
ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....
ಯಾರೋ ಬಂದು ಬಾಗಿಲು ತಟ್ಟಿದಾಗ ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು. ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ ಅದನ್ನು ತಟ್ಟುವ ಕೈಗಳ ಹದದಲ್ಲಿದೆ. *****...
ಒಂದು ಪರಿಪೂರ್ಣ ರೊಟ್ಟಿಗಾಗಿ ಎಷ್ಟೊಂದು ಹಸಿವಿನ ಘಳಿಗೆಗಳು ಸಾಯಬೇಕು. ಶುಭ್ರ ಬೆಳಗಿಗಾಗಿ ನಾವೂ ಹಟ ಹಿಡಿದು ಕಾಯಬೇಕು....













