ಮೌಸ್ ಜೊತೆ ಬೆರಳು ಆಡುತ್ತಿದ್ದರೂ ಮನಸ್ಸನ್ನು ಕಂಪ್ಯೂಟರ್ ಕಡೆ ಕೇಂದ್ರಿಕರಿಸಲಾರದೆ ಗಾಯನ್ ಕೊಂಚ ಡಿಸ್ಟರ್ಬ್ ಆಗಿದ್ದ. ಬೆಳಗ್ಗೆಯೇ ಬಂದ ಮಮ್ಮಿ ಫೋನ್ ಅವನನ್ನು ಅಸಹನೆಗೀಡು ಮಾಡಿತ್ತು. ಇವತ್ತು ಸೂರ್ಯ ಗ್ರಹಣ. ಅದು ನೈಸರ್ಗಿಕವಾಗಿ ನಡೆಯೋ ಒಂದು ...

ಶೀನಣ್ಣ: “ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!” ಶಾಮಣ್ಣ: “ಹಾಗಾದರೆ ಮನೇಲಿ?” ಶೀನಣ್ಣ: “ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!” ***...

ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ? ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ? ಭೂಮಿ ಬಾಯ ತರೆಯುತಿದೆ ಬಾನು ಬೆಂಕಿ ಸುರಿಯುತಿದೆ ಧಾರೆ ಒಣಗಿ ಚೀರುತಿದೆ ಚಿಲುಮೆ ಎದೆಯಲಿ ಮುಗಿಲ ಬರುವ ಕಾಯುತಿದೆ ಮಳೆಯ ಕನಸ ನೇಯುತಿದೆ ನಿನ್ನ ಬಯಸಿ ಬೇಯುತ...

ರುಕ್ಸಾನಾ, ಯಾಕಿಲ್ಲಿ ಅಳುತ್ತಿರುವಿ ಮರುಭೂಮಿಯ ಬೇಗೆಗೆ ನಿನ್ನ ಭಾವನೆಗಳೂ ಉದಯಿಸುತ್ತಿಲ್ಲ ಇದ್ದ ಬಿದ್ದ ಆಶಾಂಕುರಗಳೂ ಕಮರಿಸಿಕೊಳ್ಳುತ್ತಿರುವಿ. ಬಂಗಾರ ಪಂಜರವ ಮುದ್ದಿನ ಗಿಳಿಯೇ ಹೊರಗೊಂದಿಷ್ಟು ಬಾ… ನೋಡು, ಆಲಿಸು, ಹಾರಾಡು ಕುಣಿದಾಡು ಆ...

ಪ್ರಣಾಳ ಶಿಶುಗಳಿಂದರೆ ಗಾಜಿನ ಬಾಟಲಿಗಳಲ್ಲಿ ಸ್ತ್ರೀ ಅಂಡಾಣು ಗಂಡಿನ ಅಂಡಾಣುಗಳನ್ನು ಗರ್ಭಕೋಶದ ಹೊರಗೆ ಫಲೋತ್ಪತ್ತಿ ಮಾಡಿ, ಭ್ರೂಣವನ್ನು ಉಂಟುಮಾಡಿ ಶಿಶುಗಳನ್ನು ಪಡೆಯಲಾಗುವುದಕ್ಕೆ ಪ್ರಣಾಳ ಶಿಶು ಎಂದು ಕರೆದರೂ ಸಹ ಈ ವಿಜ್ಞಾನವು ಈ ಮಾನವನಿಗೆ ಎ...

‘ಯಾರು ತುಂಬಿಟ್ಟರೋ ಈ ಬಿಳಿಬಿಳಿ ಅಕ್ಕಿಯೊಳಗೆ ನೊರಜುಗಲ್ಲು ಕರಿ ಮಣ್ಣೆಂಟೆ ಹುಲ್ಲು ಬೀಜ ಭತ್ತ, ಹೊಟ್ಟು?’ ಸದಾ ಇವರ ಗೊಣಗು ಮೊಗದಲ್ಲಿಲ್ಲ ನಗು ಎಲ್ಲ ಶುದ್ಧವಿರಬೇಕು ಬೇಕೆಂದಾಕ್ಷಣ ಬಳಸುವಂತಿರಬೇಕು ಇವರಿಗೆ ತಿಳಿದಿಲ್ಲ ತಪ್ಪು ಅಕ್ಕಿಯದಲ್ಲ ! ಇ...

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ|| ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳ...

ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡು ದಿವಸ ...

ಮಗಳ ಮದುವೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಹೀಗೇಕೆ ಎಂದು ಹೆಣ್ಣಿನವರು ಆತಂಕಗೊಂಡಾಗ ವರನ ಕಡೆಯವರೊಬ್ಬರು ಹೇಳಿದರು: “ವರ ವಕೀಲ ವೃತ್ತಿಯಲ್ಲಿದ್ದಾರೆ; ಹಿಯರಿಂಗ್ ಅಡ್ಜರ್ನ್ ಮಾಡಿ ಮಾಡಿ ಅಭ್ಯಾಸವಾಗಿ ಹೋಗಿದೆ. ಅಭ್ಯಾಸಬಲ ಆಷ್ಟೆ...

ಎಂದೂ ಇರದ ನೋವು ಇಂದೇಕೆ ಹೊಮ್ಮಿದೆ, ಹಿಂಡಿದೆ ನನ್ನ ಮನವನ್ನೆಲ್ಲ ಉಲ್ಲಾಸದ ಭಾವ ಇಷ್ಟೂ ಇಲ್ಲ! ಬಾನೊಳಗೆ ಮುಗಿಲೇ ಇಲ್ಲ ಬರೀ ಬೋಳು ಮೌನ, ಎಲೆಯೊಂದೂ ಅಲುಗುತ್ತಿಲ್ಲ ಸೃಷ್ಟಿ ಚಲನ ಹೀನ. ಏತಕೆ ಲೋಕ ಈ ರೀತಿ ಕಂಗಾಲಾಗಿದೆ, ಬರಿ ಭೀತಿ ಕಾಡಿದೆ ಸೃಷ್ಟ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....