ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ ನೇರಮಾಡಲು ಇವರು ಸೆಣಸುತ್ತಾರೆ ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ ಇವರ ಎದೆ ಏನೇನೋ ಹಾಡುತ್ತದೆ ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ ಮೊಗೆಯುತ್ತಾರೆ ಅಸಂಖ್ಯ ...

ಪ್ರಿಯ ಸಖಿ, ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬ...

ಚಿದ್ರೂಪನಂತೆ ತೊಳ ತೊಳಗಿ ಬೆಳಗುತಿಹ ದಿವ್ಯಜ್ಞಾನಿ ತಾತ ಸದ್ಗುಣದ ಕಣಿಯು ಬಹುಪೂಜ್ಯನೆಂದು ಮನ ಗಂಡೆನೆಂದೊ ಪೂತ ನಿಜತತ್ವವರಿತು ಗುರು ಪೀಠವೇರಿ ಮೆರೆದಿರುವ ಕರ್ಮಯೋಗಿ ವಿಜಯವನುಗೈದೆ ಅದ್ವೈತದೊಳಗೆ ಬಿಡು ನೀನೆ ಪರಮ ತ್ಯಾಗಿ ಇಂದ್ರಿಯವ ಜಯಿಸಿ ಬಂಧ...

ತುಂಬಿದೊಡಲ ಅಬಲೆ ಮೇಲೆ ಕಾಮಾಂಧರ ನರ್ತನ ತಾಯೆ ನಿನ್ನ ಒಡಲ ಮೇಲೆ ನಿತ್ಯ ರಕ್ತ ತರ್ಪಣ ಅರಳಲಿಲ್ಲಿ ತಾವು ಎಲ್ಲಿ ಫಲಪುಷ್ಪದ ನಂದನ? ಅತ್ತು ಅತ್ತು ಸತ್ತ ಭ್ರೂಣ ಬಿಕ್ಕಿ ಬಿಕ್ಕಿ ಅತ್ತ ’ಬಾನು’ ಜೀವ ಜೀವದಾರ್ತನಾದ ಕಾಣಲಿಲ್ಲ ಕುರುಡು ಜನಕೆ ಕೇಳಲಿಲ್...

ಒಳಗೆ ಇಳಿದು ಬಾ ಇಳಿಯುವಂತೆ ನೀ ಮಳೆಯು ಮಣ್ಣ ತಳಕೆ ಕೆಸರ ಮಡಿಲಿಂದ ಕೆಂಪನೆ ಕಮಲವ ಮೇಲೆತ್ತುವ ಘನವೇ ಹೂವಿನ ಎದೆಯಲಿ ಬಗೆಬಗೆ ಪರಿಮಳ ಬಿತ್ತುವಂಥ ಮನವೇ ನಿಂತ ಗಿರಿಗಳಿಗೆ ನಡೆಯುವ ನದಿಗಳ ಕರುಣಿಸುವಾ ಒಲವೇ ಆನೆ ಅಳಿಲುಗಳ ಅಂತರವೆಣಿಸದೆ ತಾಳುವಂಥ ನ...

ಕ್ಯಾರಿಯರ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಅವಳು ಕಾರಿನಿಂದ ಕೆಳಗಿಳಿದಳು. ತಲೆ‍ಎತ್ತಿ ಕೊಂಡು ತನ್ನ ಪರಿಚಿತ ಸ್ಥಳವನ್ನೊಮ್ಮೆ ವೀಕ್ಷಿಸಿ ನಿಧಾನವಾಗಿ ನಡೆಯತೊಡಗಿದಳು. ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮುಳುಗುವ ತಯಾರಿಯಲ್ಲಿದ್ದ. ಆಗ ತಾ...

ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ ಆಗಿಬಿಡುವುದು. *****...

1...2930313233...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...