Month: August 2013

#ಕವಿತೆ

ಮುಖಾಮುಖಿ

0

ಮನಸಿನಾಳದಿಂದ ಎದ್ದ ಬುದ್ಧ ಈಗ ಮತ್ತೆ ಬಂದಿದ್ದಾನೆ. ಮೊದಲಿನಂತೆಯೇ ರಾತ್ರಿಯಿಡೀ ದಿಟ್ಟಿಸಿನೋಡುತ್ತಾ ನೂರು ಗೊಂದಲಗಳ ಮೂಡಿಸಿ ಕಾಡುತ್ತಾನೆ. ಕೇಳುತ್ತಾನೆ ಒಂದೇ ಪ್ರಶ್ನೆ “ಈಗ… ಈಗ ಬರುವೆಯಾ ನನ್ನೊಡನೆ?” ನನ್ನದು ಮತ್ತದೇ ಹಳಸಲು ಕಾರಣಗಳು ಅವನಿಂದ ತಪ್ಪಿಸಿಕೊಳ್ಳಲು ಬದುಕಿನಾಮಿಷದ ನೆವಗಳು! ನಗುತ್ತಾ ಒಳಹೋಗಿ ಬಿಡುತ್ತಾನೆ ಆ ನಗೆಗೆಷ್ಟು ಅರ್ಥಗಳು! ನಿತ್ಯವೂ ಕಾದೆಣ್ಣೆಯಲಿ ಸಿಡಿದು ಸತ್ತರೂ ಸಾವಿರ ಸಾಸಿವೆಗಳು […]

#ಕವಿತೆ

ಅನುಮಾನ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ ಯಾವುದು ಪ್ರಬಲ ಯಾವುದು ನಿತ್ಯಸತ್ಯ ಎಂಬುದು ನನಗಿನ್ನೂ ಅನುಮಾನ ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ ಬೇಡವಾಗುತ್ತವೆ ಅಲ್ಲಿ ಕಟಗುಟ್ಟುವ ಕಪ್ಪೆಸದ್ದೊಂದೆ ಕಿವಿಕೊರೆಯುತ್ತದೆ ರೋಗಿಯ ವಾಸಿ ಮಾಡಿ ಬಂದವನೇ ರೋಗಿಗಿಂತ ಮುಂಚೆ ತಾನೇ ಗೊಟಕ್ಕೆಂದನೇನೋ ತೊಳೆಯ […]

#ನಾಟಕ

ಅಗಿಲಿನ ಮಗಳು

0
Latest posts by ಹೊಯಿಸಳ (see all)

ವರ್ಗ: ಬಾಲ ಚಿಲುಮೆ / ನಾಟಕ ಪುಸ್ತಕ: ಅಗಿಲಿನ ಮಗಳು ಲೇಖಕ: ಹೊಯಿಸಳ ಕೀಲಿಕರಣ: ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ ಪಾತ್ರಗಳು ಅಗಿಲಿನ ಮರ:-ಉದ್ದ ಅಂಗಿ ತೊಟ್ಟು, ತಲೆ ಕೆದರಿ ನಿಂತವರು ದೊಡ್ಡವರು ಯಾರಾರಾದರೂ ಸರಿ. ಗೊಗ್ಗರ ದನಿಯಲ್ಲಿ ಮಾತಾಡಬೇಕು. ಉದ್ದ ಅಂಗಿ ಬಾಯಿಬಿಡಿಸಿ ಒಳಗೆ ಏನಾದರೂ ಬಚ್ಚಿಟ್ಟುಕೊಳ್ಳುವ ಹಾಗಿರಬೇಕು. ಅಗಿಲಿನ ದೇವತೆ:- ತೆಳ್ಳಗೆ […]

#ನಗೆ ಹನಿ

ನಗೆ ಡಂಗುರ – ೮೦

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಒಬ್ಬಳು ತನ್ನ ಎಂಟು ಮಕ್ಕಳನ್ನು ಬಸ್ಸಿನಲ್ಲಿ ಕುಳ್ಳರಿಸಿಕೊಂಡು ಪ್ರಯಾಣ ಮಾಡಿತ್ತಿದ್ದಳು. ಮಕ್ಕಳ ಚೇಷ್ಟೆಯನ್ನು ಸಹಿಸಲು ಕಷ್ಟ ಪಡುತ್ತಿದ್ದಳು. ಯಾರೋ ಪ್ರಯಾಣಿಕರೊಬ್ಬರು `ಏನಮ್ಮಾ ತಾಯಿ, ಅರ್ಧದಷ್ಟು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಬಾರದಿತ್ತೆ? ಸಂಭಾಳಿಸಲು ಎಷ್ಟು ಕಷ್ಟಪಡುತ್ತಿದ್ದೀ ಎಂದ. `ಈಗ ನಾನು ಅದನ್ನೇ ಮಾಡಿರೋದು. ಅರ್ಧದಷ್ಟು ಮಕ್ಕಳು ಮನೆಯಲ್ಲಿವೆ’. ***

#ಕವಿತೆ

ನೀ ಯಾರೋ ನಾ ಯಾರೋ!

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? ಧ್ಯಾನ ಸ್ಮರಣೆ ಜಪಗಳಲ್ಲು ತೂರಿ ಬರುವುದೇಕೆ? ನಿನ್ನ ನಾನು ನನ್ನ ನೀನು ಹೀಗೆ ಕಾಡಬೇಕೆ? ನಮ್ಮರಿವಿಗೆ ನಿಲುಕದಾ ಯಾವ ಸ್ನೇಹ ನಮ್ಮದು? ಬುದ್ಧಿ ಭಾವದಾಚೆಯ ಯಾವ ದಾಹ […]

#ಕವಿತೆ

ಮಕಮಲ್ಲಿನ ಪಕ್ಷಿ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಅದೇ, ಆ ಹೂದೋಟದಲ್ಲಿ ನಿಂತ ನಿನ್ನ ಪ್ರತಿಮೆಯ ನೋಡಿ ಒಂದು ಎರಡು ಮೂರು ನಾಲ್ಕು ಸುತ್ತು ಹೊಡೆದು ಗಕ್ಕನೆ ನಿಂತಿತೊಂದು ಮಕಮಲ್ಲಿನ ಪಕ್ಷಿ ಕನ್ನಡದ ನೀರು ಕುಡಿದ, ಕಾಳು ತಿಂದ ಪಕ್ಷಿಯೇ ಇರಬೇಕದು ’ಕುವೆಂಪು’ ಎಂದಿತು ಎನಾಶ್ಚರ್ಯ! ಕುವೆಂಪುವಿನ ಹಸಿರುಕಾಡು ಸುತ್ತಿ ನೀಲಿ ಬಾನಂಗಳದಿ ಹಾರಾಡಿ, ದೇವರ ಋಜು ನೋಡಿದ್ದೇನೆ ಎನ್ನಬೇಕೆ? ಮಹದಾಶ್ಚರ್ಯ !! ರಾಮಾಯಣ […]

#ಅಣಕ

ರಾಜಕೀಯದಾಗೀಗ ವಂಡರ್ಮೆ ಥಂಡರ್

0

ಹೆಂಗಾತಪ್ಪಾ ಅಂದ್ರೆ ಕೊಮಾರಸ್ವಾಮಿ ಮಂತ್ರಿಮಂಡಲದ ವಿಸ್ತರಣೆ ಮಾಡಿ ಮೊದಲೇ ಉರಿತಿದ್ದ ಬೆಂಕಿಗೆ ತುಪ್ಪ ಹಾಕ್ದ ಅನ್ನಂಗಾಗೇತ್ ನೋಡ್ರಿ. ರೇವಣ್ಣನ್ನ ಮಂತ್ರಿ ಮಾಡಬೇಕಂತ ದೊಡ್ಡಗೋಡ್ರು ಯಾವಾಗ ಕಚ್ಚೆ ಕಟ್ಟಿಕ್ಯಂಡು ರಚ್ಚೆ ಹಿಡಿದ್ರೋ ತಡೆಯೋ ಗಂಡಾರ್ರಾ ಯಾರ್ರಿ? ಸೊಸಿ ಭವಾನಿ ಯಾವಾಗ ಸಾಕ್ಷಾತ್ ಅಂಬಾಭವಾನಿ ಆಗಿ ತ್ರಿಶೂಲ ಹಿಡ್ದು ಹೆದರಿಸ್ತಾ, ‘ಅನಿತಾಳ ಗಂಡ ಸಿ.ಎಂ. ಆಗಿ ಮೆರಿತಿರಬೇಕಾದರೆ… ನಾನ್ […]

#ಕವಿತೆ

ಬಾಗಿಲಾಚೆಯ ಮೌನ

0

ಏಕಿಂಥ ಬಿಗುಮಾನ ಬಾಗಿಲಾಚೆಯ ಮೌನ? ಹೊಸ್ತಿಲವರೆಗೂ ಬಂದು ನಿಂತು ಮುಖವ ಮರೆಸುವುದೇ ಇಂತು? ಹೇಳದೇ ಬರುವವರು ಕೇಳದೇ ಹೋಗುವವರು ಎಲ್ಲರಿಗಾಗಿ ವಿಸ್ತಾರವಾಗಿ ತರೆದೇ ಇದೆ ಬಾಗಿಲು. ನೀನು ಅತಿಥಿಯೂ ಅಲ್ಲ ದೇವಮಾನವನೂ ಅಲ್ಲ ನನ್ನದೇ ಕಳೆದು ಹೋದ ಒಂದು ತುಣುಕು ಮೌನ ಮಾತ್ರ! ನಾನು ನಿನಗಾಗಿ ಕಾಯುತ್ತಿಲ್ಲ ಕಾಲ ಅನಂತ ನನಗೆ ಅವಸರವಿಲ್ಲ ಬಾರದಿದ್ದರೇ ಎಂಬ […]

#ಕವಿತೆ

ಪ್ರಜಾರಾಜ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ ಇವನು ಹುಟ್ಟಿದ್ದೇ ಹಸಿಬಿಸಿಯಾಗಿ ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ ಭೂಮಿಗವತರಿಸಿದ ಹೆಳವನಾಗಿ ತೆವಳುವಿವನನು ಮಡಿಲಲ್ಲಿ ಕಟ್ಟಿಕೊಂಡು ಸಾಗುವ ನಮಗೆ ಹತ್ತಿದೆ ಶನಿ ಇವನ ಕೈಯಿಂದ ಕಡ್ಡಿಯೂ ಆಚಿಂದೀಚೆಗಾಗದು ಕೈತುತ್ತು ತಿಂದು […]

#ಸಣ್ಣ ಕಥೆ

ಭಾವನಾಪ್ರಣಯೋದಂತ ಕಥೆ

0
ಬುಸಿರಾಜು ಲಕ್ಷ್ಮೀದೇವಿ ದೇಶಾಯಿ
Latest posts by ಬುಸಿರಾಜು ಲಕ್ಷ್ಮೀದೇವಿ ದೇಶಾಯಿ (see all)

ಅಂದಿನ ವೈಭವ, ಆಳ್ವಿಕೆಯನ್ನು ಹೃದಯದಲ್ಲಿ ಭದ್ರವಾಗಿಟ್ಟುಕೊಂಡು ಸಾಕ್ಷಿಯಾಗಿ ನಿಂತಿರುವ ತುಂಗಭದ್ರೆ ನಾಸ್ಟಾಲ್ಜಕ್ಕಾಗಿಗಿ ಇದ್ದಾಳೆ ಎನಿಸುತ್ತೆ. ಒಮ್ಮೆ…..ಒಂದುಸಲ.. ಶ್ರೀಕೃಷ್ಣದೇವರಾಯರನ್ನ ನೋಡಿದರೆ…..ತಾ ಧನ್ಯಳಾದಂತಹ ಭಾವ ನಿರೀಕ್ಷಿಸಿದಂತಿದ್ದಾಳೆ. ಕೃಷ್ಣದೇವರಾಯರ ಕಾಲದ ತುಂಗಭದ್ರೆ ಅವರ ಹಾಗೆ ಕಾಲದಿಂದ ನಿರ್ಗಮಿಸಿದರೂ ಆ ಪ್ರವಾಹದ ಜೊತೆ ಹೊಡುಕೊಂಡು ಹೋಗಿದ್ದು ನೀರು ಮಾತ್ರವೇ.  ನೆನಪುಗಳಲ್ಲ! ನದಿತೀರದಲ್ಲಿ ಕುಳಿತಿದ್ದ ಜೋಡಿ…ನದಿ ವಹಿಸಿದ ಗಂಭೀರತೆಯ ತಾವೂ ಹಂಚಿಕೊಂಡಂತಿದೆ. ಆತ..ಹೆಸರು […]