ಆಕಳು ಅಂಬಾ ಅನ್ನುತಿದೆ!
ಕರುಗಳ ಮುಖಗಳ ನೋಡುತಿದೆ!
ಕಂಬನಿಗಳ ಸಲೆ ಸುರಿಸುತಿದೆ!
ಹುಲ್ಲನು ಹಾಕಿರಿ ಅನ್ನುತಿದೆ!


ಆಕಳು ಅಂಬಾ! ಅನ್ನುತಿದೆ!
ಆಕಾಶದಕಡೆ ನೋಡುತಿದೆ!
ಹಿಂಡಿಸಿಕೊಳ್ಳುತ ಹಲುಬುತಿದೆ!
ಕಣ್ಣಿಯನುಚ್ಚಲು ಕೋರುತಿದೆ!


ಆಕಳು ಅಂಬಾ! ಅನ್ನುತಿದೆ!
ದಾಸ್ಯದ ದಾಹದಿ ಬಳಲುತಿದೆ!
ಸ್ವಾತಂತ್ರ್ಯವಗಡ ಬಯಸುತಿದೆ!
ಭಾರತ ಮಕ್ಕಳ ನೋಡುತಿದೆ!
*****