ಕರಿ ಬೆಕ್ಕು ಬಿಳಿ ಬೆಕ್ಕಿಗೆ-
ನೀನು ಬೆಳ್ಳಗಿರೋದರಿಂದ
ಎಲ್ಲರೂ ನಿನ್ನ ಮುದ್ದು ಮಾಡ್ತಾರೆ
ತೊಡೆ ಮೇಲೆ ಬೆಚ್ಚನೆ ಕೂರಿಸ್ತಾರೆ
ಮಿಯೋಂ ಎಂದರೆ ಸಾಕು!
ಹಾಲಿನ ತಟ್ಟೆ ನಿನ್ನೆ ಮುಂದಿರ್ತದೆ!

ಅದಕ್ಕೆ ಬಿಳಿ ಬೆಕ್ಕು-
ನೀನು ಕರ್ರಗಿರೋದರಿಂದ
ಹಗಲು ಸರಿದ ಮೇಲೆ ಯಾರ ಕಣ್ಣಿಗೂ
ಕಾಣಿಸೊದಿಲ್ಲ, ಖದೀಮ
ಕತ್ತಲೆಗೆ ಕತ್ತಲೆಯಾಗಿ ತಿರುಗಾಡುವ
ನಿನ್ನ ಕಂಡರೆ ಒದೀಬೇಕೆನಿಸ್ತದೆ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)