ಮೂಲದಲ್ಲಿ ಆದಿಮಾನವನು ಬೇಟೆಯಾಡಿ ಪ್ರಾಣಿ, ಪಕ್ಷಿಗಳನ್ನು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಗೆಡ್ಡ ಗೆಣಸು, ಬೇರು, ಸಸ್ಯ ಹಾಗೂ ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದ ಕ್ರಿ.ಪೂ. ೯೦೦೦ ವೇಳೆಗೆ ಮಧ್ಯಪೂರ್ವ ಪ್ರಾಂತ್ಯಗಳ ಜನರು ಬೇಸ...

ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, “ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?” ಕೇಳಿದರು. ಶೀನಣ್ಣ: “ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ.” ಶಾಮಣ್ಣ: “ಗಂಡು ಹೇಗೆ ಇರಬೇಕು?&...

ಹದ್ದು ಹದ್ದು ಹದ್ದು ಅಣ್ಣ ಸುತ್ತಮುತ್ತಲೂ ರಣಹದ್ದುಗಳ ರಾಜ್ಯವಾಯ್ತು ಎತ್ತೆತ್ತಲೂ ||ಪ|| ರಕ್ತ ಮಾಂಸ ತಿನ್ನುತ್ತಾವೆ ಶಕ್ತಿ ಹೀರಿ ಒಗೆಯುತಾವೆ ಗೊತ್ತೆ ಆಗದಂಥ ರೀತಿ ಕೊಲ್ಲುತಾವೆ ಕೆಂಗಣ್ಣು ಕೆಕ್ಕರಿಸುತ ಕೊಕ್ಕು ತಿಕ್ಕಿ ಡೊಕ್ಕರಿಸುತ ಹೆದರಿಸು...

ಕಾಲು ನೆಲಕ್ಕೆ ಊರಿದೊಡನೆಯೇ ಪಚಕ್ ಪಚಕ್ ಸದ್ದು, ಹಸಿರ ಹುಲ್ಲಿನ ಮೇಲೆ ಮುತ್ತಿನಂತೆ ಕಾಣುತ್ತಿದ್ದ ಇಬ್ಬನಿ ಮೇಲೆ ನಡೆಯುವಾಗ ಬರಿಗಾಲಿಗೆ ತಂಪಿನ ಅನುಭವ. ಕಚಗುಳಿ ಇಡುತ್ತಿದ್ದ ಆ ಹುಲ್ಲ ಮೇಲಿನ ನಡಿಗೆ ಚೇತೋಹಾರಿಯಾಗಿತ್ತು. ಪುಟ್ಟ ಮಗುವಿನಂತೆ ಕೈ...

ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ? ಕಣ್ಣು ತಪ್ಪಿಸಿ ಹಾರಿ ಬೇಲಿ ಸಾಲನು ಮೀರಿ ಅಡವಿ ಪಾಲಾಯಿತೋ ದಾರಿ ತಪ್ಪಿ! ಮನೆಯ ಕಾಳನು ತಿಂದು ಬೇಸರಾಗಿ ವನದ ತೆನೆಯನು ತಿನುವ ಚಪಲ ರೇಗಿ ಹೊಸ ಸಂಗ ಬೇಕೆನಿಸಿ ಹಾರಿತ...

ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ’ ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. “ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ’ ಎಲ್ಲಿದೆ ಕೊಂಚ ತ...

“ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ” ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ ಹಣ ಕೊ...

ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨ ದಶಲಕ...

ತನ್ನಾಳ ಅಗಲ ಶಕ್ತಿ ತಿಳಿಯದಿವರು ದಡಗಳ ಕಟ್ಟಿ ನನಗೇ ಮಿತಿಯೊಡ್ಡುವರೇ? ತೀರಗಳಾಚೆಯ ಬದುಕಿಗೆ ತೆರೆಯೆಳೆಯುವರೇ? ರೋಷಾವೇಶದಿ ಹೂಂಕರಿಸಿ ಕಡಲು ದೈತ್ಯಾಕಾರದ ತೆರೆಗಳನ್ನೆಬ್ಬಿಸಿ ದಡಕ್ಕೆ ಬಡಿದು ಕಣ್ಣರಳಿಸಿ ಏನಿದೆ ಇಲ್ಲಿ ಬರೀ ರಸ ಹೀರಿ ಒಗೆದ ಕಸ ಬ...

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು) ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ|| ಪುಣ್ಯಭೂಮಿ ನೀ ಗಣ್ಯಭೂಮಿ ...

1...2425262728...37

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...