ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ ಒಂದೇ ಸವನೆ ನಡೆದಿದೆ ಯಾರದೆ ಪರಿವಿಲ್ಲದೆ...

ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ ನೂಕಬಾರದೆ ಬ್ಯಾಸರವಾದರೆ?...

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ… ಲೆಕ್ಕ… ಈ ಹುಲ್...

ಸೂರ್ಯನ ಸುತ್ತ ಭೂಮಿ ಭೂಮಿಯ ಸುತ್ತ ಚಂದ್ರ ಏನಿದರ ನಿಜ ಮರ್ಮ…? ಮರ್ಮವೂ ಇಲ್ಲ ಗಿರ್ಮವೂ ಇಲ್ಲ ಹೇಳುತ್ತೇನೆ ಕೇಳಿ ಇದೆಲ್ಲ ನಮ್ಮ ನಮ್ಮ ಕರ್ಮ. *****...

ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ! ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ, ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು, ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ ಒಂದೊಂದೇ ಕಂಡಿ, ಒಂದೊಂದೇ ಗುಳ್ಳೆ, ಒಂದೊಂದೇ ಹುಳುಕು,...

ದಿನಾಂಕ : ೨೨-೦೫-೧೯೧೮ ರಂದು ಶ್ರೀ ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾನೆ ಕಿಟ್ಟಪ್ಪ ಮುಂದೊಂದು ದಿನ ಬೆಳಗೆರೆಯ ಜ್ಞಾನದ ಬೆಳಕಾಗುತ್ತಾರೆಂದು ಯಾರೂ ಅಂ...

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ ಅಥವಾ ಲೈಽಟ್ ಆಗಿ ಓದಿಬಿಡಬೇಕಾ… ಅಂತ ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು ಎದುರುಸಾಲಿನಲ್ಲಿ ಕುಳಿತ ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ ವಗೈರೆ ವಗೈರೆ ಕವಿಗಳಿಗೆ ಚುಚ್ಚಿ ಚುಚ್ಚಿ ಎರಡೆರಡು ...

ನಮ್ಮಮ್ಮ ಹೇಳಿದ್ಲು ‘ದೊಡ್ಡವ್ರು ಸತ್ರೆ ಆಕಾಶದಾಗೆ ಚುಕ್ಕಿ ಆಗ್ತಾರೆ ನಮ್ಮೊಂತೋರು ಸತ್ರೆ ಗುಡ್ಡದಾಗಿನ ಕಲ್ಲು, ಹೊಲದಾಗಿನ ಹುಲ್ಲು ಆಗ್ತೀವಿ’ ಅಂತ ಹುಡುಕುವುದಿಲ್ಲ ಸತ್ತ ಅಪ್ಪನ ಆಕಾಶದಲಿ ಕಳೆದುಹೋದ ಅಮ್ಮನ ಚುಕ್ಕಿಗಳಲಿ… ಎದುರಾಗುವ ಕಲ್...

1...3738394041...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...