ದೇವ ಗಂಗಾಧರನ ಗಾಯನ

ಹೂವು ಹೂವಿಗೆ ಚಿಗುರು ಚಿಗುರಿಗೆ
ಪ್ರೀತಿ ಚುಂಬನ ನೀಡುವೆ
ದೇವ ಗಂಗಾಧರನ ಗಾಯನ
ಹಾಡಿ ಹರುಷದಿ ಕುಣಿಯುವೆ

ಗಾಳಿ ಬೀಸಲಿ ಚಳಿಯು ಚಿಮ್ಮಲಿ
ಹಸಿರ ಉಡುಗರೆ ತೊಡಿಸುವೆ
ಬಿಸಿಲು ಕೆಂಡದ ಮಳೆಯ ಸುರಿಸಲಿ
ಪ್ರೀತಿ ಕೊಡೆಯನು ಹಿಡಿಯುವೆ

ಸುತ್ತಮುತ್ತ ಹಸಿರು ಹೂವು
ನಗುವ ನಂದನ ಬೆಳೆಸುವೆ
ಕಡಲು ಆಚೆಗೆ ಶಿಖರ ಈಚೆಗೆ
ಪ್ರೇಮ ಮಂಚವ ತೂಗುವೆ

ಹಕ್ಕಿ ಕೊರಳಿನ ಜೇನು ತುಪ್ಪವ
ನಾನು ಮೆಲ್ಲನೆ ಸವಿಯುವೆ
ಮುಗಿಲ ಸಿಡಿಲಿಗೆ ಮೇಘ ಜಲವನು
ಸುರಿದು ಕುಲುಕುಲು ನಗಿಸುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ್ಮುಕ್ತರು
Next post ವರ ಕೃಷಿಯನರಿಯದೆ ಬರೆದರದು ಸಾಹಿತ್ಯವಾದೀತೇ?

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…