ಒಂದು ಬೆಟ್ಟದ ಮೇಲೆ
ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ
ಮತ್ತೊಂದು ಬೆಟ್ಟದ ಮೇಲೆ
ತಿರುಪತಿ ತಿಮ್ಮಪ್ಪ
ಹೊರಲಾಗದೆ ಹೊರುತ್ತಿದ್ದಾನೆ
ಚಿನ್ನ ವಜ್ರ ವೈಡೂರ್‍ಯ
ರತ್ನ ಖಚಿತ ಕಿರೀಟ
ತೊರೆದು ಬೇಡುವ
ಭಕ್ತರ ಪಾಲಿಗೆ
ಎಲ್ಲವೂ ತೊಳಲಾಟ
*****
ಒಂದು ಬೆಟ್ಟದ ಮೇಲೆ
ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ
ಮತ್ತೊಂದು ಬೆಟ್ಟದ ಮೇಲೆ
ತಿರುಪತಿ ತಿಮ್ಮಪ್ಪ
ಹೊರಲಾಗದೆ ಹೊರುತ್ತಿದ್ದಾನೆ
ಚಿನ್ನ ವಜ್ರ ವೈಡೂರ್‍ಯ
ರತ್ನ ಖಚಿತ ಕಿರೀಟ
ತೊರೆದು ಬೇಡುವ
ಭಕ್ತರ ಪಾಲಿಗೆ
ಎಲ್ಲವೂ ತೊಳಲಾಟ
*****