Home / ಕವನ / ಕವಿತೆ

ಕವಿತೆ

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದ...

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವ...

ನನ್ನ ಗೆಳೆಯಾ ಚಿನ್ನ ತೆನೆಯಾ ಆಗು ಕಾರಣ ಪುರುಷ ನೀಂ || ತೋಳ ಬಲವು ತೋಳವಾಗದೆ ಬಿದ್ದ ಮಕ್ಕಳ ಎತ್ತಲಿ ಬುದ್ದಿ ಬಲವು ಬೂದಿಯಾಗದೆ ಬೆಂದ ಬಡವರ ಅಪ್ಪಲಿ ಹಸಿರು ಆಗೈ ಹೂವು ಆಗೈ ಹಣ್ಣು ಹಂಪಲ ಸುರಿಯು ನೀ ಜಂಗು ಕಬ್ಬಿಣವಾಗಬೇಡೈ ದ್ರಾಕ್ಷಿ ಗೊಂಚಲವಾಗು...

ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ; ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ ಮೀರಿ ಮಿಂಚಿದ ಚಿಗರೆ ಹರಿದೋಡಲಿ ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ, ಮರ್ತ್ಯಲೋಕದ ಮಿತಿಗೆ ಮಾನ ಬರಲಿ ಎಲ್...

ಕಣ್ಣಲ್ಲಿ ಕಣ್ಣಿಟ್ಟು ಮೌನಕ್ಕೆ ಭಾಷೆ ಕೊಡೋಣ ಹೇಳು ಅಂಥ ಕ್ಷಣವೇ ಸ್ವರ್ಗ ಅದಕೆ ದೇವರು ಮಾತಾಡುವ ಸಮಯ ಅನ್ನೊಣ ಅಥವಾ ಪಂಚಮ ವೇದ ಎಂದು ಹೆಸರಿಡೋಣ ಅಥವಾ ಅದಕೆ ಯಾವ ಹೆಸರೂ ಬೇಡ **** ನಾವು ಭೇಟಿಯೇ ಆಗಿಲ್ಲ ಆದರೂ ನಾವು ಶತಮಾನಗಳಷ್ಟು ಹಳೆಯ ಗೆಳೆಯರ...

ಸೂರ್ಯ ಸೃಷ್ಠಿ ದೃಷ್ಠಿಯಲಿ ಬಿಂಬ ಎಳಸು ಹಾಸುಬೀಸು ಕೊನರಿದ ಮಿಂಚು ಸಂಚಾರ ನರನಾಡಿಗಳಲ್ಲಿ ಕೆಂಪು ಕಿರಣಗಳು ಎಲ್ಲೆಲ್ಲೂ ಹರಿದ ಆನಂದ ಶಾಶ್ವತ ಮರಳು ರಾಶಿಯಲ್ಲೂ ಮರೀಚಿಕೆ. ಸದ್ದುಗದ್ದಲ ಇಲ್ಲದೇ ಆತ ಬಂದಾಗ ಎದೆಯ ಗೂಡಿನಲಿ ಹಕ್ಕಿ ಚಿಲಿಪಿಲಿ ತೇಲಿ ತ...

ಮೆಸಪೊಟೇಮಿಯಾದ ಒಬ್ಬ ರಾಜ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಕೆತ್ತಿಸಿದ ತನ್ನ ಹೆಸರನ್ನು ಹೆಸರು ಅಖಿಟೋಪನೆಂದು ಹೆಬ್ಬಂಡೆಗಳ ಮೇಲೆ ಮೃತ್ತಿಕೆಗಳ ಮೇಲೆ ಮರದ ಕಾಂಡಗಳ ಮೇಲೆ ಬರೆಸಿದ ಪಠ್ಯ ಪುಸ್ತಕಗಳಲ್ಲಿ ಸೇರಿಸಿದ ಧರ್ಮಗ್ರ೦ಥಗಳಲ್ಲಿ ಪೂಜ...

ಮಾಮರದ ಚಿಗುರಲ್ಲಿ ರಾಗ ಮೂಡಿಸೋ ಪಿಕವೇ ಮಧುರ ನುಡಿಯಲಿ ನಿನ್ನ ರೂಪ ಗೌಣ ಸಿಹಿಯ ಸತ್ವದ ಹೊತ್ತ ಕರಿಯ ನೇರಳೆ ಹಣ್ಣೆ ರುಚಿಯ ನೆಪದಲ್ಲಿ ನಿನ್ನ ಬಣ್ಣ ಗೌಣ ಮೂರ್ತಿಯಾಗಲು ಬಲ್ಲ ಕರಿಯ ಕಲ್ಲಿನ ಬಂಡೆ ಕಲೆಯ ಹೊಳಪಲಿ ನಿನ್ನ ಕಾಠಿಣ್ಯ ಗೌಣ ಶ್ರಮದ ಬಿಲ್ಲ...

ಹುಡುಗಿ ದಿನಚರಿ ಬರೆಯುತ್ತಾಳೆ. ಸುಂದರ ಹಗಲುಗಳ ಇಂಚಿಂಚನ್ನೂ ವರ್ಣರಂಜಿತ ಪುಟಗಳಲ್ಲಿ ಸೆರೆಹಿಡಿಯುತ್ತಾಳೆ. ನೂರೆಂಟು ಬಾರಿ ಯೋಚಿಸಿದರೂ ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು ಬರೆಯಲಾಗದೆ ಮಿಡುಕುತ್ತಾಳೆ. ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊ...

ಓ ದೇವಿ ಓ ತಾಯಿ ವಿಶ್ವ ಸುಂದರ ಮಾಯಿ ಕೂಗವ್ವ ವಿಶ್ವದಲಿ ದೇವಗಾನಾ ನಿನ್ನ ದಿವ್ಯದ ಬೆಡಗು ಬೆಳಗಿನಾತ್ಮದ ಕೊಡಗು ಬಾರವ್ವಾ ಉಣಿಸವ್ವಾ ಕ್ಷೀರಪಾನಾ ತಾಯಿಯಂದರು ನೀನೆ ತಂದೆಯೆಂದರು ನೀನೆ ಯೋಗ ಮಾಯೆಯು ನಿನ್ನ ಲೀಲೆಯಪ್ಪಾ ಭುವಿಯ ಮಕ್ಕಳ ಸೊಕ್ಕು ಕಾಮದ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...