ಸಿನಿಮಾದ ಶಕ್ತಿ ಅಪರಿಮಿತವಾದುದು. ಜನರನ್ನು ತಲಪುವ ಮತ್ತು ಜನರ ಮೇಲೆ ಪರಿಣಾಮವನ್ನುಂಟುಮಾಡುವ ದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಜನಸಮುದಾಯದ ಜೊತೆಗಿನ ಸಂಬಂಧವನ್ನು ಗಮನಿಸಿದಾಗ ಸಿನಿಮಾ, ನಿಜವಾದ ಅರ್ಥದಲ್ಲಿ ಸಮೂಹ ಮಾಧ್ಯಮ. ಆದ್ದರಿಂದ...

ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್‍ಯನು ನೋಡುವನು, ಬಿಸಿಲೂಡುವನು; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು. ಬಂಗಾರದ ಚೆಲು...

ಸುರಿದ ಬೆವರಿನ ಫಲದಿ ತೋಡು ಬಾವಿಯೊಳಂ ಕುರಿಪ ಜಲದ ತೆರದೊಳೆಮ್ಮ ಸಾಹಿತ್ಯವಿರಲದಕೆ ಶಕ್ತಿ ಬರಿದೋದುತೋದುತ ಬರೆವ ಸಾಹಿತ್ಯವದು ಬೋರು ನೀರಿನ ತೆರದಿ ಕ್ಷಣಿಕ ಕಾಸಿನ ಯುಕ್ತಿ ಸುರಿವಾಗಸಕೆ ಆಲಿಕೆಯಂತಿರ್ಪ ಹಸುರೆಲ್ಲದಕು ಶಕ್ತಿ – ವಿಜ್ಞಾನೇಶ್...

ಹೂವು ಹೂವಿಗೆ ಚಿಗುರು ಚಿಗುರಿಗೆ ಪ್ರೀತಿ ಚುಂಬನ ನೀಡುವೆ ದೇವ ಗಂಗಾಧರನ ಗಾಯನ ಹಾಡಿ ಹರುಷದಿ ಕುಣಿಯುವೆ ಗಾಳಿ ಬೀಸಲಿ ಚಳಿಯು ಚಿಮ್ಮಲಿ ಹಸಿರ ಉಡುಗರೆ ತೊಡಿಸುವೆ ಬಿಸಿಲು ಕೆಂಡದ ಮಳೆಯ ಸುರಿಸಲಿ ಪ್ರೀತಿ ಕೊಡೆಯನು ಹಿಡಿಯುವೆ ಸುತ್ತಮುತ್ತ ಹಸಿರು ಹ...

ಅಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಕಳಚಿ ನಡೆದರು ದೂರ ದೂರ ಬದುಕಿನ ಬವಣೆಗಳನ್ನೆಲ್ಲಾ. ವರವೋ ಶಾಪವೋ ಅವರಿಗೆ ಭೂಕಂಪ ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ ಕನಸನ್ನು ಕನಸಾಗಿಯೇ ಉಳಿಸಿ ನಶ್ವರ ಬಾಳಿನ ಸತ್ಯವ ತಿಳಿಸಿ ನಡೆದರು ದೂರ ಬಹು ದೂರ ಗೊ...

ಅರ್ಥ ಸನ್ಯಾಸಿ ಬ್ರಹ್ಮಚಾರಿ ಆನಯ್ಯ ದೊರೆಕೊಳ್ಳದಿರ್ದಡೆ ಒಲ್ಲೆನೆಂಬೆನು ದಿಟಕ್ಕೆ ಬಂದರೆ ಪರಿಹರಿಸಲರಿಯೆನು ಎನಗೆ ನಿಸ್ಪೃಹದ ದೆಸೆಯನೆಂದಿಂಗೀವೆಯಯ್ಯಾ ಸಕಳೇಶ್ವರದೇವಾ [ನಿಸ್ಪೃಹ-ಆಸೆ ಇರದ; ತೃಪ್ತ; ಸಮಚಿತ್ತ] ಸಕಳೇಶಮಾದರಸನ ವಚನ. ನಿಸ್ಪೃಹತೆಯ ಪ...

ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು ಅಮಾ, ಚಿತ್ರದ ಅಂಗಡಿ ನೋಡೆ ! ಸುಂದರ ಸೊಬಗಿನ ಅಂಗಡಿ ನೋಡೆ ! ಬಗೆ ಬಗೆ ಬಣ್ಣದ ಪಟಗಳ ನೋಡೆ ! ಭಾರತದೇಶದ ಚಿತ್ರವನೋಡೆ ! || ೧ || ಅಮ್ಮಾ, ಇಲ್ಲಿದೆ ...

ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ. ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ ನಡೆಯುತ್ತಿದ್ದಾರೆ. ಅವರೀಗ ಹಳದಿ ಎಲೆ. ಹಗುರಾಗಿದ್ದಾರೆ ಮಾಗಿದ್ದಾರೆ. ಅವರಿಗೆ ಹೊಸದೇನು ಬೇಕಾಗಿಲ್ಲ. ನಡೆದ ದಾರಿಯ ಹಳವಂ...

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮಗಳ ಭಾವೈಕ್ಯತೆಯ ಗೂಡು ನಮ್ಮದು ಜನನಿ ಜನುಮ ಭೂಮಿ ಸ್ವರ್‍ಗ ತಾಣ ಮುಗಿಲ ಕಾನನದೊಳಗಣ ಸಮೃದ್ಧಿ ಚೆಂದ ಗಂಧ ಮೆರೆದ ಸಂಪದ್ಭರಿತ ನಾಡು ನಮ್ಮದು ಕನಕ ವೃಷ್ಟಿವನಿತ ಭಾವ ನಿತ್...

ದೇಹವೆಂಬುದು ಆತ್ಮ ದೇವಾಲಯ ದೇವಾಲಯದಲ್ಲಿ ಸದಾ ಭಕ್ತಿ ಇರಲಿ ಸತ್ಯವೆಂಬ ರಂಗವಲಿ ಬರೆಯಬೇಕು ನಾಮ ಸ್ಮರಣೆಯ ಗಂಟೆ ಬಾರಿಸಲಿ ವಿಶ್ವಾಸವೆಂಬ ಪೂಜೆ ಇರಲಿ ಧ್ಯಾನವೆಂಬ ಮಂತ್ರ ಪಠಿಸಲಿ ಸತ್ಕರ್ಮವೆಂಬ ಗಂಧವ ಹರಡಲಿ ಯೋಗವೆಂಬ ದೀಪವಲ್ಲಿ ಬೆಳಗಲಿ ನಿರಾಡಂಬರ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...