ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ ನನ್ನ...

ಕನ್ನಡ ನುಡಿಯಿದು ಸುಂದರ ನಡೆಯಿದು ಮಿಂಚಿನ ಚಂದುಳ್ಳಿ ಕನ್ನಡ || ಚಂಚಲೆ ಸುಂದಿರ ಮಂಚಲೆಯಾಗಿರೆ ಅನಂತ ಕಸ್ತೂರಿಯೆ ಕನ್ನಡ || ಬಾಳಿನ ಹಂದರದಲಿ ಕನಸಿ ನೋಕಳಿಯಲಿ ಮನಸಿನ ಐಸಿರಿಯೆ ಕನ್ನಡ || ಮುತ್ತಿನ ಮಣಿ ಮಾಲೆ ಶೃಂಗಾರಕೆ ಇದುವೆ ಲೀಲೆ ತಾಯ ಸೆರಗಿ...

ದೇವಿ ದಿಗಂತದಾಚೆ ನಿಂತು ಆಡಿಸುತ್ತಿಹಳೊ ಈ ಜಗವು ಅವಳ ಮಾಯೆಯ ಮೋಹದಲಿ ಉರುಳುತಿಹದೊ ಈ ಯುಗವು ಸ್ವರ್‍ಗ ಮೃತ್ಯೂ ಪಾತಾಳಗಳೆಲ್ಲ ತಾಯಿ ಆಡುವ ತಾಣಗಳೊ ಅವಳ ಮಡಲಿನಲಿ ಅಡಗಿಹವೊ ಎಂಥ ಎಂಥ ಬಾಣಗಳೊ ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ಶ್ರೀರಕ್ಷೆ ಸೃಷ್ಟಿ ...

ಹಿಂದಿನ ಅಧ್ಯಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ ಕಥಾನಾಯಕನಾದ ಮಾಧವನಲ್ಲದೆ ಬೇರಿಯಲ್ಲವೆಂಬುದ ನ್ನು. ನಮ್ಮ ವಾಚಕಮಹಾಕಯರಿಗೆ ತಿಳಿಯಹೇಳಬೇಕಾದುದಿಲ್ಲ. ಆದರೆ ತಂದೆಯ ಮನೆಯನ್ನು ಬಿಟ್ಟು ಏಕಾಂಗಿಯಾಗಿ ಹೊರಟು ಬಂದವನಿ ಗೆ ಹೈದರಾಬಾದಿನಲ್ಲಿ ಅಷ್...

೧ ಯಾವ ನೀರೂ ಸಾಕು ರಾಜಕೀಯನ ತೃಷೆಗೆ, ಬೇಕೇಕೆ ಬೇರೆ ಒರತೆ ? ಜಂಗಮ ಜಗತ್ತಿನಲಿ ರಾಜ್ಯಧುರಧೀರರದು ಇಹುದಣ್ಣ ತುಂಬ ಕೊರತೆ. ಭೂಮಿ ಭೂಮಾನಂದಕಾಗಿ ಓಗರೆದಿತ್ತು ಬಂತು ಬೇರೆಯ ನೆಲೆಯ ಹಿರಿಯ ಮಹಿಮೆ. ದೇವದ್ರವ್ಯವೆ ಇಳಿದು ಮನುಜರೂಪವ ತಳೆದು ತೋರಿತ್ತು...

(ಕಾಳನ ಕೋರಿಕೆ) ಕಾಳನು ಏಳೆಂಟು ವರುಷದ ಹುಡುಗ, ಕಾಳಿಯ ಗುಡಿಗೊಂದು ದಿವಸ ಹೋದಾಗ- ತೋಳೆತ್ತಿ ಕೈ ಮುಗಿದು ಕಣ್‌ಮುಚ್ಚಿ ನಿಂತು ಕಾಳೀದೇವಿಗೆ ಬೇಡಿಕೊಂಡನು ಇಂತು ೧ ಅಮ್ಮಮ್ಮಾ ನಮ್ಮೂರು ಬಲು ದೊಡ್ಡದಮ್ಮಾ! ನಮ್ಮೂರಲಿಹ ಜನ ಕಮ್ಮೀ ಇಲ್ಲಮ್ಮಾ! ಎರಡು ...

ಬದುಕ ಬೆಳವಣಿಗೆಯ ಜೊತೆಗೆ ಜೊತೆಗೆ ಭಾಗ್ಯ, ಬವಣೆ, ಬದಲಾವಣೆಗಳ ಬೆಸುಗೆ|| ಇಲ್ಲದ ಭಾಗ್ಯವ ನೆನೆದು ಇರುವುದ ಪಕ್ಕಕ್ಕಿರಿಸಿದರೆ ಬಾಳು ಸಾಗದು ಮುಂದೆ| ಕಾಲನ ಜೊತೆ ಸೇರಿ ಹೊಂದಿಕೊಳ್ಳುವುದೊಂದೇ ಬಾಳ ಸಾಗಿಸುವ ದಾರಿ ಮುಂದೆ|| ಬದುಕಲಿ ಬದಲಾವಣೆ ಇಲ್ಲ...

ಹಗಲು ಅಂಬಾರಿಯ ಮೇಲೆ ಮೆರವಣಿಗೆ ಹೊರಟಿತ್ತು ಬೀದಿಯಲಿ ಹೆಗಲು ಕೊಟ್ಟವರ ಎದೆಯ ಮೇಲೆ ಬಹುಪರಾಕು ಬರೆದಿತ್ತು ನೆತ್ತರಲ್ಲಿ. ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ ಹಗಲು ರಾಜನಿಗೆ ದಾರಿ ಬಿಡಿರೊ ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ ನಗಲು ನೀವೆಲ್ಲ ತೆರಿ...

ಇವತ್ತು ನವೆಂಬರ್ ೧೪ ಮಕ್ಕಳ ದಿನ. ಸುಮಾರು ಐದು ದಶಕಗಳಿಂದ ಮಕ್ಕಳ ನೆಚ್ಚಿನ ಚಾಚಾ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾ ಬರುತ್ತಿದ್ದೇವೆ. ನಾವು ಚಿಕ್ಕವರಿರುವಾಗ ಮಕ್ಕಳ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು...

ವಿವಿಧ ಬಣ್ಣದ ಎಮ್ಮೆ ಹಸುಗಳು ಕಪ್ಪು ಬಿಳಿದು ಕೆಂಪು ಕೊಡುವ ಹಾಲು ಮಾತ್ರ ಬಿಳಿದು ಜೀವನಸತ್ವ ಒಂದೇ ಜಾತಿ ಮತ ಧರ್ಮವೆಂದು ಯಾಕೆ ಈ ಹೊಡೆದಾಟ? ಪ್ರೀತಿ ಕರುಣೆ ಮಾನವತೆ ಮೆರೆದರೆ ಇಲ್ಲ ಕಾಟ ತುಂಗೆ ಗಂಗೆ ನರ್ಮದೆ ನಮ್ಮ ನಿಮ್ಮದದೆಂದೂ ಕೃಷ್ಣ ಕಾವೇರಿ...

1...2223242526...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...