
ತಾಯೇ ನಿನ್ನ ಪ್ರೀತಿಯ ಬಾಗಿನ ಎಲ್ಲಕು ಮೀರಿದ್ದೆ, ಗಾಳಿ, ನೀರು, ಅನ್ನದ ರಕ್ಷೆ ಮಾತಿಗೆ ನಿಲುಕದ್ದೆ. ಕನ್ನಡದಂಥ ಕಂಪಾಡುವ ನುಡಿ ನಾಲಿಗೆಗೇರಿದ್ದು, ಪಂಪ ಕುವೆಂಪು ಕುಮಾರವ್ಯಾಸ ಬಂಧುಗಳಾದದ್ದು, ಸಾಮಾನ್ಯವೆ ಶ್ರೀ ಪುರಂದರ ಬಸವ ಜಕಣರು ಕಡೆದದ್ದು,...
ಗೊತ್ತಿರಲೇ ಇಲ್ಲ ಫಲವತ್ತಾದ ಕಪ್ಪು ನೆಲವೆಂದು ನೀನು ಬಂದು ಬೇರೂರಿ ಆಕಾಶದೆತ್ತರ ಬೆಳೆದು ನಿಲ್ಲುವವರೆಗೂ ಯಾರು ತಂದು ಬಿಸುಟರು ನಿನ್ನ ನನ್ನ ಎದೆಯಾಳದಲಿ? ಹುಲ್ಲಿನ ಜೊತೆ ಹುಲ್ಲಿನಂತೆ ಬೆಳೆದು ಹುಲ್ಲಾಗಿ ಒಣಗಿ ಹೋಗದೆ ಮರವಾಗಿ ಬೆಳೆದು ನಿಂತುಬಿಟ...
ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ ಸುಳಿದಂತೆ ಮಲೆನಾಡ ಗಾಳಿ ಗಂಧ ಎಳೆಗರಿಕೆ ಮೇಲೇಳುವಂತೆ ಸುಡು ನೆಲದಿಂದ ಸಂಜೆ ಹಣ್ಣಾದಂತೆ ಬಾನ ತುಂಬ ನೀ ಸುಳಿವ ಗಳಿಗೆ ಪ್ರೀತಿಯ ಹೊಳೆಗೆ ನೆರೆಬಂತು ಬಣ್ಣ ಬದಲಾಗಿತ್ತು ಪೂರ ಇಳೆಗೆ ಮಣ್ಣು ಹೊನ್ನಾಗಿತ್ತು, ಮ...
ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವ...
ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು ಇತಿಹಾಸಕೇ ನಿಲುಕದ ಕಾಲಕೂ ನೀ ಪೂರ್ವಳು ಉಪನಿಷತ್ತ...
ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ ಋತವ ಸಾರಿದ ವೇದ ಉಷನಿಷತ್ತುಗಳು ಕಣ್ಮರೆಯಾದವು ಸದ್ದುಗದ್ದಲದಲ್ಲಿ ಏಕಪತ್ನೀವ...
ಮುಗಿಲ ತೂರಿ ಮೇಲೆ ಎದ್ದ ಗಿರಿಯ ನೆತ್ತಿಯಲ್ಲಿ, ಕರುಳ ಕೊರೆವ ಹಿಮಗಾಳಿಯ ಕಲ್ಲಭಿತ್ತಿಯಲ್ಲಿ, ಎವೆ ಬಡಿಯದ ಎಚ್ಚರದಲಿ ಹೊತ್ತಿ ಉರಿವ ಕೆಚ್ಚಿನಲ್ಲಿ ದೇಶ ನನ್ನ ದೈವ ಎಂದು ಹೋರಾಡುವ ಧೀರರೇ, ನಿಮ್ಮೊಡನಿದೆ ನಮ್ಮ ಹೃದಯ ಇದೋ ನಿಮಗೆ ವಂದನೆ ತಿನ್ನಲಿರದ...













