Home / ಕವನ / ಕವಿತೆ

ಕವಿತೆ

ಪಣೆಗೆ ಕುಂಕುಮವಿಟ್ಟು ಪೂರ್ವ ನಾರಿಯು ನಿಂದು ಕಣುಗಳಿಂದವೆ ಕರೆದು ಕಮಲಿನಿಯ ಬಳಿಸಂದು ಮಣಿಕಿರೀಟವ ಧರಿಸಿ ಮನಕೆ ಮಿತ್ರನ ತಂದು ಇಣಿಕಿ ನೋಡುತಲಿಹಳು ರಮಣ ಬರುತಿಹನೆಂದು. ಹೊಳೆವ ದೀವಿಗೆಯಿಟ್ಟು ಮಂಗಳಾರತಿ ಪಿಡಿದು ಅಳಿಯ ರಾಗದಿ ಹಾಡಿ ಹಕ್ಕಿಯೆದೆಯಿ...

ಕಿರಿಯತನವು ಕಳೆದುದನ್ನು ಮರೆತು ನಡೆವುದೆಷ್ಟು ಹುಚ್ಚು! ಹರೆಯದೊಡನೆ ನಿಲುವುದೆಂತು ಕಿರಿಯತನದ ಮುಗ್ಧತೆ? * * * ಹಗಲು ಹಣ್ಣು ತಿರುಗುತಿತ್ತು, ಹೊಗೆಯ ಬಂಡಿಯೋಡುತಿತ್ತು, ಮನದಿ, ಹಿಂದೆ ಬಿಟ್ಟುದರದು ನೆನಪು ಬೇಯುತಿದ್ದಿತು. ಕಳೆದ ಸುಖವ, ತಬ್ಬುವ...

ಐದು ಅಕ್ಷರದಿಂದ ತೆಯದು ಗಂಧಾಽದಿಂದ| ಮಲ್ಲಿಗ್ಹೂವಿಽನ ಕ್ರಮಽದಿಂದ|| ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ| ರಾಯರ ಶೀಪಾದಾಽ ತೊಳಂದಾಳ ||೧|| ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ| ಪಾದಲಿ ಕಂಡಾಳಽ ಪದಮವ|| ಪಾದಲಿ ಕಂಡಾಽಳೆ ಪದಮವ ರಾಯಿರ ನಿಮ...

ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧ || ನಿಲಲಾರದ ದಿನಕರನನುದಿನದಿ...

ಬಸವ ನಿನ್ನ ಕಾಲಕ್ಕೂ ನನ್ನ ಕಾಲಕ್ಕೂ ವ್ಯತ್ಯಾಸವೇನಿಲ್ಲ! ಆದರೆ ನಿನಗೂ ನನಗೂ ವ್ಯತ್ಯಾಸ ಬಹಳ! ಬಸವ ನಿನ್ನ ವಿಭೂತಿಗೂ ನನ್ನ ವಿಭೂತಿಗೂ ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ ವ್ಯತ್ಯಾಸವಿಲ್ಲ ಆದರೆ ಅದರೊಳಗಿನ ತತ್ವದ ಮಾತು ಇಲ್ಲಿ ಬೇಡ, ಅಷ್ಟೇ...

`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರ...

೧ ಸಾಸಿರ ವಕ್ತ್ರದ ಸಾಸಿರ ನೇತ್ರದ ಸಾಸಿರ ಪದಗಳ ವ್ಯಕ್ತಿ- ಸಾಸಿರ ಚಿತ್ತದ ಸಾಸಿರ ಹೃದಯದ ಸಾಸಿರ ಬುದ್ಧಿಯ ಶಕ್ತಿ! ೨ ಈ ಶಕ್ತಿಯೆ ದಿಟವಿಂದಿನ ದೈವತ, ಪೂಜೆಯಿದಕೆ ಬೇಕು- ಪೂಜೆ ದೊರೆಯದಿರೆ ದೈವತವಲ್ಲಿದು, ದೆವ್ವವಯ್ಯೊ ! ಸಾಕು !! ೩ ಕಲ್ಲು-ಕಂಚು...

  ಬಿಟ್ಟಿದ್ದೆ ಯೆಂಡ ಅಲ್ಲಿ- ನೆಟ್ಗೆ ಬಂದೆ ಇಲ್ಲಿ. ಎಲೇಲೇಲೇ ರಸ್ತೆ! ಯೇನು ಅವ್ವೆವಸ್ತೆ! ಮೈ ಕೈ ಯೆಲ್ಲ ಮುದರಿ ಯಾಕೇ ಕುಣೀತಿ ಕುದರಿ? ಕೊಟ್ಟೆ ಯಲ್ಲ ಗಸ್ತು! ಕುಡಿದ್ದೀಯ ರಸ್ತೆ! ಚಂದ್ರನ್ ಮುಕವೇಕ್ ಸೊಟ್ಟು? ಅದ್ದು! ಬಲಗಣ್ ಛಟ್ಟು! ಉಳ...

ಪರಶುರಾಮನ ಮಹೋತ್ತುಂಗ ದೋರ್‍ದಂಡ ಉ- ದ್ದಂಡ ಸಹ್ಯದಸಹ್ಯ ಸಾಮರ್‍ಥ್ಯದಲಿ ನೀಡಿ- ಕೊಂಡಿದೆ. ಇದೊ ಅಪರಜಲಧಿಯು ಪರಾಜಿತರ ನಯದೊಳಂಭೋದಕಂಭಗಳಿಂದ ರಾಜ್ಯಾಭಿ- ಷೇಕ ಮಾಡುವದು ವರ್‍ಷಕ್ಕೆ. ಸ್ವಚ್ಛಂದನಿ ರ್‍ಬಂಧ ಸ್ವಾತಂತ್ರ್ಯದೊಳು ನೀರೆ ತೀಡುವಳು ಸೀ- ಮ...

ಮೋತಿಲಾಲ್ ಕೈಮುತ್ತು ಭಾರತಿಯ ಪದಕಿತ್ತು ಸ್ವಾತಂತ್ರ್ಯದೊಡವೆಯಂ ಮಾಡಿ ತೇಜಮನಿತ್ತು ಪೋದನಾ ಸಾಹಸಿಗ ಸಗ್ಗಮಂ ಸಾರಿದನ್ ಸಾಧಿಸಿದ ರಾಜ್ಯಮನ್ ಕೆರ್ಚಾಳು ಕೊನೆಗರ್ದ ಸತ್ಯಾಸಿಧಾರೆಯಿಂ ಧರ್ಮಕವಚವನುಟ್ಟು ಭಾರತಿಯ ಬಿಡುಗಡೆಗೆ ವೀರಪಣಮಂ ತೊಟ್ಟು ಧಾವಿಸಿ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...