ಗ್ನಾನದ್ ದೀಪ

ಯೆಂಡ ಕುಡದೋನ್ ಕಂತೇಂತ ಯೋಳಿ
ನೆಗದೆ ಯೋಳಾದ್ ಕೇಳು;
ಒಂದ್ ದಿನಾರ ಸಾಜಾ ತಿಳಕೊ-
ಇದ್ದೇ ಇರತೈತ್ ಗೋಳು! ೧

ಬೀದಿ ದೀಪ ಇರತೈತ್ ಅಂಗೇ!
ಇರೋ ಜಾಗದಾಗೇನೆ;
ನಡಿತಾನಿದ್ರೆ ನೆಳ್ಳೊಂದ್ ಮಾತ್ರ
ಬತ್ತೈತ್ ಯಿಂದಾಗೇನೆ. ೨

ದೀಪದ್ ಬೆಳಕು ಬೇಕಂತ್ ಅಂದ್ರೆ
ವೋಗ್ಬೇಕ್ ಅದರ್ ತಾಕೇನೆ!
ನೆಳ್ಳಿನ್ ಕತ್ಲೆ ಬೇಡಾಂತ್ ಅಂದ್ರು
ಬತ್ತೈತ್ ಯಿಂದಾಗೇನೆ. ೩

ಇದನ ಕಾಣ್ತ ಕಾಣ್ತ ನಂಗೆ
ನೆಪ್ಗೆ ಬಂದಂಗ್ ಆತು-
‘ಬೆಳಕೆ ಗ್ನಾನ, ಕತ್ಲ್ ಅಗ್ನಾನ’
ಅನ್ನೋ ದೊಡ್ಡೋರ್ ಮಾತು! ೪

‘ಗ್ನಾನಕ್ ಮನ್ಸ ಕಸ್ಟ್ ಬೀಳ್ಬೇಕು’
ಅನ್ನೋ ದೊಡ್ಡೋರ್ ಮಾತು,
‘ಅಗ್ನಾನ್ಕ್ ಏನೂ ಬೇಡಾನ್ನೋ’ದು
ಸಾಜಾ ಆದಂಗಾತು! ೫

ದೀಪದ್ ತಾಕೆ ಬತ್ತಂದ್ರದೋ
ಕಾಲಿನ್ ಕೆಳಗೆ ನೆಳ್ಳು!
‘ಅಗ್ನಾನೆಲ್ಲ ಗ್ನಾನಕ್ ಸರಣು’
ಅನ್ನೋದ್ ಅದಕೆ ತಿಳ್ಳು! ೬

ದೊಡ್ದೊಡ್ ಸತ್ಯ ನಂ ಮುಂದೇನೆ
ಬಿದ್ಕೊಂಡ್ ಒದ್ದಾಡ್ತಿದ್ರೂ
ಸುಂಕಿದ್ದೇವೆ. ಯಾವಾಗ್ ಅದನ
ನಾವ್ಗೊಳ್ ಕಲಿಯೋದಾದ್ರೂ? ೭

ತಿಳದೋರ್ ಕಾಲ್ ಇಡಕೊಂಡಿ ಕಲಿಯೋರ್
ಯಿಂದಿನ್ ಕಾಲ್ದಾಗ್ ಇದ್ರು;
ಕಲಿಯೋ ಮಂದಿ ಎಲ್ಲೌರೀಗ
ಕಲ್ಸೋರ್ ಮೇಲ್ ಬಂದ್ ಬಿದ್ರೂ! ೮
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮರ ಜೀವನ
Next post ಬಂಡಾಯದ ಕಾವು ತಗ್ಗದ ಕವಿ ಸತ್ಯಾನಂದ ಪಾತ್ರೋಟ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…