“ಅಮ್ಮಾ! ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ” ಎಂದು. ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು...

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ *****...

ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ ಮಧುರ ಕ್ಷಣಗಳು ಉಂಡ, ಕಂಡ, ಸಿಹಿ-ಕಹಿ ಘಟನೆಗಳು ನಾನು ಮ...

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು ಹೇಳಿದರೆ ಏನು? ವಿವೇಕ ನಮಗೆ ಅಪಥ್...

ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. “ಮದರ್ ಕರೆಯುತ್ತಿದ್ದಾರೆ…” ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ ಎದೆ ಡವಗುಟ್ಟಿತು. ...

ಹತ್ತು ಹೆಣ್ಣು ಮಕ್ಕಳ ತಂದೆ ಸಾಗಹಾಕಬೇಕು ಹೇಗಾದರೂ ಮುಂದೆ ಸುಳ್ಳು ಪೊಳ್ಳು ಹೇಳಿ ಮದುವೆ ಮಾಡಿದ ಹೆಣ್ಣು ಮಕ್ಕಳ ಗೋರಿ ತಾನೇ ತೋಡಿದ *****...

ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು : ಬೆಳ್ಳಿ ಚಿಲುಮೆಗೆ ಕೂಡ ಕೆಸರಿದೆ, ಗುಲಾಬಿಗೂ ಮುಳ್ಳಿದೆ, ಗ್ರಹಣ ಮುಗಿಲು ಅಡ್ಡ ಹಾಯುವ ಕೇಡು ಸೂರ್‍ಯ ಚಂದ್ರರಿಗು ಇದೆ, ರಸಗರೆವ ಮೊಗ್ಗಿಗೂ ಒಡಲಿನೊಳಗೇ ಕೆಟ್ಟ ಕೀಟವಿದೆ. ಕೇಡನ್ನು ಮಾಡದ ಮನುಷ್ಯರ...

ಸುಖದ ಕ್ಷಣವದು ಎಷ್ಟು ನಶ್ವರ? ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ ಕಿಟಕಿಯಿಂದ ನೋಡಿದರೆ ದಟ್ಟವಾದ ಕಾಡು, ಪೊ...

1234...13

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...