ಕಂದ ಕನ್ನಡದಾ ಕಂದ
ಕಂದ ಕನ್ನಡದಾ ಕಂದ
ಕನ್ನಡವೆ ಆನಂದ
ಕನ್ನಡವೇ ಕಸ್ತೂರಿ ತಿಳಿ ನೀ ಕಂದ||

ತಾಯ ಮಡಿಲ ಹೊನಲಂತೆ
ತಾಯಿನುಡಿ ಸವಿ ಜೇನಿನಂತೆ
ಮಲ್ಲಿಗೆ ತೊಟ್ಟಿಲಲ್ಲಿ ನೀ ಆಡಿ ಬೆಳೆದಂತೆ
ಕನ್ನಡವೇ ಶ್ರೀಗಂಧ ತಿಳಿನೀ ಕಂದ||

ಬೆಳಗು ನೀ ಜ್ಯೋತಿಯಾಗಿ
ಕಿರಣವಾಗು ಬೆಳಕಾಗಿ ಎಂದೆಂದು
ಕರುನಾಡು ಮಾನಿನಿಗೆ ಶಿರಬಾಗಿ ನಿಂದು
ಕನ್ನಡವೇ ಕಸೂರಿ ತಿಳಿನೀ ಕಂದ||

ಅಮ್ಮಾ ಎನ್ನುವ ಎರಡಕ್ಷರವು
ಬಾಳಿನ ಹೊಂಗಿರಣವಂತೆ
ಕನ್ನಡ ಎನ್ನುವ ಮೂರಕ್ಷರವೂ
ಬಾಳಿನ ಹೂ ಮಾಲೆಯಂತೆ
ತಾಯ ನೆಲವನು ಬೆಳಗು ನೀ ಕಂದ||
*****