ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ ಸರಿದು ಹೋದಗಾಳಿ...

ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ ಸಾಲೆಗೆ ...

ಕರಿ ಬೆಕ್ಕು ಬಿಳಿ ಬೆಕ್ಕಿಗೆ- ನೀನು ಬೆಳ್ಳಗಿರೋದರಿಂದ ಎಲ್ಲರೂ ನಿನ್ನ ಮುದ್ದು ಮಾಡ್ತಾರೆ ತೊಡೆ ಮೇಲೆ ಬೆಚ್ಚನೆ ಕೂರಿಸ್ತಾರೆ ಮಿಯೋಂ ಎಂದರೆ ಸಾಕು! ಹಾಲಿನ ತಟ್ಟೆ ನಿನ್ನೆ ಮುಂದಿರ್ತದೆ! ಅದಕ್ಕೆ ಬಿಳಿ ಬೆಕ್ಕು- ನೀನು ಕರ್ರಗಿರೋದರಿಂದ ಹಗಲು ಸರಿ...

ಬೇಯುತಿದೆ ಮಾತಿಯೊಡಲು ಸುಡುವ ಕಿಚ್ಚಿನೊಳಗೆ ಮೌನ ಚಿಪ್ಪಿನಂತೆ ಪ್ರತಿಭಟನೆಯ ಸೋಲಿಲ್ಲ ಮರದಿಂದ ಮರಕ್ಕೆ ಹಾರುವ ಮರ್ಕಟನ ತೆರೆದಿ ಪಕ್ಷದಿಂದ ಪಕ್ಷಕ್ಕೆ ಖಾದಿಗಳ ಹಾರಾಟ ಸನ್ನಿವೇಶಕ್ಕೆ ತಕ್ಕಂತೆ ಬದಲಾದ ಊರಸರವಳ್ಳಿಗಳ ವೇಷ ಬಾಂಧವ್ಯ ಬೆಸೆಯುವಲ್ಲಿ ಕ...

ಕನಸು, ಕಾಮನಬಿಲ್ಲಿನಲ್ಲಿ, ಜೂಗಳಿಸುವ ಗಿಡಮರ ಬಳ್ಳಿ ಹೂವಿನಲ್ಲಿ, ಚುಕ್ಕಿ ಚಂದ್ರಮರ ನಗೆ ಬೆಳದಿಂಗಳಿನಲ್ಲಿ, ಹೊರಳುವ ಅಲೆಯ ಏರಿಳಿತ ಲಯಬದ್ಧ ಸಂಗೀತದಲ್ಲಿ, ಮಗ್ಗುಲಾದ ಮುಂಜಾವಿನ ಅರಳು ನೋಟದ ಬೆಳಕಿನಲ್ಲಿ, ಚಿಲಿಪಿಲಿ ಸಂಗೀತದಲ್ಲಿ ಮುಕ್ಕಳಿಸಿ ನಗ...

ಇರುವುದೊಂದೇ ಬಣ್ಣ ಅದು ಹೋಳಾದಾಗ ಕಾಣುವುದು ಏಳು ಇದಕ್ಕೆ ಏನೇನೋ ಹೆಸರು ಮಳೆಬಿಲ್ಲು, ಇಂದ್ರ ಧನಸ್ಸು, ಸೂರೆಗೊಂಡಿದೆ ಇದು ಕವಿ ಜನರ ಮನಸ್ಸು ಎಷ್ಟೊಂದು ಸುಮಧುರ ಎಂದ್ಯಾರೋ ಅಂದಿದ್ದಕ್ಕೆ ಹೇಳಿದ ನಮ್ಮೂರ ಧುರಂಧರ ಪಂಚಾಯ್ತಿ ಚೇರಮನ್; ಅಯ್ಯೋ ಬಿಡಿ...

1234...6

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....