
ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ” ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ ಆಕಾರ ಬಲು ಕಿರಿದು, ಜೀವ ಸ್ವರ್ಗ ! ನಲಿಯುತಾ ನೆಗೆಯುತಾ ಚಲುವು ಹಾರುತಿದೆ ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ ! ಮುಳ್ಳು ರಾಶಿಯಲಿ, ಕಳ್ಳಿ...
ಕತ್ತಲೆ ಎನುವುದು ಇಲ್ಲವೆ ಇಲ್ಲ ಇರುವುದು ಬೆಳಕೊಂದೇ, ಅರಿಯದೆ ಜನರೋ ಕೂಗಿ ಹೇಳುವರು ಕತ್ತಲೆ ಇದೆಯೆಂದೇ! ಕತ್ತಲೆ ಎನುವುದು ನಮ್ಮದೆ ಸೃಷ್ಟಿ ಕೇವಲ ನಮ್ಮದೆ ಕಲ್ಪನೆ, ಬೆಳಕಿಗೆ ಬೆನ್ನನು ತಿರುಗಿಸಿದಾಗ ಹುಟ್ಟುವ ಭ್ರಮೆಯನ್ನೇ ಕತ್ತಲೆ ಕತ್ತಲೆ ಎನ್...
ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ ಬೆಳ್ಳಿಯಲೆಗಳ ಭ್ರಾಂತಿ ಹೊಳೆಯುತಿಹುದು. ತೀಡುತಿ...
ಚಂದ್ರ ಅಣಕಿಸುವಾಗ ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ ಬಾಹುಗಳ ಬಂಧಿಸಿ ಬಿಗಿ ಹಮ್ಮಿನಲಿ ಕುಳಿತುಕೊಳ್ಳುವುದು ಸರಿಯೆಂದೇನು ಅನಿಸುತ್ತಿಲ್ಲ ಚಳಿಹೊದ್ದ ರಾತ್ರಿಯಲಿ ಎದುರಿಗೆ ಬೆಂಕಿಕಾಯಿಸುತ್ತ ಎದುರು ಬದರು ಕುಳಿತು ಕೊಳ್ಳುವ ಬದಲು ಮೈಗೆ ಮೈತಾ...
ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ ಸಂತಸ ಸುರಿಯುವೀ ದೀಪಾವಳಿ. ಸಣ್ಣ ಹಣತೆಯ ಕುಡಿಗಳು ಉರಿವ ಸೂರ್ಯನ ಮರಿಗಳು ಒಟ್ಟು ನಿಂತರೆ...













