
ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ ಗೆಳತಿ ನೀನೇಕೆ ಹೀ...
ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ ಶಾಂತಿ ದಲದಲ ಯೋಗವಲ್ಲರಿ ಚಿಗುರಿದೆ ಶಬ್ದ ಇಲ್ಲದ ಸೀಮೆ ಇಲ್ಲದ ಬೆಳಕು ಬೆಳಕನೆ ಹೊಮ್ಮಿದ...
ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ ನೀನು ಜೀವನದ ಜೀ...
ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು ಭಾವನೆಯ ಪ್ರತಿಬಿಂಬ| ...
ಬೆಚ್ಚಿಸುವುದೇಕವನ ಬಿಮ್ಮನೆ ಕುಳಿತವನ ಸುಮ್ಮನೆ ಬಾಗಿಲ ತೆರೆದು ಕಿಂಡಿ ಸಾಲದೆ ನೋಡುವೊಡೆ ಗಿಂಡಿ ಸಾಲದೆ ಸಿಂಪಿಸುವೊಡೆ ಕಿರಣ ಸಾಲದೆ ಬೀರುವೊಡೆ ಕಿಟಕಿ ಸಾಲದೆ ಹಾಯುವೊಡೆ ಕಂಬನಿ ಸಾಲದೆ ಹರಿಯುವೊಡೆ ಕಿರುನಗೆ ಸಾಲದೆ ಸುರಿಯುವೊಡೆ ಎಬ್ಬಿಸುವುದೇಕವನ...
ಅಯ್ಯೋ! ತಿರುಮಳವ್ವಾ!… ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ...













