
ಹೂತು ಹೋಗಿದೆ ಒಲವಿನ ಮಾತು ಉಸಿರು ನರಳಿದೆ ಸೆಣಸುತ ಸೋತು ಸಾಯುವ ಮುಂಚೆ ನೀರು ಕೊಡಿ ಬಾಯಾರಿದೆ ಹೃದಯ. ಹೊಟ್ಟೆಯ ಒಳಗಿನ ಸುಟ್ಟ ವಾಸನೆ ಬೀದಿಗೆ ಹರಿದು ಬಡತನ ಬಯಲು ಮೂಗು ಮುಚ್ಚಿದೆ ಮನೆ ಮನೆ ಸಾಲು ಬೀದಿ ಬೀದಿಯಲಿ ಹುಡುಕಿ ನೋಡಿದರು ಹೃದಯದ ವಿಳಾಸ...
ಹಾಲಿಂದ ಮಾಡಿದರೊ ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ ಈ ಇಂಥ ಅಂದವ ಹೇಗೆ ಮಾಡಿದರೋ ಕಸ್ತೂರಿಯಿಂದ ಮಾಡಿದರೊ ಚಂದನದಿಂದ ಮಾಡಿದರೊ ಪಾರಿಜಾತದ ಗಂಧದಿಂದ ಮಾಡಿದರೊ ಈ ಮೈಯ ಸೌಗಂಧವ ಹೇಗೆ ಮಾಡಿದರೋ ಬಿದಿರೆಲೆಯಿಂದ ಮಾಡಿದರೊ ಕಬ್ಬಿನ ಕದಿರಿಂದ ಮಾಡಿದರೊ ...
ನನ್ನಮ್ಮ ಬಂದಳು ನನ್ನಪ್ಪ ಬಂದರು ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು, ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ ಆದರೂ… ಈ ಮನೆ,...
ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾನಿಲ್ಲ ಸಿದ್ಧ. ಬಯಸದೆ ಹುಟ್ಟಿ ಬಂದೆ ಬಯಕೆಯ ಬುಟ್ಟಿಯಾದೆ ಬುಟ್ಟಿಯನ್ನೇ ನೆಚ್ಚಿಕೊಂಡೆ ಗಂಡ ಮಕ್ಕಳ ಹಚ್ಚಿಕೊಂಡೆ ಬದುಕನ್ನ ಒಪ್ಪಿಕೊಂಡೆ ಬೆಂಕಿಯನ್ನ ಅಪ್ಪಿಕೊಂಡೆ ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾ ಬದ್ಧ...
ಹಕ್ಕಿಯೊಂದು ಹಾರುತ್ತಿತ್ತು. ಮೇಲೆ ಮೇಲೆ ಏರುತ್ತಿತ್ತು ಇಹವ ಮರೆತು ನಲಿಯುತ್ತಿತ್ತು ಸ್ವಚ್ಛಂದವಾಗಿ ತೇಲುತ್ತಿತ್ತು. ಗಿಡುಗನೊಂದು ನೋಡುತ್ತಿತ್ತು ಹಿಡಿಯಲೆಂದು ಹೊಂಚುತ್ತಿತ್ತು ಹಿಂದೆ ಹಿಂದೆ ಅಲೆಯುತ್ತಿತ್ತು ಮೇಲೆರಗಲು ಕಾಯುತ್ತಿತ್ತು. ಹಕ್ಕ...













