ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ ಕ...

ಎಲೆ ಮರೆಯ ಕಾಯಿಗಳನ್ನು ಹಣ್ಣಾಗುವ ಮೊದಲೇ ಯಾರ್ಯಾರೋ ಕಿತ್ತುಬಿಟ್ಟರು. ನಮ್ಮೂರ ಚೆಂದದ ಹೆಣ್ಣುಗಳನ್ನು ಇನ್ನೂ ಕಣ್ಣು ಬಿಡುವಷ್ಟರಲ್ಲೆ ಯಾರ್ಯಾರೋ ಮದುವೆಯಾಗಿಬಿಟ್ಟರು. *****...

ಕಾಲವೇ, ನನಗೆ ನನ್ನ ಕಳೆದು ಹೋದ ಬಾಲ್ಯ ಕೊಡು. ಕುಣಿಯಲು ಅಂಗಳ ಕೊಡು, ಆಡಲು ಆಟಿಕೆ ಕೊಡು. ನನ್ನ ಯೌವನವನ್ನು ಮತ್ತೆ ಬರುವ ಮುದಿತನವನ್ನು ನೀನೇ ಇಟ್ಟುಕೋ. ನಾನು ಮಗುವಾಗಿ ಬೀಳುತ್ತಾ, ಏಳುತ್ತಾ, ಕುಣಿಯುತ್ತಾ ನಡೆಯ ಬೇಕಾಗಿದೆ ಆಡಬೇಕಾಗಿದೆ, ಓಡ ಬ...

ಎಂದಿಗಾದೀತು ಈ ದೇಶ ಎಲ್ಲರಂತೆ ತಾನೂ? ಎಂದಿಗಾದೀತು ಇರದಂತೆ ತರತಮ ಏನೇನೂ? ಜನಮನಗಳ ನಡುವೆ-ಗೋಡೆ ಎಂದಿಗೆ ಉರುಳುವುವು? ಬಡವರ ಇರುಳುಗಳು-ಎಂದಿಗೆ ಪೂರಾ ಕರಗುವುವು? ಸೆರೆಯೊಳಿರುವ ಲಕ್ಷ್ಮಿ-ದೀನರ ಕಡೆ ಹೊರಳುವಳೆಂದು? ಗಾಳಿ ಬಿಸಿಲಿನಂತೆ – ...

ಹಕ್ಕಿ ಹಕ್ಕಿ ಇದು ಲೋಹದ ಹಕ್ಕಿ ಎನದರ ಚೆಂದ ಏನದರ ಅಂದ ಮೈಯೆಲ್ಲ ನುಣ್ಣನುಣ್ಣನೆ ಹೊಳಪು ಸೊಕ್ಕಿದ ರೆಕ್ಕೆಯ ಭುಜಬಲ ಯಾರು ಸಮಾನರೆನಗೆನ್ನುವ ಅಹಂ! ನಾನೂರು ಜನರ ಹೊರುವ ಭರವಸೆಯ ಮೂರೇ ಕಾಲಿನ ಸಾಮರ್ಥ್ಯದ ಹಕ್ಕಿ ಎದೆಗೂಡೊಳಗೆ ಕಾಲಿಟ್ಟುಕೊಂಡೇ ಸಮುದ...

ಯಾವ ಪ್ರತಿಮೆಗೆ ಯಾವುದುಪಮೆಯೋ ರೂಪಕಕೆ ಯಾವುದೋ ಆಕರ ಭಾವಯಾನದ ಭೌಮ ಕವಿಯೊಳು ಕವಿಸಮಯ ದೀಪಗಳಂಕುರ | ಧೃವಗಳುತ್ತರ ದಕ್ಷಿಣಗಳು ಸಮದ ಸಮತೆಗೆ ತೋರಣ ದಿಶಾ ದಿಸೆಯ ದೆಸೆಗಳೆಲ್ಲವೂ ಕಾವ್ಯ ಬಲ್ಮೆ ಮೇಲ್ಮೆಗೆ ಕಾರಣ | ಭಾಷೆ-ಭಾಷೆಯ ಭಾಷ್ಯ ಭಾಷಿಕ ಶಬ್ದ ...

ಎಲ್ಲೋ ಬೆಳೆದ ಗಿಡಮರಗಳ ಒಣ ತರಗಲೆಗಳ ಸವರಿ ಗಾಳಿ, ತೇಲಿ ಬಿಟ್ಟ ಕಣಜ ಬದುವಿನ ಕಾಳು, ಹೋಗಿದ್ದಾರೆ ಮೋಡಗಳ ಕರೆತರಲು ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ. ಯಾರಿಗೆ ಗೊತ್ತು ಕಾವು ಕೊಡುವ ಖಾತ್ರಿ ಬಹಳ ದೂರದಲ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....