ಬೇಯುತಿದೆ ಮಾತಿಯೊಡಲು
ಸುಡುವ ಕಿಚ್ಚಿನೊಳಗೆ
ಮೌನ ಚಿಪ್ಪಿನಂತೆ
ಪ್ರತಿಭಟನೆಯ ಸೋಲಿಲ್ಲ

ಮರದಿಂದ ಮರಕ್ಕೆ ಹಾರುವ
ಮರ್ಕಟನ ತೆರೆದಿ
ಪಕ್ಷದಿಂದ ಪಕ್ಷಕ್ಕೆ
ಖಾದಿಗಳ ಹಾರಾಟ
ಸನ್ನಿವೇಶಕ್ಕೆ ತಕ್ಕಂತೆ
ಬದಲಾದ ಊರಸರವಳ್ಳಿಗಳ ವೇಷ
ಬಾಂಧವ್ಯ ಬೆಸೆಯುವಲ್ಲಿ
ಕಾಣುವುದು ಮೀನಮೇಷ

ಮಂಗನ ಕೈಯ ಮಾಣಿಕ್ಯದಂತೆ
ಮೌಲ್ಯ ರಹಿತವಿಂದು
ಸನಾತನ ಭಾರತ
ವೇದಾಂತ ಸಿರಿಯ ಹೊಂಬೆಳಕು
ಮಸುಕಾಗಿ ವಿಜ್ರಂಭಿಸಿದೆ
ನೀಲಿಚಿತ್ರಗಳ ಕರಿ ಬೆಳಕು

ಹಣಕ್ಕಾಗಿ ಉರುಳಿದ ಹೆಣ
ಧನದ ಮುಂದೆ ದೀನರಾದ ಜನ
ರಾಜಕೀಯ ಡೊಂಬರಾಟ
ಪಾಶವೀಕೃತ್ಯಗಳ ಕೂಟ
ಸನಾತನ ಧರ್ಮದ ಒಡಲು
ಇಂದು ದುರ್ನಾತ ಬೀರುವ ಕಡಲು
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)