ಬಿಕ್ಕಳಿಸಿ ಅಳದಿರಲಿ…. ಪ್ರೀತಿ

ಕನಸು, ಕಾಮನಬಿಲ್ಲಿನಲ್ಲಿ,
ಜೂಗಳಿಸುವ ಗಿಡಮರ
ಬಳ್ಳಿ ಹೂವಿನಲ್ಲಿ,
ಚುಕ್ಕಿ ಚಂದ್ರಮರ
ನಗೆ ಬೆಳದಿಂಗಳಿನಲ್ಲಿ,
ಹೊರಳುವ ಅಲೆಯ ಏರಿಳಿತ
ಲಯಬದ್ಧ ಸಂಗೀತದಲ್ಲಿ,
ಮಗ್ಗುಲಾದ ಮುಂಜಾವಿನ
ಅರಳು ನೋಟದ ಬೆಳಕಿನಲ್ಲಿ,
ಚಿಲಿಪಿಲಿ ಸಂಗೀತದಲ್ಲಿ
ಮುಕ್ಕಳಿಸಿ ನಗಲಿ ನಮ್ಮಿಬ್ಬರ ಪ್ರೀತಿ.

ಒತ್ತಿ ಉರುಳುವ ಮರಳು,
ಕೂಗಿ ಕಂಗೆಡಿಸುವ ಕೊರಳು,
ಬಿರುಬಿಸಿಲು, ಬಿರುಗಾಳಿಯ ಬೀಸು,
ಕಲ್ಲುಮುಳ್ಳಿನ ಹಾಸು,
ಬಿಕ್ಕಳಿಸುವ ಬಾನು, ಗದಗುಟ್ಟಿಸುವ ಕಾನು,
ಗುಡುಗು-ಮಿಂಚಿನಲ್ಲೂ….
ಬಿಕ್ಕಳಿಸಿ ಅಳದಿರಲಿ ನಮ್ಮಿಬ್ಬರ ಪ್ರೀತಿ


Previous post ಕಾಮನ ಬಿಲ್ಲು
Next post ಮೌನ ರೋದನ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…