ರಾಜಕಾರಣವೆಂದರೆ
ಏನೆಂದುಕೊಂಡಿರಿ
ವಿನಾಕಾರಣ ಹೊಡೆದಾಟ
ಬಡಿದಾಟ ದೊಂಬರಾಟ
ಕಣ್ಣು ಹಾಯಿಸಿ ತಿಹಾಸದತ್ತ
ಗದ್ದುಗೆಯೇರಲು ಅನಿವಾರ್ಯ
ಕೊಲೆ, ಸುಲಿಗೆ ರಕ್ತಪಾತ
ಚಾಣಕ್ಯನ ನೀತಿತಂತ್ರ
ಹಣ ಅಧಿಕಾರ ದಾಹಕ್ಕೆ
ಮುಗ್ಧ ಪ್ರಾಣಗಳ ಬೆಲೆ
ಮಾನವೀಯ ಸಂಬಂಧಗಳು
ಬತ್ತಿ ಹೋದ ಸೆಲೆ
ಬಾಯಲ್ಲಿ ಭಗವದ್ಗೀತೆ
ಕೈಯಲ್ಲಿ ಮಚ್ಚುಗತ್ತಿ
ಮಾತಿನ ಬಂಡವಾಳ ಹಾಕಿ
ಮತದಾರರ ವ್ಯಾಪಾರ
ಪೊಳ್ಳು ಆಶ್ವಾಸನೆಗಳ ಸಮಾಧಿ
ಸಿಂಹಾಸನ ಪ್ರತಿಷ್ಠಾನ
ತತ್ತ್ವ ಸಿದ್ಧಾಂತ ಆದರ್ಶಗಳೆಲ್ಲಿ
ಸೂತ್ರ ಕಿತ್ತ ಗಾಳಿಪಟ
ರಾಮ ರಹೀಮರಲ್ಲಿ
ಯೇಸು ಬುದ್ಧರಲ್ಲಿ
ಭೇದಭಾವದ ಬಿತ್ತನೆ
ಕೋಮು ಭ್ರಷ್ಟಾಚಾರದ ಬೋಧನೆ
ಅಧರ್ಮ ಅನೀತಿಗಳ ಕಾರಸ್ಥಾನ
ನ್ಯಾಯನಿಷ್ಠೆಗಳ ಪರ್ಯಾವಸಾನ
ರಾಜಕಾರಣವೆಂದರೆ ಇಷ್ಟೆ
ಸ್ವಾರ್ಥ ರಾಜಕಾರಣಿಗಳ ಪ್ರತಿಷ್ಠೆ.
*****