
ಬುರ್‍ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ ನಿನ್ನ ಸೂತ್ರ ನನ್ನಲ್ಯಾಕವ್ವ...
ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ ಬಾಳೆಯಾ ಹೊನ್ನೂರ ಶಿಖರ ಕಂಡೆ ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ ವೀರಸೋಮೇಶ್ವರನ ಬೆಳಕು ಕಂಡೆ ಮಲಯ ಪರ್ವತ ರಾಣಿ ಮರೆತು ಮಲಗಿಹಳಿಲ್ಲಿ ರಸದುಂಬಿದಾ ಬಾಳೆ ಬನವ ಕಂಡೆ ಕಣ್ತುಂಬ ಶಿವಶಿವಾ ಎದೆತುಂಬ ಶಿವಶ...
ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ ತಣಿವ ತಂಪನು ಮನದಿ ತಳೆಯಬಹುದೆ? ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ ಒಡಲಲ್ಲಿ ಶಾಂತಿಯದು ಆರಳಬಹುದೆ? ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು ‘ಇಂದು’ಗಳಿಗಾ...
ನಕ್ಕರೆ ನಕ್ಕೇ ನಗುವದು, ಅತ್ತರೆ ಅತ್ತೇ ಅಳುವುದು-ಒಮ್ಮೊಮ್ಮೆ – ಆಡಿದರೆ ಆಡಿಯೇ ಆಡುವದು, ನೋಡಿದರೆ ನೋಡಿಯೇ ನೋಡುವುದು ಒಮ್ಮೊಮ್ಮೆ- ಹುಚ್ಚುಖೋಡಿ! ಮುದ್ದಿಡಹೋದರೆ ಬಿಕ್ಕಿಸಿ ಅಳುವುದು. ಗುದ್ದಲುಹೋದರೆ ಫಕ್ಕನೆ ನಗುವುದು. ಹುಚ್ಚುಖೋಡಿ! ...
ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು ಬೆಳಕು ಕಾಯುವುದೆ ಕತ್ತಲು ಅಟ್ಟದ ಮೇಲೆ ಅಥವಾ ಕೆಳಗೆ ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ ಮೈಕೈಗೆ ಮಸಿ ಹಿಡಿದವರ ಕೈಗೂ ವಸಿ ಹಿಡಿದವರ ಮನಸಿಗ...
ಏಕಕಾಂಡದೊಳೆದ್ದು ಮೇಲೆ ಬಾನನು ತಾಗಿ ಥಟ್ಟನಲ್ಲಿಯೆ ತನ್ನ ಕಟ್ಟ ಕಳೆದ ಬಗೆ ಆಡುತಿಹ ಗರಿಗಳನು ದೆಸೆದೆಸೆಗೆ ಹರಹುತ್ತ ನಿಂತ ತೆಂಗಿನ ಮೇಲೆ ಹರಿವುದೆನ್ನ ಬಗೆ ನಡುವೆ ಗುಡಿಗೋಪುರದೊಲೆಸೆವ ಮಾಮರದೆಲೆಯ ತುರುಗಲೊಳು ತಂಗುವುದು ತವರ ಕಂಡಂತೆ ಗಗನದಮೃತದ ...
ಪೋಲಿಸು ರಾಜ್ಯದಲಿ ಸೈನ್ಯದ ಸಮಾವೇಶಗಳು ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭ, ಘೋಷಣೆಗಳು ಸರ್ಕಲ್ಲುಗಳಲ್ಲಿ ಹೊಯ್ದ ಮಳೆಯಂತೆ ಅಬ್ಬರಿಸಿದ ಘೋಷಣೆಗಳು ತಣ್ಣಗಾಗಿ ಶೈತ್ಯಾಗಾರ ಸೇರಿವೆ. ಧರ್ಮ, ಜನಾಂಗಗಳ ಪ್ರಶ್ನೆಗಳು ರೈತ, ಕಾರ್ಮಿಕರ ಸವಾಲುಗಳು ಸಾಲು...
ಬಂಡವಾಳವಾಗುತಿದೆ ಕನ್ನಡ ಭಾಷೆ-ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ-ನನ್ನ ಕನ್ನಡ ಭಾಷೆ || ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರತ್ತ ಇವರು ಜಯ್ ...













