ನಾಯಿ ಮರಿಗೆ
ಶಾಲೆಗ್ಹೋಗೊ
ಆಸೆಯಾಯಿತು

ಪಾಟಿ ಚೀಲ
ಬಗಲಲಿಟ್ಟು
ಸೈಕಲ್ ಏರಿತು

ಬೆಕ್ಕು ಮರಿಯು
ನಾನು ಬರುವೆ
ತಾಳು ಎಂದಿತು

ಹಿಂದೆ ಸೀಟಿನಲ್ಲಿ
ಅದಕೆ ಕೂರಲು
ಹೇಳಿತು

ನಾಯಿ ಜೊತೆಗೆ
ಬೆಕ್ಕು ಕೂಡ
ಸೈಕಲ್ ಏರಿತು

ಜಂಟಿಯಾಗಿ
ಬೆಕ್ಕು ನಾಯಿ
ಶಾಲೆಗ್ಹೊರಟವು

ಇದನುಕಂಡು
ಕತ್ತೆ ಕೋಣ
ಬಿದ್ದು ನಕ್ಕವು

ಬೆಕ್ಕು ನಾಯಿ
ಜಂಭದಿಂದ
ಶಾಲೆ ಹೊಕ್ಕವು
ಎದುರು ಸಿಕ್ಕ
ಕರಡಿಮೇಷ್ಟ್ರಿಗೆ
ನಮಸ್ತೆ ಎಂದವು

ಆಟ ಪಾಠ
ಎಲ್ಲ ಕಲಿತು
ಜಾಣರಾದವು

ಅಂದು ನಕ್ಕ
ಕತ್ತೆ ಕೋಣ
ದಡ್ಡರಾದವು.
*****