ವಿವಿಧ ಬಣ್ಣದ ಎಮ್ಮೆ ಹಸುಗಳು
ಕಪ್ಪು ಬಿಳಿದು ಕೆಂಪು
ಕೊಡುವ ಹಾಲು ಮಾತ್ರ ಬಿಳಿದು
ಜೀವನಸತ್ವ ಒಂದೇ

ಜಾತಿ ಮತ ಧರ್ಮವೆಂದು
ಯಾಕೆ ಈ ಹೊಡೆದಾಟ?
ಪ್ರೀತಿ ಕರುಣೆ ಮಾನವತೆ
ಮೆರೆದರೆ ಇಲ್ಲ ಕಾಟ

ತುಂಗೆ ಗಂಗೆ ನರ್ಮದೆ
ನಮ್ಮ ನಿಮ್ಮದದೆಂದೂ
ಕೃಷ್ಣ ಕಾವೇರಿ ಜಗಳ ಇದ್ದರೂ
ಹರಿಯುವ ನೀರೊಂದೇ

ನಮ್ಮ ದೇಶವು ಜಗತ್ಪ್ರಸಿದ್ಧ
ಇದೆ ಒಡಕಿನಲೂ ಏಕತೆ
ಭಾರತ ಮಾತೆ ಮಕ್ಕಳು ನಾವು
ಹೇಳಿ ಏಕಮೇವ ಜಯತೆ
*****