Home / ಕವನ / ಕವಿತೆ

ಕವಿತೆ

ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ ಯಾವ ದೇವರ ಪ್ರೀತಿಗಾಗಿ ನದಿ ಹರಿಯಿತೊ ಕಣಿವೆಯಲಿ ಆ ದ...

ಇಂದು ಏನಾಗಿಹುದೆ, ಗೆಳತಿ ಏಕೆ ಸಡಗರಗೊಳ್ವೆನೇ? ಕಡಲಿನಗಲದ ಕೇರಿ ಹರಹನು ಹಾರಿಬರುವೆಲರಾರ ದೂತನೆ, ಸುದ್ದಿ ಯಾವುದ ಪೇಳ್ವನೇ? ಕತ್ತಲಿದು ಮುನ್ನೀರಿನಂದದಿ ತಿರೆಯ ಮುಳುಗಿಸಿ ಹಬ್ಬಿದೆ; ಒಡೆದ ಹಡಗುಗಳಂತೆ ಮನೆ ಮಠ ಅದರ ತಲದೊಳು ಬಿದ್ದಿದೆ-ಮನ ಬೆದರಿ...

ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...

ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ ಪೊನ್ನ ಜನ್ನ ಕುಮಾರವ್ಯಾ...

ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ ಅರಳಿದ ಗುಲಾಬಿಯ ಹ...

‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ, ಆಳರಸುಮನೆತನಕೆ ! ಇದು ಎಂಥ ಅಳಿಗಾಲ? ...

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ ನಿನ್ನ ಗೆಳತಿಯ ಮರೆತು ಯಾಕೆ ಹೋದೆ ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ ಅಡಗಿರುವ ಸುಂದರಿಯ ಯಾಕೆ ಮರೆತೆ ಓ ಗೆಳೆಯ ಬಾ ಇಲ್ಲಿ ಈ ಮಳೆಯ ನಾಡಿನಲಿ ಆ ಹಳೆಯ ಜಂಗುಗಳ ನೀ ತೊಳೆದು ಬಾ ಈ ಹಸಿರ ಹೊಳೆಯಲ್ಲಿ ಈ ಹೂವ...

ನಾನ್ ಇನ್ನಾರ್‍ಗೋ ನೋಡ್ದೇಂತ್ ಯೋಳಿ ಇಲ್ದಿದ್ ಅತ್ತೀನ್ ಇಂಜಿ ಸಿಕದಿದ್ ಬಿತ್ತಾನ್ ಎತ್ತೋಕ್ ನೋಡಿ ರಾಂಗ್ ಮಾಡ್ಬಾರ್‍ದು ನಂಜಿ. ೧ ನಿದ್ದೇಲ್ ಇಡ್ದಿ ನನ್ನ ಎಬ್ಬಿಸ್ತ ‘ನಿನ್ ಎಸರೇನ್?’ ಅಂತನ್ನು- ‘ಪುಟ್ನಂಜಿ’ ಅಂತನ್ದೆ ಓದ್ರೆ ಮಾತಿನ್ ಮೆಯ್ಗೆ ...

ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ ರಕ್ಷಕನು ಎಂದು ತಿಳಕೊಂಡ...

ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು ತಿಳಿ ಮೋಡದಂತೆ ಮನ ಘನವಾಗು ಬ್ರಹ್ಮಾಂಡದಂತೆ ಮನ ಸಮಸ್ತಲ...

1...5960616263...577

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...