ಗಂಡ ಮುಂಜಾನೆ, ಸಂಜೆ, ಪೊಲೀಸು
ಸೆಲ್ಯೂಟ್ ಸ್ವೀಕರಿಸುವ, ಮನೆ ಮೇಲೆ
ಹಾರುತ್ತಿರುವ ಝಂಡಾ
ಹೆಂಡತಿ ಜಾತ್ರೆಯಲ್ಲಷ್ಟೇ ಮೆರೆಯುವ ಉತ್ಸವ ಮೂರುತಿ
ಯಾವಾಗಲೂ ಮಂಗಳಾರತಿ (?) ಮಾಡಿಸಿಕೊಳ್ಳುವ
ಗರ್ಭ(ದ) ಗುಡಿಯ ಮೂಲ ಮೂರುತಿ
ಲಕ್ಷ್ಮೀಸರಸ್ವತಿ ಪಾರ್ವತಿ
ನಮ್ಮ ಹೆಮ್ಮೆಯ ಭಾರತೀಯ ಸಂಸ್ಕೃತಿ
*****