Home / ಕವನ / ಕವಿತೆ / ಕ್ಲಿಂಟನ್

ಕ್ಲಿಂಟನ್

“ಪಾಪ! ಅಂವ ಮಾಡಬಾರದ್ದ
ತಪ್ಪೇಽನ ಮಾಡ್ಯಾನ
ಮನುಷ್ಯಾ ಮಾಡ್ದ ಏನ್
ಹೆಣಾ ಮಾಡ್ತತಿ”
“ಮೋನಿ ಅಷ್ಟ ಮೋಡೀಽನ ಮಾಡ್ಯಾಳ
ಅಂದ ಮ್ಯಾಲ ಅವಂದಽ ತಪ್ಪಂತ
ಹೆಂಗಂತೀರಿ, – ಆಕಿಂದನೂ ತಪ್ಪಽ
ಹೌದಲ್ಲೋ ಮತ್ತಽ”

“ಅಂವ ಪ್ರೆಸಿಡೆಂಟ್ ಆದ್ರ ಏನಾಽತು
ಮನಷ್ಯಾನ ಹೌದಲ್ಲೋ ಮತ್ತಽಽ”
“ಆಗಿದ್ದಾಗಿ ಹೋತ್ರಪಾ
ಅದನಽ ದೊಡ್ದದ ಮಾಡಬಾರದ
ನಿಮಗಽ ಬ್ಯಾರೆ ಕೆಲಸ – ಬಗಸಿ ಇಲ್ಲೇನು,
ಟಿ.ವಿ. ದಾಗ ಅವ್ರು ಹೇಳಿದ್ರು
ಪೇಪರದಾಗ ನೀವು ಓದಿದ್ರಿ –
ದೊಽಡ್ಡ ಮಾತಾಡಕ್ಹತ್ತಾರ”

“ನಿಮಗ ಏನಽರ ಗೊತ್ತತ್ತೇನ
ಲವ್ವ ಗಿವ್ವು ( love, give)
ಅಂದರ ಏನಂತ –
‘ಹೆಂಡತಿ ಅದಾಽಳಲ್ಲ’
ಆಕಿಽ ಕಿಮ್ಮತ್ತು ಆಕೀಗೆ ಇದ್ದ ಇರ್‍ತತಿ
ಈ ಮೋನಿ ಇದ್ರ ಇರವಳ್ಯಾಕ
ಅದರ ಕಿಮ್ಮತ್ತು ಅದಕ ಇದ್ದಽ ಇರತತಿ
ಇಂವ ಆಟಽ ತುಡುಗು ಬೆಣ್ಣಿ
ತಿಣ್ಣಾಕ ಹೋಗಿ ಸಿಗಬಾರ್‍ದಿತ್ತು, ಸಿಕ್ಕ
ಇನ್ನೇನ ಮಾಡಕ ಆಗ್ತತಿ
ಇಂವು ಆಟಽ ಸುದ್ದಿ ಆಗೋದಕ್ಕಿಂತ
ಮೊದಲ ಹೇಳಬೇಕಾಗಿತ್ತು ಹೇಳಲಿಲ್ಲ
ಆಮೇಲರೆಽ ಆಟ ‘ಹೂಂ’ ಅಂದೀಽರ
ಮುಗಿತಿತ್ತು”

“ಅಬರು ಉಳಿಸಿಕೊಳ್ಯಾಕ ಹೋಗ್ಯಾನ
ಖರೇ ಆಕಿ ಬಿಡತಾಳೇಽನ
ಅರವಿ ಅಂಚಡಿ ಸಹಿತ ಧಾಖಲ ಮಾಡಿ
ಅಂವ ಹ್ಯಾಂಗ ಪ್ರೀತಿಸ್ತಿದ್ದ ಅನ್ನೋದು
ಎದಿ ಉಬ್ಬುಬ್ಬಿಸಿ ಹೇಳಿ
ತನ್ನ ಹಳೇಽ ಸೇಡ ಏನೇನೋ
ಇರಬೇಕಽ ತೀರಿಸಿಕೊಂಡಬಿಟ್ಲ.
ಈಗ ಇಂವನ ಮುಖಾ
ಇಂಗ ತಿಂದ ಮಂಗ್ಯಾನ ಹಂಗ ಆಗೇತಿ
ನೋಡಿದ್ರಿಲ್ಲೋ ಟಿ.ವಿ.ದಾಗ”

“ಹಿಂಗಽ ಮನಿ ವಿಷಯ
ಬೀದಿಗೆ ಎಳಿಬಾರ್‍ದಿತ್ತು’
“ಆಗಿದ್ದಾಗಿಹೋತು ಬಿಡ್ರಪ್ಪ ಇನ್ನ
ಹೊಳ್ಳಿಽ ಹೊಳ್ಳಿಽ ಅದಽ ಮಾತಾಡವ್ರು
ಅಂವ ದೇಶಕ್ಕೆ ಏನೇನ
ಸಾಧನಾ ಮಾಡ್ಯಾನಽ ಬಿಟ್ಟಾನಽ
ಆನ್ನೋದಟ ಮಾತಾಡ್ರಿ”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...