ಜೀವ ಬಗಿಸಿತು ಹಿಂಗ ಹ್ಯಾವ ಮಾಡಲಿ ಹೆಂಗ
ತಾಯಿ ನಿನ್ನಾ ಮಾರಿ ನೋಡಲೆಂಗ
ಯಮನೂರಿನಾ ಮಾವ ಬಾಳ ಮಾಡ್ಯಾನ ಜೀವ
ತಂದೆ ನಿನ್ನಾ ಪಾದ ಕಾಣಲೆಂಗ
ಆತೂಮ ಅರವಟಿಗಿ ತಲಿತುಂಬ ಚಟುವಟಿಕಿ
ಆತ್ಮರಾಯಾ ನಿನ್ನ ಪಡಿಯಲೆಂಗ
ಲಿಂಗ್ಸೂರ ಶರಣಯ್ಯ ಗವಿಮಠದ ಗುರುಮಯ್ಯ
ಕರೆದಾರ್‍ನನ್ನ ಬಾಳ ಬರಲಿ ಹೆಂಗ
ಹಳವೂರ ಹಳವಂಡ ಕರಿಮಾಯಿ ಜಗಭಂಡ
ಉದ್ದಂಡ ಇರಭದ್ರ ಕೂಗತಾನೊ
ಏನು ಮಾಡಲಿ ತಾಯಿ ಗೋಳು ಯಾರಿಗೆ ಹೇಳ್ಲಿ
ಅಣ್ಣ ಶರಣೂರಣ್ಣ ಕರಿಯತಾನೊ
ಮ್ಯಾಲ ಹಕ್ಕಿಯ ಹಾಡು ನೋಡ ಜಂಗಮ ಬೀಡು
ಹುಬ್ಬಳ್ಳಿ ಗುರುಸಿದ್ಧ ಕಂಡುಬಿಟ್ಟೆ
ಕರಿಯ ಕಂಬಳಿ ಕೊಟ್ಟೆ ಬಿಳಿಯ ಕಂಬಳಿ ಉಟ್ಟೆ
ಗುರುಸಾಮಿ ಗುರುಲಿಂಗ ಪಡೆದುಬಿಟ್ಟೆ
*****