
ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು ಕಾಯುತ. ಮಹಲಿನಿಂದ ಕುರ್ಚಿಯಿಂದ ಭೂಮಿಯೊಡಲ ಬಿರುಕಿನಿಂದ ಎದ್ದ...
ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ ...
ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...
ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|...
ಅಂದು ಏನು ಹೇಳಿದ್ದೆ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ ಹೊರಳಿ ಬಿದ್ದೆ ವಿಷವ ನೆಕ್ಕಿ ಬದುಕ...













