Home / ಕವನ / ಕವಿತೆ

ಕವಿತೆ

ಸರಿಯಪ್ಪಾ ಕೃಷ್ಣ ಪರಮಾತ್ಮ ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು ಬಾಣ ಬಿಡೋದು: ನೀನು ನೋಡಿದರೆ ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ ಯಾರನ್ನಾದರವರ್ನ ಕೊಂದೇಬಿಡೋದು ಇದೆಲ್ಲಾ ಯಾವ ಧರ್ಮ? ಯಾವ ಯುದ್ಧ? ಯಾವುದೋ ಓಬಿರಾಯನ ಕಾ...

ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ|| ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ ಆತ್ಮಸಾಗರ ತುಂಬ ಓಂಕಾರವೊ ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ ಶಿವನ ಸಾಗರ ತುಂಬ ಝೇಂಕಾರವೊ ಓ ನೋಡು ಈ ಕಾಡು ಈ ಹಸಿರು ಈ ಹೂವು ಓಂಕಾರ ಗಾನದಲಿ ಮೀಯುತ್ತಿವೆ...

ಇದು ಚಕ್ರವ್ಯೂಹ ಒಳಗೆ ಬರಬಹುದು ಒಮ್ಮೆ ಬಂದಿರೊ ಒಳಗೆ ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ ! ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ! ಸ್ವಾಮಿ, ಇದು ನಗರ; ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ ಹೆಬ್ಬಾವಿನಂಥ ಜಡ ಅಜಗರ: ದಿಕ್ಕು ದಿಕ್ಕಿನಿಂದಲೂ...

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ ನವಜೀವ ನಗುತ ಪ್ರೇಮದೌತಣ ಉಂಡು ಘನವ...

ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ ಕೇವಲ ಧೂಮಪಾನಾಸಕ...

ಅವರು ಬಿಳಿ ಬಣ್ಣದ ಮಾಯಾ ಮಂದರಿ ಹೊದ್ದು ಬಂದಿದ್ದರು ತೆವಳುತ್ತ, ಸರ್ಪಸಂತತಿ ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು. ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ, ಒಡೆದು ಆಳುವ ತಂತ್ರ ಕುತಂತ್ರ ಶ್ರೇಷ್ಠ ನಾಗರ...

ಪ್ರತಿದಿನ, ಪ್ರತಿಕ್ಷಣ ಅದೇ ಕೆಲಸ; ಹುಟ್ಟಿನ ಮನೆಗೆ ಭೇಟಿ ಕೊಡುವುದು, ಸಂಭ್ರಮದ ತುಣುಕನ್ನು ಮೆದ್ದು, ತನ್ನದೊಂದು ಬೀಜ ನೆಟ್ಟು, ಗುಟ್ಟಾಗಿ ಓಡಿಬರುವುದು. ಮತ್ತೆ ಅದೇ ಕೆಲಸ ಕಾಯುವುದು ನೆಟ್ಟ ಬೀಜ ಫಲಕೊಟ್ಟು ಹಣ್ಣಾಗಿ ಕಳಚಿಕೊಳ್ಳುವುದನ್ನೇ ಕಣ್...

ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ ***** * ಅಜ್ಜಿ ಕಾಲಿಗೆ ದೀಪ:...

ಸಾಕು ಕೇಕೇ ನೂಕು ಗೇಗೇ ಬೇಕು ಜೈ ಜೈ ಗೀತಿಕೆ! ಸಾಕು ಕಲ್ಲು ಸಾಕು ಮುಳ್ಳು ಕಲ್ಲು ಮುಳ್ಳಿನ ಗೆಳೆತನ ಪಕ್ಷಿಯಾಗೈ ವೃಕ್ಷ ಏರೈ ಮಾಡು ಹೂವಿನ ಒಗೆತನ ದಲದ ಗಲ್ಲದ ಗಂಧ ಗುಡಿಯಲಿ ಕಾಣು ಆತ್ಮದ ಚುಂಬನ ಎಲ್ಲಿ ಕೋಮಲ ಎಲ್ಲಿ ಪರಿಮಳ ಅಲ್ಲಿ ಅರುಹಿನ ಔತಣ ಮ...

ಟೀವಿಯ ಆಶುಕವಿತ್ವದ ಕರೆಗೆ ಛೇ ಛೇ ಎಂದರು ಜಿ.ಎಸ್.ಎಸ್; ಅಡಿಗರೊ ತಲೆ ತಲೆ ಚಚ್ಚಿಕೊಂಡರು ಅಲ್ಲೆ ಮಾಡಿದರು ಅದ ಡಿಸ್‌ಮಿಸ್. ಕಂಗಾಲಾದರು ಕಂಬಾರ ನಿಟ್ಟುಸಿಟ್ಟರು ನಿಸ್ಸಾರ ಕೆಟ್ಟೇ ಎಂದರು ಭಟ್ಟರು ಒಳಗೇ ಬಂತಲ್ಲಪ್ಪಾ ಗ್ರಹಚಾರ! ಆದರು ಏನು, ಬಿಡಲಾ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...