
ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು; ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ ಅಂಬರದಲಿ ಮಿಂಚಿದೆ ನಿನ್ನ ಕ...
ಸೂರ್ಯ ನಿನ್ನದೆಂಥಾ ಬಿಸಿಲೋ ನಮ್ಮ ಹೊಟ್ಟೆಯ ಹಸಿವಿನ ಮುಂದೆ ಸುಡು ಹಸಿಹಸಿ ಹಸಿವ ಬಿಸಿಲಿರಲಿ ಹೊಂಬಿಸಿಲಾಗಿ ಮೋಡಗಳೇ ನಿಮ್ಮದೆಂಥಾ ಮಳೆಯೋ ನಮ್ಮ ಬಡತನದ ಕಣ್ಣೀರಿನ ಮುಂದೆ ಸುರಿ ಬಡತನ ಬಡವಾಗುವ ಮಳೆಯ ಹೊನ್ಹೊಳೆಯ ಬಿರುಗಾಳಿಯೇ ನಿನ್ನದೆಂಥಾ ಆರ್ಭಟವ...
ಗಾಳಿಗೆ ತೂಗಾಡುವ ಬಿದಿರ ಚಿಂತೆ ಇಂತು ಗಾಳಿಯನೇ ಆಡಿಸುವ ಬಾಳಾಗುವುದೆಂತು? ಸಿಕ್ಕಿಬಿದ್ದೆ ಮೆಳೆಯಲಿ ಮೈಯೆಲ್ಲಾ ಮುಳ್ಳು ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು ಪಾದ ಹುಗಿದು ಮಣ್ಣಲಿ ಕನಸಾಡಿದೆ ಕಣ್ಣಲಿ ಕಾಯುತಿರುವೆ ಕಡಿವವನಿಗೆ ಬಾಳಾಗಲು ನ...
ಚಂದ್ರ ನನಗೆ ನೀನೂ ಬೇಡ ಸೂರ್ಯನೂ ಬೇಡ ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ ತಾರೆ. *****...
ಹಿಂಬಾಲಿಸಿಕೊಂಡು ಓಡುತ್ತಲೇ ಬಂದೆ ಗುಡ್ಡಗಳನೇರಿ ಕಣಿವೆಗಳನಿಳಿದು ಮುಳ್ಳುಕಲ್ಲುಗಳ ದಾರಿಯಲ್ಲದ ದಾರಿಯಲ್ಲಿ ಅವಳ ನೆರಳು ಹಿಡಿದು ಅವಳ ಅಲೌಕಿಕ ವಾಸನೆಯ ಬೆಂಬತ್ತಿ ಅವಳ ಸೆರಗು ಚುಂಗು ಸಿಕ್ಕಿತೆಂದು ತಿಳಿದು ಸಿಗಲಾರದ ಸೀರೆ ದಾರಿಯ ಹಿಡಿದು ಓಡೋಡುತ...
ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು ಎಲ್ಲಿದೆಯೆ ನಿನ್ನದೇ ನೆರಳು! ಹೊಲ...













