲಿ ನಿಂತಿರುವಾಗ ವಾಗ್ದೇವಿಯು ಸ್ನಾನಕ್ಕೆ ಕೆರೆಗೆ ಇಳಿದಳು. ಆಕಸ್ಮಾ ತ್ತಾಗಿ ಸುಶೀಲಾಬಾಯಿಯ ಮೈಮೇಲೆ ನೀರು ಸಿಡೀತು. ಅವಳಿಗೆ ಕೊಂಚ ಸಿಟ್ಟು ಬಂದರೂ ಅವಳು ಅದನ್ನು ನುಂಗಿ ಬಿಟ್ಟು ಪುನಃ ಕೆರೆಗೆ ಇಳಿದು ಸ್ಪಾನಮಾಡುವದನ್ನು ನೋಡಿ ವಾಗ್ದೇವಿಯು ರೋಷವನ್ನುತಾಳಿ, “ಓಹೋ! ಇವಳ ಶುದ್ಧ ಮುದ್ರಿಕೆ ಭಾರಿ. ಮೈಮೇಲೆ ರವಷ್ಟು ನೀರು ಸಿಡದರೆ ಇಷ್ಟು ಡಂಭಾಚಾರ ಮಾಡಬೇಕೇ”ಎಂದು ಜರೆದಳು. ಮತ್ತೇನು! ಅವರಲ್ಲಿ ಸಂವಾ ದಕ್ಕೆ ಆಸ್ಪದವಾಯಿತು.

ಸುಶೀಲಾಬಾಯಿ–“ಅವ್ವಾ! ಸಿಟ್ಟು ಮಾಡಿಕೋಬ್ಯಾಡ. ನನ್ನ ಶುದ್ಧ ಮುದ್ರಿಕೆ ಹಾಗಿರಲಿ. ನಾನು ಎಷ್ಟಾ ವರ್ತಿ ಸಾನ ಮಾಡಿದಾಗ್ಯೂ ನಿನಗೆ ಬಂದ ಕಷ್ಟವೇನು? ನನ್ನ ಡಂಭಾಚಾರದಿಂದ ನಿನಗೇನು ನಷ್ಟ?”

ವಾಗ್ದೇವಿ– “ಸಾಕು ಸಾಕು! ನಿನ್ಫ ಸ್ವರೂಪವೆಲ್ಲ ಗೊತ್ತಿದ್ದದ್ದೇ, ಬಹಳ ಹಾರ್ಯಾಡ ಬೇಡ.”

ಸುಶೀಲಾಬಾಯಿ–“ನನ್ನ ಸ್ವರೂಪವೊ ನಿನ್ನ ಸ್ಪರೂಪವೂ ಎಲ್ಲರಿಗೆ ಗೊತ್ತಿದೆ. ಹಾರ್ಯಾಡುವುದು ನಾನೋ ನೀನೊ? ಗ್ರಹಿಸದೆ ಮಾತಾಡಬೇಡ.”

ವಾಗ್ದೇವಿ-“ಸೆರೆಮನೆಯಲ್ಲಿ ಕೂತ ಗಂಡನ ಹೆಂಡತಿ ನೀನೇ ಅಲ್ಲವೋ! ಬಹಳ ದೊಡ್ಡವಳು.”

ಸುಶೀಲಾಬಾಯಿ–“ಅವ್ವಾ ನಾನು ನಿನ್ನಷ್ಟು ದೊಡ್ಡ ವಳಾದರೆ ನನ್ನ ಗಂಡ ಕಾರಾಗೃಹದಲ್ಲಿ ಕೂತುಕೊಳ್ಳುತಿದ್ದನೇ? ನಿನ್ನ ಪ್ರತಾಪ ಮೆರೆಯು ವಾಗ ನನ್ನ ಗಂಡನ ಪಾಡೇನು? ದೊಡ್ಡ ಪ್ರಭುವಾದರೂ ಸೆರೆಮನೆಯಲ್ಲಿ ಕೊಳೆಯಬೇಕು.?

ವಾಗ್ದೇವಿ–“ಅಧಿಕಾರಸ್ತರಿಗೆ ನೀನು ಕಂಡು ಹೇಳಿಕೊಂಡಿದ್ದರೆ ನಿನ್ನ ಗಂಡನ ಬಿಡುಗಡೆಯಾಗುತಿತ್ತು.”

ಸುಶೀಲಾಬಾಯಿ—“ನೀನು ಮುಂದಾಗಿ ಕಂಡು ಹೇಳಿಕೊಂಡ ಅಧಿ ಕಾರಸ್ಥರು ನನ್ನ ಗಣ್ಯಮಾಡುವರೇನು? ಅವ್ವಾ! ಯಾಕೆ ಇಂಥಾ ಕುತ್ಸಿತ ಮಾತುಗಳನ್ನಾಡಿ ನರಕಕ್ಕೆ ಭಾಜನಳಾಗುತ್ತಿ. ನಾನು ಪತಿವ್ರತೆ; ಪರಪುರು ಷನನ್ನು ಇದುವರೆಗೆ ಕಣ್ಣೆತ್ತಿ ನೋಡಿದವಳಲ್ಲ.”

ವಾಗ್ದೇವಿ– “ನಾನು ಮುಂದಾಗಿ ಅಧಿಕಾರಸ್ಥರನ್ನು ಹೋಗಿ ಕಂಡದ್ದು ನೀನ್ಯಾವಾಗ ನೋಡಿದೆ? ಬಾಯಿಗೆ ಬಂದ ಹಾಗೆ ಬಗಳಿದರೆ ನಿನ ಗ್ಯಾರು ಕೇಳುವವರಿಲ್ಲವೆಂದು ತಿಳಿದುಕೊಂಡೆಯಾ?ನೀನು ದೊಡ್ಡ ಪತಿವ್ರತೆ!”

ಸುಶೀಲಾಬಾಯಿ–“ನೀನು ಮುಂದಾಗಿ ಅಧಿಕಾರಸ್ಥರನ್ನು ಕಂಡಿಲ್ಲವಾದರೆ ಅವರನ್ನು ನಾನು ಕಂಡರೆ ನನ್ನ ಗಂಡಗೆ ಬಿಡುಗಡೆಯಾಗುತ್ತಿತ್ತೇಂದು ಹೇಗೆ ಬಗುಳಿದಿ? ನನಗೆ ಕೇಳುವವರು ನನ್ನ ಪತಿಗಳೇ! ನಿನ್ನಂಧಾ ನಾಯಿ ನನಗೆ ಕೇಳುವದುಂಟೇ? ನಾನು ದೊಡ್ಡ ಪತಿವ್ರತೆಯೆಂದು ಇನ್ನೊಮ್ಮೆ ಹೇಳು. ನಿನ್ನಂತೆ ಹಗಲು ಗಂಡನ ಹೆಂಡತಿಯೆಂದು ತಿಳಕೊಂಡಿಯಾ?”

ವಾಗ್ದೇವಿ–“ನಿನ್ನ ನಾಲಿಗೆ ಬಹಳ ಮುಂದರಿಸುತ್ತೆ? ಅದರಹೊಂದು ತುಂಡು ತೋರಿಸದಿದ್ದರೆ ನಿನ್ನ ಮಾತುಗಳು ಗಗನಕ್ಕೆ ಹತ್ತುವುವು.”

ಸುತೀಲಾಬಾಯಿ— “ನನ್ನ ನಾಲಿಗೆಯ ತುಂಡು ತೆಗೆಯುವುದ ಕ್ಕಿಂತಲೂ ನಿನ್ನ ನಾಲಿಗೆ ಶೀಳದರೆ ಅತಿ ಉತ್ತಮವಿತ್ತು.”

ವಾಗ್ದೇವಿ–“ನೀನೊಬ್ಬ ಹಗಲು ಗಂಡನ ಮಾಡಿಕೊಳ್ಳಬಾರದೇ? ನನ್ನ ಮೇಲೆ ಯಾಕೆ ಹೊಟ್ಟಿ ಕಿಚ್ಚು ಪಡುತ್ತೀ.”

ಸುಶೀಲಾಬಾಯಿ–“ನನಗೆ ಹಗಲು ಗಂಡ ಬೇಕೇ! ಯತಿದ್ರವ್ಯದ ಮೇಲೆ ಆಶೆ ಉಳ್ಳವರಿಗೆ ಬೇಕು.”

ವಾಗ್ದೇವಿ–“ನಿನಗೆ ಯತಿದ್ರವ್ಯ ಸಿಕ್ಕುವುದಿದ್ದರೆ ನೀನು ಏನೇನು ಕಾರ್ಬಾರು ಮಾಡುತಿದ್ದಿ. ನಿನಗೆ ಅದು ಸಿಕ್ಕುವುದುಂಟೇ?”

ಸುಶೀಲಾಬಾಯಿ–“ಅವ್ವಾ! ಆ ದ್ರವ್ಯ ನಿನಗೇ ಇರಲಿ. ನನ್ನ ನಾಯಿಗೂ ಅಂಥಾ ದ್ರವ್ಯಬೇಡಾ.’

ವಾಗ್ದೇವಿ–“ಲಜ್ಜಾಭಂಡಳಾದ ನಿನ್ನ ಕೂಡೆ ಮಾತಾಡುವುದರಿಂದ ಏನು ಪುರುಷಾರ್ಥ? ಹೊಟ್ಟೆಗೆ ಪೂರ್ತಿ ಅನ್ನ ಬೀಳದಿದ್ದರೂ ನಿನ್ನ ಅಟ್ಟ ಹಾಸಕ್ಕೆ ಏನು ಕಡಿಮೆಯಿಲ್ಲ.”

ಸುಶೀಲಾಬಾಯಿ—“ನಾನೇಕೆ ಲಜ್ಜಾ ಭಂಡಳು! ದಾರಿಗೆ ಹುಡುಗರು ನಿನ್ನ ಗಂಡನ ಎದುರು ಕವನ ಕಟ್ಟ ನಿನ್ನನ್ನು ಜರದು ಹಾಡುವಾಗ್ಯೆ ಸುಟ್ಟ ಮುಖವನ್ನು ತಕ್ಕೊಂಡು ಹಿಂದಿರುಗಿ ಮನೆಗೆ ಓಡಿದವಳು ನೀನಲ್ಲವೇ ಲಜ್ಜಾ ಭಂಡಳು! ನಾನೇ? ನನಗೆ ಹೊಟ್ಟೆಗೆ ಅನ್ನಬೀಳದಿದ್ದರೆ ನಾನು ನಿನ್ನ ಮನೆಗೆ ಎಂದಾದರೂ ಬೇಡಲಿಕ್ಕೆ ಬಂದಿರುವೆನೇನು? ತಾನೊಂದು ದೊಡ್ಡ ನಾಮದಾರ್ತಿಯಾಗಿದ್ದೇನೆಂದು ಏಗ್ಗುವಿಯಾ? ಸುಡು ನಿನ್ನ ಬಾಳುವೆ! ವೇಶ್ಯಾ ಸ್ತ್ರೀಯರಲ್ಲಿಯೂ ನಿನ್ಫಷ್ಟು ಕೀಳು ಹೆಂಗಸು ಸಿಕ್ಕಲಿಕ್ಕಿಲ್ಲ: ಥೂ! ನಿನ್ನ ಮುಖಕ್ಕೆ.”

ಸುಶೀಲಾಬಾಯಿಯು ಜರದು ಆಡಿದೆ ಮಾತುಗಳ ಕಾಠಿಣ್ಯವನ್ನು ತಡೆದುಕೊಳ್ಳಲಿಕ್ಟಾಗದೆ ವಾಗ್ದೇವಿಗೆ ಸಿಟ್ಟು ಬಂತು. ಅವಳು ಸುಶೀಲಾಬಾ ಯಿಗೆ ಹೊಡೆಯಲಿಕ್ಕೆ ಕೈಯೆತ್ತಿ ಮುಂದೆ ಹೋಗುವಷ್ಟರಲ್ಲಿ ಕೆರೆಯ ಆಚೆ ಧಡದಲ್ಲಿ ಇದ್ದ ಗಂಗಾಬಾಯಿಯು ತ್ವರೆಯಾಗಿ ಬಂದು ಅವರಲ್ಲಿ ಹೊಡೆ ದಾಟಿ ನಡೆಯದ ಹಾಗೆ ಮಧ್ಯಸ್ಥಿಕೆ ಮಾಡಿದಳು. ಸುಶೀಲಾಬಾಯಿಗ ಸಾಧಾರಣ ಸಿಟ್ಟು ಬಂದಿರಲಿಲ್ಲ. ನಿನ್ನ ಅಹಂಕಾರವನ್ನು ದೇವರು ಬೇಗ ಮುರಿ ಯುವನೆಂದು ಶಪಿಸಿ ಕೋಪದಿಂದ ನಡುಗುತ್ತಾ ಅವಳು ಮನೆಗೆ ಹೋಗಿ ಕೆರೆ ಧಡದಲ್ಲಿ ನಡೆದ ವಿದ್ಯಮಾನವನ್ನೆಲ್ಲಾ ಗಂಡಗೆ ತಿಳಿಸಿದಳು. ವೇದವ್ಯಾಸ ಉಪಾಧ್ಯನು ವ್ಯಸನ ಪಟ್ಟನು. ಅವನಿಗೆ ದೊಡ್ಡ ಕೋಪ ಬಂದರೂ ಅದನ್ನು ಅವನು ನುಂಗಿಕೊಳ್ಳ ಬೇಕಾಯಿತು. ಯಾಕೆಂದರೆ ಬಡವರ ಸಿಟ್ಟು ದವಡೆಗೆ ಕೇಡೆಂಬ ಸಾಮತಿಯು ಅವನ ನೆನಪಿಗೆ ಬಂತು. ಅದಲ್ಲದೆ ಅಪರಾಜಿತ ಸೆಟ್ಟಿಯು ಮಾಡಿದ ಮೋಸದಲ್ಲಿ ಸಿಕ್ಕಿಬಿದ್ದು ಪೇಷ್ಕಾರನಿಂದ ಅವಮಾನ ಹೊಂದಿದ್ದು ಸಹ ಅವನಿಗೆ ಮರೆತಿರಲಿಲ್ಲ. “ಅಗಲವಾದ್ದು ಹರಿಯುವುದು ಉದ್ದವಾದ್ದು ಮುರಿಯುವುದು” ಎಂಬ ಅನುಭವಸಿದ್ಧವಾದ ವಚನವಿದೆ. ನಿರ್ನಿಮಿತ್ತವಾಗಿ ತನ್ನ ಹೆಂಡತಿಯನ್ನು ಕೆಣಕಿದ ವಾಗ್ದೇವಿಯು ಒಂದಲ್ಲ ಒಂದು ದಿನ ಅವಳ ಕರ್ಮದ ಫಲವನ್ನುಣ್ಣದೆ ಇರಲಾರಳೆಂದು ಸುಮ್ಮ ಗಾದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ್‍ಯಾಮಿ ವೈಶ್ವಾನರ
Next post ಭಗವದ್ಭಕ್ತಿ

ಸಣ್ಣ ಕತೆ

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…