ಕವಿ

ಮುಚ್ಚು- ಮರೆ ಇಲ್ಲದ ಚೊಕ್ಕ ಸ್ಫಟಿಕದ ಹೃದಯ
ಕಾವ್ಯ ವಾಹಿನಿಯ ಉದಯ ಬಿಂದು
ಕವಿಯ ಹೃದಯ; ಕಾವ್ಯ ಜ್ಯೋತಿಯ ಕಾಯ
ಮಿಂಚಿಹುದು; ಓ ಚಿಮ್ಮಿ ಬಂದಿಹುದು

ಸರ್ಗಗ೦ಗೆಯ ಕರೆದು ನಲಿದಾಡಬಲ್ಲ
ಸೂರ್ಯ ಚಂದಿರರೊಡನೆ ಆಡಬಲ್ಲ
ಶಾಂತಿ ರೌದ್ರದ ಕಂಠ ಒಂದು ಮಾಡಲುಬಲ್ಲ
ವಿಶ್ವ ಶಕ್ತಿಯ ಬಿಂಬ ಕವಿಯೆ ಎಲ್ಲ

ಪಾತಾಳ ಮೇಲೆತ್ತಿ, ಸ್ವರ್ಗ ಆಳಕೆ ಒತ್ತಿ
ಕುಣಿದು ನಲಿಯಲು ಬಲ್ಲ ಕವಿಯು
ಲೋಕಗಳನು ಕಾಣುವನು ತನ್ನೊಳಗೆ ಕೆತ್ತಿ
ಚಿತ್ರಿಸುವನು ವಿಶ್ವವನೆ ಕವಿಯು

ಸೃಷ್ಟಿ ಮಾಡುವ ಶಿಲ್ಪಿ, ಪ್ರಳಯದದ್ಭುತ ಶಕ್ತಿ
ಬಾಳ ಬೆಳಗಿನ ಜ್ಯೋತಿ ಇವನು
ಸತ್ಯ ಸೌಂದರ್ಯದೊಳು ಸತ್ಯಶಿವನ ನುಡಿವ ವಿರಕ್ತಿ
ಸರ್ವಸ್ವ ಭಾಗ್ಯ ವೀರನೇ ಇವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೆಸೆಪ್ಷನ್
Next post ಗಂಡ-ಹೆಂಡತಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…