ನೀನೆ ಉಪ್ಪು ಬ್ಯಾಳಿಯು

ನನ್ನತನವನು ನಿನ್ನತನದಲಿ
ಗಂಧದಂತೆ ತೇಯುವೆ
ನನ್ನ ಬದುಕಿನ ತಾಳ ತಮ್ಮಟೆ
ಗಂಟು ಮೂಟೆ ಕಟ್ಟುವೆ
ನಿನ್ನ ಪಾದಕೆ ಒಟ್ಟುವೆ

ಅಂತರಂಗದ ಹುಚ್ಚು ಆಸೆಯ
ಬಿಚ್ಚಿ ಬಿಡಿಸಿ ಚಲ್ಲುವೆ
ಕಲ್ಲು ಮಣ್ಣು ಮುಳ್ಳು ಕೊಟ್ಟು
ಹಾಲು ಬೆಣ್ಣೆ ಪಡೆಯುವೆ
ಬಾಳೆ ಹಣ್ಣು ಸವಿಯುವೆ

ನೀನೆ ತಂದಿ ನೀನೆ ತಾಯಿ
ನೀನೆ ನನ್ನ ಬಳಗವು
ನೀನೆ ಚಂದ್ರ ನೀನೆ ತಾರೆ
ನೀನೆ ನನ್ನ ಪ್ರಾಣವು
ಪ್ರಾಣ ನಿನ್ನ ತ್ರಾಣವು

ನಿನ್ನ ಬಿಟ್ಟು ಯಾರು ಇಲ್ಲಾ
ನನ್ನದೆಲ್ಲಾ ನಿನ್ನದು
ನೀನೆ ಬೆಲ್ಲಾ ನೀನೆ ಎಲ್ಲಾ
ನೀನೆ ಹುಳಿಯು ಖಾರವು
ನೀನೆ ಉಪ್ಪು, ಬ್ಯಾಳಿಯು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗಳಕ್ಕೊಂದು ಚಿತ್ತಾರ
Next post ಕಾವ ಸರಕಾರವೇ ಕಾವಾಗಿ ಕಾಡಿದರೆ?

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…