ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ ಮುತ್ತಿನ ಕುಡಿಕೆ ಕೊಡು ಮಾಮಾ ಕೊಡು ಮಾಮಾ ತೆಳ್ಳಗೆ ಹಪ್ಪಳದಂತಿರುವೆ ಬೆಳ್ಳಗೆ ದೋಸೆಯ ಹಾಗಿರುವೆ ಮೆಲ್ಲ ಮೆಲ್ಲಗೆ ಮುಂದಕೆ ಹೋದರು ಕಡೆಗೆ ಇದ್ದಲ್ಲೇ ಇರುವೆ ಕಿತ್ತಳೆ ಕೊಡುವೆ ಬಾ ಕೆಳಗೆ ಮುತ್ತನು ಕೊಡುವೆ ಬಾ ಬಳಿಗ...

ಯಾರೋ ಟೈಗರ್ ವರದಾಚಾರ್ಯರನ್ನು ಭೇಟಿ ಆದಾಗ “ಏನು ಟೈಗರ್, ಹೇಗಿದ್ದೀರಿ? ಕೇಳಿದರು. ಅದಕ್ಕೆ ಉತ್ತರ: “ಟೈಗರ್ರ್! ನಾನೆಂತ ಟೈಗರ್? ದಿ ರಿಯಲ್ ಟೈಗರ್ ಈಸ್ ಎಟ್ ಹೋಂ” ಎಂದರಂತೆ ವರದಾಚಾರ್ಯರು! ***...

ಅಂಗವೆಂದರೆ ಲಿಂಗದೊಳಡಗಿತ್ತು. ಲಿಂಗವೆಂದರೆ ಅಂಗದೊಳಡಗಿತ್ತು. ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದರೆ, ಮಂಗಳದ ಮಹಾಬೆಳಗು ಕಾಣಿಸಿತ್ತು. ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣಂಘ್ರಿಗೆರಗಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ...

ಸೌಂದರ್ಯಂತಾದ ಕಣ್ಣು ಇದಕೆ ಸೌಂದರ್ಯಂತಾದ ಮಣ್ಣು            ||ಪ|| ಘಮಾ ಘಮಾ ಮೂಗಿಗೆ ವಾಸನೆ ಹಳದಿ ಕೆಂಪು ಬಣ್ಣದ ಹೂವ ಉಬ್ಬೂ ತಗ್ಗು ಸೀರೆ ಮುಚ್ಚಿದ ಬಳ್ಳೀಹಂಗೆ ಬಳಕೋ ಮೈನ ಮಾಂಸದಂಥ ಹಣ್ಣಿನ ಮಣ್ಣಿನ ಗೂಂಬೇನ್ನೋಡಿ ಜೊಲ್ಲು ಸುರಿಸಿ  ||ಸೌಂ||...

ಪ್ರೀತಿಯ ಅಣ್ಣನಿಗೆ ಶರಣು ಶರಣಾರ್ಥಿ, ಬಯಲಲ್ಲಿ ಬಯಲಾಗಿ, ಕೈಲಾಸ ಸೇರಿ ಸುಖವಾಗಿರೋ ನಿನಗೆ ನಮ್ಮ ಭೂಲೋಕದ ಮಂದಿ ಬದಲಾದ ಕಥೆನಾ ಒಂದೀಟು ಹೇಳಿಕೊಂಬಾನ ಅನ್ನಿಸಿದ್ದರಿಂದ ಈ ಪತ್ರ ಸಾಮಿ. ನೀನು ಬ್ರಾಂಬ್ರಾಗಿ ಹುಟ್ಟಿದರೂ, ವೈದಿಕ ಧರ್ಮದಾಗಿನ ಮೌಢ್ಯ ...

“ಪಾಪ! ಅಂವ ಮಾಡಬಾರದ್ದ ತಪ್ಪೇಽನ ಮಾಡ್ಯಾನ ಮನುಷ್ಯಾ ಮಾಡ್ದ ಏನ್ ಹೆಣಾ ಮಾಡ್ತತಿ” “ಮೋನಿ ಅಷ್ಟ ಮೋಡೀಽನ ಮಾಡ್ಯಾಳ ಅಂದ ಮ್ಯಾಲ ಅವಂದಽ ತಪ್ಪಂತ ಹೆಂಗಂತೀರಿ, – ಆಕಿಂದನೂ ತಪ್ಪಽ ಹೌದಲ್ಲೋ ಮತ್ತಽ” “ಅಂವ ...

ಇಲ್ಲಿ ಗುಲ್ಮೊಹರ್‍ ಹೂವುಗಳು ದಟ್ಟವಾಗಿ ಬೀಳುತ್ತಿವೆ. ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ. ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ ಏನೋ ಹೇಳುವ ಹಾಗಿವೆ. ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ ಸುಮ್ಮಸುಮ್ಮನೆ ನಗುತ್ತಿ...

ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ ಪುಸ್ತಕಗಳು! ಕೆಲವಂತೂ ಮಣಭಾರ. “ಈ ಆಥರಿನ ಈ ಪುಸ್ತಕದ...

1...3637383940...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...